ದಾವಣಗೆರೆ: ದಲಿತರ ಕ್ಷೌರ ಮಾಡಲು ಕ್ಷೌರಿಕರು ಹಿಂದೇಟು ಹಾಕಿದ್ದಾರೆ ಎನ್ನಲಾದ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬೂದಿಹಾಳ್ ಗ್ರಾಮದಲ್ಲಿ ವರದಿಯಾಗಿದೆ. ಇದರಿಂದಾಗಿ ದಲಿತರು ಹೇರ್ ಕಟಿಂಗ್ ಮಾಡಿಸಿಕೊಳ್ಳಲು ತೊಂದರೆ ಅನುಭವಿಸುವಂತಾಗಿದೆ.
ಈ ಸಮಸ್ಯೆ ಬಗೆಹರಿಸಲು ಗ್ರಾಮಕ್ಕೆ ಪೊಲೀಸರು ಆಗಮಿಸಿದ್ದರು. ಕ್ಷೌರದಂಗಡಿ ಬಳಿ ತೆರಳಿದ ಮಲೇಬೆನ್ನೂರು ಪೊಲೀಸರು ದಲಿತರಿಗೂ ಕ್ಷೌರ ಮಾಡುವಂತೆ ತಾಕೀತು ಮಾಡಿದ್ದಾರೆ. ಆದ್ರೆ ದಲಿತರು ಕ್ಷೌರ ಮಾಡಿಸಿಕೊಳ್ಳಲು ತೆರಳಿದ್ರೆ, ವಾಪಸ್ ಕಳುಹಿಸಿದ್ದಾರೆ ಎನ್ನಲಾಗ್ತಿದೆ.
ಪಿಎಸ್ಐ ರವಿಕುಮಾರ ಸೇರಿದಂತೆ ಪ್ರಮುಖರು ಗ್ರಾಮಕ್ಕೆ ಭೇಟಿ ನೀಡಿ ಎಲ್ಲ ಸಮಾಜದ ಜನರ ಕ್ಷೌರ ಮಾಡುವಂತೆ ಕ್ಷೌರಿಕ ಕುಟುಂಬಗಳಿಗೆ ಎಚ್ಚರಿಕೆ ನೀಡಿದ್ದಾರೆ. ಗ್ರಾಮದಲ್ಲಿ ಎರಡು ಕ್ಷೌರದ ಅಂಗಡಿಗಳಿವೆ. ಓರ್ವ ಎಲ್ಲ ಸಮಾಜದವರ ಕ್ಷೌರ ಮಾಡುತ್ತಾನೆ. ಉಳಿದವರು ನಿರಾಕರಿಸುತ್ತಾರೆ ಎಂದು ಗ್ರಾಮದ ದಲಿತ ಕುಟುಂಬಗಳು ದೂರಿವೆ.
ಇದನ್ನೂ ಓದಿ: ದಲಿತರಿಂದ ದೇವಾಲಯ ಪ್ರವೇಶ, ಸವರ್ಣಿಯರಿಂದ ಸ್ವಾಗತ- ಈಟಿವಿ ಭಾರತ ಇಂಪ್ಯಾಕ್ಟ್