ETV Bharat / state

ಕಾಲು ದಾರಿಗಾಗಿ ಗ್ರಾಮಸ್ಥರು, ವ್ಯಕ್ತಿ ನಡುವೆ ಜಗಳ: ಸ್ಥಳಕ್ಕೆ ತಹಶೀಲ್ದಾರ್​ ಭೇಟಿ, ಪರಿಶೀಲನೆ

author img

By

Published : Jan 27, 2022, 4:51 PM IST

ವ್ಯಕ್ತಿಯೊಬ್ಬರು ಸರ್ಕಾರಿ ಜಾಗದಲ್ಲಿ ಕಾಲುವೆಗೆ ಹೋಗದಂತೆ ಬೇಲಿ ಹಾಕಿ, ಗ್ರಾಮಸ್ಥರಿಗೆ ತೊಂದರೆ ನೀಡಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.

police who intervened and calmed the situation
ಕಾಲು ದಾರಿಗಾಗಿ ಗ್ರಾಮಸ್ಥರು, ಮಾಲೀಕನ ನಡುವೆ ಜಗಳ

ದಾವಣಗೆರೆ: ವ್ಯಕ್ತಿಯೊಬ್ಬರು ಸಣ್ಣ ನೀರಾವರಿ ಇಲಾಖೆಗೆ ಸೇರಿದ ಜಾಗ ತಮ್ಮದೆಂದು ಹೇಳಿಕೊಂಡು, ಕಾಲುವೆಗೆ ಹೋಗದಂತೆ ಬೇಲಿ ಹಾಕಿರುವ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ದೇವರಬೆಳಕೆರೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಕಾಲು ದಾರಿಗಾಗಿ ಗ್ರಾಮಸ್ಥರು, ವ್ಯಕ್ತಿ ನಡುವೆ ಜಗಳ

ಸುಮಾರು 40 ವರ್ಷದಿಂದ ಜನರು ಈ ಜಾಗದ ಮೂಲಕವೇ ಕಾಲುವೆಗೆ ಹೋಗುತ್ತಿದ್ದರು. ಕಾಲುವೆ ಪಕ್ಕವೇ ರಾಜಶೇಖರ್ ಎಂಬುವರ ಏಳು ಗುಂಟೆ ಜಮೀನು ಇದೆ. ಈ ಜಾಗದ ಮೂಲಕ ಜನ ಬಟ್ಟೆ ಮತ್ತು ಇನ್ನಿತರ ಕೆಲಸಕ್ಕಾಗಿ ಕಾಲು ದಾರಿ ಮೂಲಕ ಕಾಲುವೆಗೆ ಹೋಗುತ್ತಿದ್ದರು. ಆದ್ರೆ ಇದೀಗ ರಾಜಶೇಖರ್​ ಈ ಜಾಗ ತಮಗೆ ಸೇರಿದ್ದು ಎಂದು ಹೇಳಿ, ಯಾರೂ ಕೂಡ ಈ ದಾರಿಯನ್ನು ಉಪಯೋಗಿಸುವಂತಿಲ್ಲವೆಂದು ದಾರಿಗೆ ಬೇಲಿ ಹಾಕಿದ್ದಾರೆ. ಅಷ್ಟೇ ಅಲ್ಲದೇ ಸಗಣಿ ಮಿಶ್ರಿತ ತಿಪ್ಪೆ ಹಾಕಿ ಯಾರೂ ಸಂಚರಿಸಿದಂತೆ ಮಾಡಿದ್ದಾರೆ.

ಇದನ್ನೂ ಓದಿ: ರಾಷ್ಟ್ರಪತಿಗಳಿಂದ ಗಣರಾಜ್ಯೋತ್ಸಕ್ಕೆ ಆಹ್ವಾನಿತನಾಗಿದ್ದ ವ್ಯಕ್ತಿ ಕಾಡಾನೆ ದಾಳಿಗೆ ಬಲಿ!

ಈ ವಿಷಯವಾಗಿ ರಾಜಶೇಖರ್​ ಹಾಗೂ ಗ್ರಾಮಸ್ಥರ ನಡುವೆ ಜಗಳವಾಗಿದೆ. ಬಳಿಕ ಗ್ರಾಮಸ್ಥರು ಹರಿಹರ ಗ್ರಾಮಾಂತರ ಠಾಣೆ ಮೆಟ್ಟಿಲೇರಿದ್ದು, ಪೊಲೀಸರು ಮಧ್ಯ ಪ್ರವೇಶ ಮಾಡಿ ಪರಿಸ್ಥಿತಿ ಶಾಂತಗೊಳಿಸಿದ್ದಾರೆ. ಅಲ್ಲದೇ ಇಂದು ಹರಿಹರ ತಹಶೀಲ್ದಾರ್​​ ರಾಮಚಂದ್ರಪ್ಪ ಅವರು ಗ್ರಾಮಕ್ಕೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಬಳಿಕ ರಾಜಶೇಖರ್ ಅವರನ್ನು ಕರೆದು ಮಾಹಿತಿ ಪಡೆದು, ಅತಿಕ್ರಮಣ ಮಾಡಿದ ಸ್ಥಳದಲ್ಲಿ‌ ಬೇಲಿ ಹಾಕದಂತೆ ತಾಕೀತು‌ ಮಾಡಿದ್ದಾರೆ.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.