ದಾವಣಗೆರೆ: ಒಂದೆಡೆ ಜನರು ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದರೆ, ಮತ್ತೊಂದೆಡೆ ಪೌರ ಕಾರ್ಮಿಕರು ಎಂದಿನಂತೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಕೊರೊನಾ ವೈರಸ್ ಸೋಂಕು ಹರಡುವ ಭೀತಿ ನಡುವೆಯೂ ಪೌರ ಕಾರ್ಮಿಕರು ನಗರದ ವಿವಿಧಡೆ ತ್ಯಾಜ್ಯ ವಿಲೇವಾರಿ ಕೆಲಸ ಮಾಡುತ್ತಿದ್ದಾರೆ. ಜನರು ಹಬ್ಬದ ಮೂಡ್ನಲ್ಲಿದ್ದರೆ, ಕಾರ್ಮಿಕರು ಮಾತ್ರ ನಗರದ ಸ್ವಚ್ಛತಾ ಕಾರ್ಯ ಮುಂದುವರಿಸಿದ್ದಾರೆ.
ಗುಂಪು ಗುಂಪಾಗಿ ಸೇರಬಾರದು ಎಂಬ ಆದೇಶವಿದ್ದರೂ ಪಕ್ಕ ಪಕ್ಕದಲ್ಲಿಯೇ ಇದ್ದು ಹತ್ತಕ್ಕೂ ಹೆಚ್ಚು ಮಂದಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಕಾರ್ಮಿಕರಿಗೆ ಸೂಚನೆ ನೀಡಬೇಕು. ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕಾರ್ಮಿಕರಿಗೆ ತಿಳಿ ಹೇಳಬೇಕು. ಸೂಕ್ತ ಮೆಡಿಕಲ್ ಕಿಟ್ ಒದಗಿಸಬೇಕು. ಇಲ್ಲದಿದ್ದರೆ ಅಪಾಯ ಗ್ಯಾರಂಟಿ. ಜಿಲ್ಲಾಡಳಿತ ಕೂಡಲೇ ಈ ಬಗ್ಗೆ ಗಮನ ಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.