ದಾವಣಗೆರೆ: ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಇಲ್ಲಿನ ಜಿಲ್ಲಾ ಜೈಲಿನೊಳಗೆ ಪ್ರವೇಶಿಸಲು ಪೊಲೀಸರು ಅನುಮತಿ ನಿರಾಕರಿಸಿದ್ದು ವಾಗ್ವಾದಕ್ಕೆ ಕಾರಣವಾಯಿತು.
ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದಲ್ಲಿ ನಡೆದಿರುವ ಎರಡು ಕೋಮಿನ ಗಲಾಟೆಯಲ್ಲಿ ಬಂಧಿತರಾಗಿ ಜೈಲು ಪಾಲಾಗಿರುವ ಯುವಕರನ್ನು ಭೇಟಿ ಮಾಡಲು ಮುತಾಲಿಕ್ ಆಗಮಿಸಿದ್ದರು.
ಜೈಲಿನೊಳಗೆ ಪ್ರವೇಶ ನಿರಾಕರಿಸಿದ ಕಾರಣ ಸಿಟ್ಟಾದ ಮುತಾಲಿಕ್ ಜೈಲಿನ ದ್ವಾರದಲ್ಲಿ ಕೂತು ಧರಣಿ ಮಾಡಲು ಮುಂದಾದರು. ಬಳಿಕ ಇಬ್ಬರನ್ನು ಮಾತ್ರ ಒಳಬಿಡಲು ಪೊಲೀಸರು ಅನುಮತಿ ಕೊಟ್ಟರು. ಅದರಂತೆ ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಮಣಿ ಸರ್ಕರ್ ಹಾಗು ಪ್ರಮೋದ್ ಮುತಾಲಿಕ್ ಜೈಲಿನೊಳಗೆ ಹೋಗಿ, ಯುವಕರಿಗೆ ಧೈರ್ಯ ತುಂಬಿ ಹೊರ ಬಂದರು.