ETV Bharat / state

ಕೇಸರಿ ಬಾವುಟ ಕಿತ್ತು ಹಾಕಿದ್ರೆ ದೇಶದ್ರೋಹಿಗಳಾಗುತ್ತೀರಿ.. ಹೀಗಂತಾ ರೇಣುಕಾಚಾರ್ಯ ಹೇಳಿದರು..

author img

By

Published : Jan 21, 2020, 7:06 PM IST

ಕೆಲ ಮಸೀದಿಗಳಲ್ಲಿ ಶಸ್ತ್ರಾಸ್ತ್ರ ಶೇಖರಿಸುವ ಮೂಲಕ ಭಯೋತ್ಪಾದನೆಗೆ ಪ್ರೋತ್ಸಾಹಿಸಲಾಗುತ್ತಿದೆ. ಇದನ್ನು ನೋಡಿ ಸುಮ್ಮನಿರಬೇಕಾ ಎಂದು ಹೊನ್ನಾಳಿ ಬಿಜೆಪಿ ಶಾಸಕ ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

renuka-acharya-
renuka-acharya-

ದಾವಣಗೆರೆ: ದೇಶಾದ್ಯಂತ ಪೌರತ್ವ ಕಾಯ್ದೆ ತಿದ್ದುಪಡಿ ಕಿಚ್ಚು ಜೋರಾಗುತ್ತಿದೆ. ಮತ್ತೊಂದೆಡೆ ಈ ಕಾಯ್ದೆ ಪರ ಬಿಜೆಪಿ ಅಬ್ಬರವೂ ಇನ್ನೂ ನಿಂತಿರುವಂತೆ ಕಾಣ್ತಿಲ್ಲ. ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಆಯೋಜಿಸಿದ್ದ ಪೌರತ್ವ ಪರ ಕಾಯ್ದೆ ಪರ ಸಮಾವೇಶ ನಡೆಯಿತು. ಈ ವೇಳೆ ಮಾತಿನ ಭರಾಟೆಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಶಾಸಕ ರೇಣುಕಾಚಾರ್ಯ ಹೇಳ್ತಾರೆ.. ಕೇಸರಿ ಬಾವುಟ ಕಿತ್ತು ಹಾಕಿದ್ರೆ ದೇಶದ್ರೋಹಿಗಳಾಗ್ತಾರಂತೆ..

ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಅಭಿನಂದನೆ ಸಲ್ಲಿಸುವ ಈ ಸಮಾವೇಶದಲ್ಲಿ ಮಾತನಾಡಿದ ರೇಣುಕಾಚಾರ್ಯ, ಕೆಲ ಮಸೀದಿಗಳಲ್ಲಿ ಶಸ್ತ್ರಾಸ್ತ್ರ ಶೇಖರಿಸುವ ಮೂಲಕ ಭಯೋತ್ಪಾದನೆಗೆ ಪ್ರೋತ್ಸಾಹಿಸಲಾಗುತ್ತಿದೆ. ಇದನ್ನು ನೋಡಿ ಸುಮ್ಮನಿರಬೇಕಾ ಎಂದರು. ಕೇಸರಿಯ ಬಂಟಿಂಗ್ಸ್, ಫ್ಲೆಕ್ಸ್, ಫ್ಲ್ಯಾಗ್‌ಗಳನ್ನ ತೆರವುಗೊಳಿಸಬಾರದು. ಇದು ಸ್ವಾಭಿಮಾನದ ಸಂಕೇತ. ಹಿಂದೂ ಸಂಕೇತ. ಬಿಜೆಪಿಯ ಒಂದೇ ಒಂದು ಕೇಸರಿ ಬಾವುಟ ಬಿಚ್ಚಿದರೆ ದೇಶದ್ರೋಹಿಗಳಾಗುತ್ತೀರಿ ಎಂದು ಅಧಿಕಾರಿಗಳ ವಿರುದ್ಧ ಗರಂ ಆದರು.

