ETV Bharat / state

ಕೈ ಕಮಲ ಕಲಿಗಳಿಂದ ಅದ್ಧೂರಿ ಪ್ರಚಾರ, ಜಗಳೂರಿನಲ್ಲಿ ಕಾಂಗ್ರೆಸ್​ಗೆ ಬಂಡಾಯದ ಬಿಸಿ - ಈಟಿವಿ ಭಾರತ್ ಕನ್ನಡ ಸುದ್ದಿ

ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಕಾಂಗ್ರೆಸ್​ ಅಭ್ಯರ್ಥಿ ದೇವೇಂದ್ರಪ್ಪ ಅವರ ವಿರುದ್ಧ ಮಾಜಿ ಕಾಂಗ್ರೆಸ್​ ಶಾಸಕ ಹೆಚ್​ ಪಿ ರಾಜೇಶ್​ ಬಂಡಾಯದ ಬಾವುಟ ಹಾರಿಸಿ ನಾಮಪತ್ರ ಸಲ್ಲಿಕೆ ಮಾಡಿ ಮತಪ್ರಚಾರಕ್ಕಿಳಿದಿದ್ದಾರೆ.

ಕೈ ಕಮಲ ಕಲಿಗಳಿಂದ ಅದ್ಧೂರಿ ಪ್ರಚಾರ
ಕೈ ಕಮಲ ಕಲಿಗಳಿಂದ ಅದ್ಧೂರಿ ಪ್ರಚಾರ
author img

By

Published : Apr 23, 2023, 8:52 PM IST

ದಾವಣಗೆರೆ ಉತ್ತರ ಬಿಜೆಪಿ ಅಭ್ಯರ್ಥಿ ಲೋಕಿಕೆರೆ ನಾಗರಾಜ್

ದಾವಣಗೆರೆ : ಬೆಣ್ಣೆ ನಗರಿ ದಾವಣಗೆರೆಯಲ್ಲಿ ಕೈ ಕಮಲ ಕಲಿಗಳು ಅದ್ಧೂರಿ ಪ್ರಚಾರ ಮಾಡ್ತಿದ್ದಾರೆ. ನಾಮಪತ್ರ ಸಲ್ಲಿಕೆ ಬಳಿಕ ಮತ ಶಿಕಾರಿಗಾಗಿ ಫೀಲ್ಡ್​ಗೆ ಇಳಿದಿರುವ ಅಭ್ಯರ್ಥಿಗಳು ಕಾರ್ಯಕರ್ತರ ದಂಡುಕಟ್ಟಿಕೊಂಡು ಭರ್ಜರಿ ರೋಡ್ ಶೋ ಮಾಡುವ ಮೂಲಕ ಮತ ಬೇಟೆಗಿಳಿದಿದ್ದಾರೆ. ಅಲ್ಲದೆ ಟಿಕೆಟ್ ಘೋಷಣೆಯಾಗಿ ನಾಮಪತ್ರ ಸಲ್ಲಿಸಿದ್ರು ಕೂಡ ಜಗಳೂರು ಕಾಂಗ್ರೆಸ್​ನಲ್ಲಿ ಬಂಡಾಯದ ಹೊಗೆ ಆರುವಂತೆ ಕಾಣ್ತಿಲ್ಲ. ಮಾಜಿ‌ ಶಾಸಕ ಹೆಚ್ ಪಿ ರಾಜೇಶ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ಕೈ ಅಭ್ಯರ್ಥಿಗೆ ತಲೆ ಬಿಸಿಯಾಗಿ ಪರಿಣಮಿಸಿದೆ.

ದಾವಣಗೆರೆ ಕಾಂಗ್ರೆಸ್​ನ ಭದ್ರ ಕೋಟೆಯಾಗಿತ್ತು. 2018 ರಲ್ಲಿ ಬಿಜೆಪಿ ಕಾಂಗ್ರೆಸ್ ಭದ್ರಾಕೋಟೆಯನ್ನು ಭೇದಿಸಿ 07 ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಲ್ಲಿ ಪಾರುಪತ್ಯ ಸಾಧಿಸಿತ್ತು. ಆದರೆ 2023ರ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಹಿಡಿತ ಸಾಧಿಸಲು ಮುಂದಾಗಿದ್ದು, ಹೊಸಮುಖಗಳನ್ನು ಕಣಕ್ಕಿಳಿಸಿದೆ.

ಇದನ್ನೂ ಓದಿ: ಕಾಂಗ್ರೆಸ್ ತೆಕ್ಕೆಗೆ ಬಿಜೆಪಿ ಬಂಡಾಯ ಅಭ್ಯರ್ಥಿ: ಜಾರಕಿಹೊಳಿ ಸಮ್ಮುಖದಲ್ಲಿ ಕೈ ಸೇರ್ಪಡೆ

