ಹರಿಹರ: ಗೃಹ ರಕ್ಷಕ ದಳ ಘಟಕದ ಕಚೇರಿಗೆ ನಿವೇಶನ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಎಸ್. ರಾಮಪ್ಪ ಭರವಸೆ ನೀಡಿದರು.
ಹರಿಹರ ಘಟಕದ ಗೃಹರಕ್ಷಕ ಕಚೇರಿಗೆ ಭೇಟಿ ನೀಡಿದ ಶಾಸಕರು ಕಟ್ಟಡ ಪರಿಶೀಲನೆ ನಡೆಸಿದರು. ಇತ್ತೀಚೆಗೆ ಸುರಿದ ಮಳೆಯಿಂದಾಗಿ ನಗರದ ಗೃಹ ರಕ್ಷಕ ದಳದ ಕಚೇರಿಯ ಒಳಭಾಗದಲ್ಲಿ ನೀರು ನಿಂತು ಗೋಡೆಗಳು ಕುಸಿಯುವ ಹಂತಕ್ಕೆ ತಲುಪಿವೆ.
ಇದೇ ಸಮಯಕ್ಕೆ ಸ್ಥಳಕ್ಕಾಗಮಿಸಿದ ಪೌರಾಯುಕ್ತೆ ಎಸ್. ಲಕ್ಷ್ಮೀ ಅವರೊಂದಿಗೆ ಶಾಸಕ ಎಸ್. ರಾಮಪ್ಪ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಶಾಸಕರ ಸಲಹೆಗೆ ಸ್ಪಂದಿಸಿದ ಲಕ್ಷ್ಮೀ ಅವರು ಮುಂಬರುವ ದಿನಗಳಲ್ಲಿ ನಗರಸಭೆಯ ಮಾಸಿಕ ಸಭೆಯಲ್ಲಿ ಚರ್ಚಿಸಿ ಅನುಮೋದನೆ ಪಡೆದು ಇಲ್ಲವೇ ನೇರವಾಗಿ ಜಿಲ್ಲಾಧಿಕಾರಿಗಳಿಗೆ ತಿಳಿಸುವುದಾಗಿ ಹೇಳಿದರು.
ಈ ವೇಳೆ ಮಾಜಿ ಸ್ಟಾಫ್ ಆಫೀಸರ್ ಎಸ್. ಅನಂತರಾಮ ಶೆಟ್ರು, ಘಟಕಾಧಿಕಾರಿ ವೈ. ಆರ್. ಗುರುನಾಥಪ್ಪ, ಸಾವಿತ್ರಮ್ಮ, ಬಸವನಗೌಡ, ವೆಂಕಟೇಶ್, ಎಸ್.ಕೇಶವ, ಗೃಹ ರಕ್ಷಕ ದಳದ ಸಿಬ್ಬಂದಿ ಉಪಸ್ಥಿತರಿದ್ದರು.