ವಿಧಾನ ಪರಿಷತ್ ಸದಸ್ಯ ಎನ್‌.ರವಿಕುಮಾರ್ ಮಾತನಾಡಿ, ಸಿದ್ದರಾಮಯ್ಯ ಹೌದು ಹುಲಿಯಾ ಅಲ್ಲ, ಹೌದು ಸೋನಿಯಾ. ಹಾಗಾಗಿ, ರಾಜ್ಯದಲ್ಲಿ ಈ ಸಮಸ್ಯೆ ಸೃಷ್ಟಿಯಾಗಿದೆ. ಸೋನಿಯಾ ಅವರೂ ಸುಳ್ಳು ಹೇಳ್ತಾರೆ. ಸಿದ್ದರಾಮಯ್ಯನವರು ಸುಳ್ಳು ಹೇಳ್ತಾರೆ ಎಂದು ದೂರಿದರು.

Intro:KN_DVG_02_21_HONNALI_KICCHU_SCRIPT_7203307

REPORTER : YOGARAJ

ಹೊನ್ನಾಳಿಯಲ್ಲಿ ಪೌರತ್ವ ಪರ ಕಿಚ್ಚು ಹೊತ್ತಿಸಿದ ಕಾರ್ಯಕ್ರಮ... ಕೇಸರಿ ಬಾವುಟ ಕಿತ್ತು ಹಾಕಿದ್ರೆ ದೇಶದ್ರೋಹಿಗಳಾಗುತ್ತೀರಾ ಎಂದ ರೇಣುಕಾಚಾರ್ಯ...!

ದಾವಣಗೆರೆ : ದೇಶಾದ್ಯಂತ ಪೌರತ್ವ ಕಾಯ್ದೆ ತಿದ್ದುಪಡಿ ಕಿಚ್ಚು ಜೋರಾಗುತ್ತಿದೆ. ಮತ್ತೊಂದೆಡೆ ಈ ಕಾಯ್ದೆ ಪರವೂ ಬಿಜೆಪಿಯ ಅಬ್ಬರವೂ ಕಡಿಮೆಯಾಗಿಲ್ಲ. ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ
ಆಯೋಜಿಸಿದ್ದ ಪೌರತ್ವ ಪರ ಕುರಿತ ಕಾರ್ಯಕ್ರಮದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅಂಡ್ ಕಮಲ ಪಡೆ ರಣಕಹಳೆ ಮೊಳಗಿಸಿದೆ. ಮಾತ್ರವಲ್ಲ, ಕಾಂಗ್ರೆಸ್ ವಿರುದ್ಧ
ಟೀಕಾಪ್ರಹಾರ ನಡೆಸಿದೆ.

ಹೊನ್ನಾಳಿ ಪಟ್ಟಣದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಅಭಿನಂದನೆ ಸಲ್ಲಿಸುವ ಸಲುವಾಗಿ
ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಪೌರತ್ವ ಪರ ಬಿಜೆಪಿ ನಾಯಕರು ಬ್ಯಾಟಿಂಗ್ ಮಾಡಿದರು. ದೇಶಾದ್ಯಂತ ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಸಾಕಷ್ಟು ಪ್ರತಿಭಟನೆಗಳು
ನಡೆಯುತ್ತಿವೆ. ಮಂಗಳೂರಿನಲ್ಲಿ ಹಿಂಸಾಚಾರವೂ ನಡೆದಿದೆ. ಆದ್ರೆ, ಹೊನ್ನಾಳಿಯಲ್ಲಿ ಪೌರತ್ವ ಪರ ಕಿಚ್ಚು ಹಚ್ಚಿಸುವ ಕೆಲಸವನ್ನು ಬಿಜೆಪಿ ಪಡೆ ಮಾಡಿತು.

ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ತಮ್ಮ ಎಂದಿನ ಧಾಟಿಯಲ್ಲಿಯೇ ಮಾತನಾಡಿದರು. ಕೆಲ ಮಸೀದಿಗಳಲ್ಲಿ ಶಸ್ತ್ರಾಸ್ತ್ರ ಶೇಖರಿಸುವ ಮೂಲಕ ಭಯೋತ್ಪಾದನೆಗೆ ಪ್ರೋತ್ಸಾಹ
ನೀಡುವ ಕೆಲಸ ಮಾಡಲಾಗುತ್ತಿದೆ. ಇದನ್ನು ನೋಡಿಕೊಂಡು ಸುಮ್ಮನಿರಬೇಕಾ ಎಂದು ಗುಡುಗಿದರು. ಕೇಸರಿಯ ಬಂಟಿಂಗ್ಸ್, ಫ್ಲೆಕ್ಸ್, ಫ್ಲಾಗ್ ಅನ್ನು ತೆರವುಗೊಳಿಸಬಾರದು. ಇದು ಸ್ವಾಭಿಮಾನದ
ಸಂಕೇತ. ಹಿಂದೂ ಸಂಕೇತ. ಬಿಜೆಪಿಯ ಒಂದೇ ಒಂದು ಕೇಸರಿ ಬಾವುಟ ಬಿಚ್ಚಿದರೆ ದೇಶದ್ರೋಹಿಗಳಾಗುತ್ತೀರಾ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಬೈಟ್- ಎಂ. ಪಿ. ರೇಣುಕಾಚಾರ್ಯ, ಸಿಎಂ ರಾಜಕೀಯ ಕಾರ್ಯದರ್ಶಿ (ಬೈಟ್ -01, 01 a)

ಇನ್ನು ಸಂಸದ ಜಿ. ಎಂ. ಸಿದ್ದೇಶ್ವರ್, ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಸೇರಿದಂತೆ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ನಾಯಕರು ಪೌರತ್ವ ತಿದ್ದುಪಡಿ ಕಾಯ್ದೆ ಪರ ಮಾತನಾಡಿದರು.
ಕೇಂದ್ರ ಸರ್ಕಾರದ ಈ ಕಾಯ್ದೆ ಒಳ್ಳೆಯದು. ಆದ್ರೆ, ಕಾಂಗ್ರೆಸ್ ನವರು ವಿನಾಕಾರಣ ಆರೋಪ ಮಾಡುತ್ತಿದ್ದು, ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರವಿಕುಮಾರ್ ಅವರಂತೂ
ಸಿದ್ದರಾಮಯ್ಯ ಹೌದು ಹುಲಿಯಾ ಅಲ್ಲ, ಹೌದು ಸೋನಿಯಾ. ಹಾಗಾಗಿ, ರಾಜ್ಯದಲ್ಲಿ ಈ ಸಮಸ್ಯೆ ಸೃಷ್ಟಿಯಾಗಿದೆ. ಸೋನಿಯಾ ಅವರೂ ಸುಳ್ಳು ಹೇಳ್ತಾರೆ. ಸಿದ್ದರಾಮಯ್ಯನವರು ಸುಳ್ಳು ಹೇಳ್ತಾರೆ
ಎಂದು ದೂರಿದರು.

ಬೈಟ್- ರವಿಕುಮಾರ್, ವಿಧಾನ ಪರಿಷತ್ ಸದಸ್ಯ (ಬೈಟ್-02)

ಒಟ್ಟಿನಲ್ಲಿ ಪೌರತ್ವ ಕಾಯ್ದೆ ತಿದ್ದುಪಡಿ ಪರ ಕಾರ್ಯಕ್ರಮ ಹಮ್ಮಿಕೊಂಡಿದ್ದರೂ, ಇದು ಕಾಂಗ್ರೆಸ್ ನಾಯಕರ ವಿರುದ್ಧದ ವಾಗ್ದಾಳಿಗಷ್ಟೇ ಸೀಮಿತವಾಗಿತ್ತು. ಮಾತ್ರವಲ್ಲ, ಮುಂಬರುವ ದಿನಗಳಲ್ಲಿ
ಹೊನ್ನಾಳಿ ಹಾಗೂ ನ್ಯಾಮತಿ ಪಟ್ಟಣವನ್ನು ಕೇಸರಿಮಯವಾಗಿಸುವ ಪಣ ತೊಟ್ಟಿರುವುದಾಗಿ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಶಪಥ ಮಾಡಿದರು.

Body:KN_DVG_02_21_HONNALI_KICCHU_SCRIPT_7203307

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.