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಲೋಕಿಕೆರೆ ನಾಗರಾಜ್ ಅವರಿಗೆ ಟಿಕೆಟ್ ನೀಡಿದ್ದು, ಅವರು ಅಬ್ಬರದ ಪ್ರಚಾರಕ್ಕೆ ಧುಮುಕಿದ್ದಾರೆ. ಸಂಸದ ಜಿ ಎಂ ಸಿದ್ದೇಶ್ವರ್ ಅವರೊಂದಿಗೆ ಇಂದು ದಾವಣಗೆರೆ ನಗರದ ವಿನೋಬ ನಗರ ಹಾಗೂ ಯಲ್ಲಮ್ಮ ನಗರದಲ್ಲಿ ಬೃಹತ್ ರೋಡ್ ಶೋ ಮಾಡುವ ಮೂಲಕ ಕಾಂಗ್ರೆಸ್ ವಿರುದ್ಧ ಶಕ್ತಿ ಪ್ರದರ್ಶಿಸಿದರು. ಈ ಮೂಲಕ ಡಬಲ್ ಇಂಜಿನ್ ಸರ್ಕಾರದ ಅಭಿವೃದ್ಧಿ ಕೆಲಸಗಳ‌ ಮೇಲೆ ಮತಯಾಚಿಸಿದ್ರು. ಇದಲ್ಲದೆ ದಾವಣಗೆರೆ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ ಜೆ ಅಜಯ್ ಕುಮಾರ್ ಅವರು ಕೂಡ ಸಾಕಷ್ಟು ಪ್ರಚಾರದಲ್ಲಿ ತೊಡಗಿಸಿಕೊಂಡು ಮತ ಶಿಖಾರಿ ಮಾಡ್ತಿದ್ದಾರೆ.

ಇದನ್ನೂ ಓದಿ: ನನ್ನ ಕ್ಷೇತ್ರದಲ್ಲಿ ನಾನೇ ಆ್ಯಕ್ಟರ್​​​, ಡೈರೆಕ್ಟರ್​, ನನ್ನದೇ ಸಂಕಲನ: ಬಸನಗೌಡ ಪಾಟೀಲ್ ಯತ್ನಾಳ್

ಇದಲ್ಲದೆ ಜಗಳೂರಿನಲ್ಲಿ ಬಿಜೆಪಿ ಶಾಸಕ ಅಭ್ಯರ್ಥಿ ಎಸ್ ವಿ ರಾಮಚಂದ್ರಪ್ಪನವರು ಕೂಡ ಇಂದು ಜಗಳೂರು ತಾಲೂಕಿನ ಕಾನನಕಟ್ಟೆ, ಅಣಬೂರು, ಕಸವನಹಳ್ಳಿ ಕಡೆ ಪ್ರಚಾರ ಮಾಡಿದ್ರೆ ಇತ್ತ ಅವರ ಪತ್ನಿ ಇಂದಿರಾ ಅವರು ಕೂಡ ಜಟ್ಟಿನಕಟ್ಟೆ, ಬಾಲೇನಹಳ್ಳಿ, ಅರಸಪುರ ತೌಡೂರು, ಯರಬಳ್ಳಿ ಗ್ರಾಮಗಳಲ್ಲಿ ಪತಿ ಎಸ್ ವಿ ರಾಮಚಂದ್ರ ಅವರ ಪರ ಮತಯಾಚಿಸಿದ್ರು.

ಕಾಂಗ್ರೆಸ್​ಗೆ ಬಂಡಾಯದ ಬಿಸಿತುಪ್ಪ.. ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಬಂಡಾಯದ ಬಿಸಿ ಕಾಂಗ್ರೆಸ್ ಅಭ್ಯರ್ಥಿಗೆ ತಟ್ಟಿದೆ. ಕಾಂಗ್ರೆಸ್ ಅಭ್ಯರ್ಥಿ ದೇವೆಂದ್ರಪ್ಪ ಅವರ ವಿರುದ್ಧ ಮಾಜಿ ಕಾಂಗ್ರೆಸ್ ಶಾಸಕ ಹೆಚ್ ಪಿ ರಾಜೇಶ್ ಬಂಡಾಯದ ಬಾವುಟ ಹಾರಿಸಿ ನಾಮಪತ್ರ ಸಲ್ಲಿಕೆ ಮಾಡಿ ಮತಪ್ರಚಾರಕ್ಕಿಳಿದಿದ್ದಾರೆ. ಇಂದು ಬಂಡಾಯ ಅಭ್ಯರ್ಥಿ ಹೆಚ್ ಪಿ ರಾಜೇಶ್ ಅವರು ಜಗಳೂರು ತಾಲೂಕಿನ ಕಲ್ಲದೇವರಪುರ, ಬೆಣ್ಣಿಹಳ್ಳಿ, ಚಿಕ್ಕಪ್ಪನಹಟ್ಟಿ ಹೀಗೆ ಸಾಕಷ್ಟು ಗ್ರಾಮಗಳಿಗೆ ಭೇಟಿ ನೀಡಿ ಸಾವಿರಾರು ಕಾರ್ಯಕರ್ತರೊಂದಿಗೆ ಮತ ಯಾಚಿಸಿದ್ರು.‌

ಇದನ್ನೂ ಓದಿ : ಸಿದ್ದರಾಮಯ್ಯ ಹೇಳಿಕೆಯಿಂದ ನೋವಾಗಿದೆ : ಶಾಸಕ ಅರವಿಂದ ಬೆಲ್ಲದ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.