ದಾವಣಗೆರೆ: ಹರಿಹರ ಸಮೀಪದ ಕರೂರುನಲ್ಲಿರುವ ಎಜು ಏಷ್ಯಾ ಪಬ್ಲಿಕ್ ಶಾಲೆಯ ಮಕ್ಕಳಿಗೆ ರಸ್ತೆ ನಿಯಮ ಮತ್ತು ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಗ್ರಾಮಾಂತರ ಠಾಣೆ ಪಿಎಸ್ಐ ರವಿಕುಮಾರ್ ನಡೆಸಿದರು.
ಸುಮಾರು 200 ಕ್ಕೂ ಹೆಚ್ಚು ಶಾಲಾ ಬಾಲಕ, ಬಾಲಕಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಸ್ತೆಯಲ್ಲಿ ನಾವು ನಡೆದಾಡುವಾಗ ಸುರಕ್ಷತೆಯ ದೃಷ್ಟಿಯಿಂದ ಎಡ ಭಾಗದಲ್ಲಿಯೇ ಓಡಾಡಬೇಕು. ರಸ್ತೆಯನ್ನು ದಾಟುವಾಗ ಎರಡು ಕಡೆ ಅಕ್ಕ-ಪಕ್ಕ ವಾಹನಗಳು ಬರುತ್ತಿವೆಯೇ ಎಂಬುದನ್ನು ಗಮನಿಸಿ ದಾಟಬೇಕು ಎಂದು ಪಿಎಸ್ಐ ಕಿವಿಮಾತು ಹೇಳಿದ್ರು.
ದ್ವಿಚಕ್ರ ವಾಹನ ಸವಾರಿ ಮಾಡುವ ಸಂದರ್ಭದಲ್ಲಿ ಹೆಲ್ಮೆಟ್ ಧರಿಸಬೇಕು. ಇದರಿಂದ ಅವಘಡಗಳೇನಾದರೂ ಸಂಭವಿಸಿದರೆ ತಲೆಗೆ ರಕ್ಷಣೆ ದೊರೆಯುತ್ತದೆ ಎಂದು ಮಾಹಿತಿ ನೀಡಿದರು.
ಎಎಸ್ಐ ವಿಜಯ್, ಸಿಬ್ಬಂದಿಗಳಾದ ಸಿ.ಎಂ. ನಾಗರಾಜ್, ಸತೀಶ್, ಜಿ.ಎಚ್. ಉತ್ತೇಶ್, ಎಜು ಏಷ್ಯಾ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ವಾಣಿ ಗುಜ್ಜಾರ್, ಶ್ರೀಮತಿ ಸಹನಾ ಸಂತೋಷ್, ರಾಘವೇಂದ್ರ ಆಚಾರ್, ಶ್ರೀಮತಿ ಶೀಲಾವತಿ, ಶ್ರೀಮತಿ ಪವಿತ್ರಾ, ಶೈನ್ ಕ್ಲೆಮೆಂಟ್, ಜ್ಯೋತಿ, ಸೀಮಾ ಮುಂತಾದವರು ಈ ಅರಿವಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.