ದಾವಣಗೆರೆ: ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನ ಪರ ಸಂದೇಶ ಶೇರ್ ಮಾಡಿದ್ದ ಆರೋಪದ ಮೇರೆಗೆ ಬಸವನನಗರ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ನನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಆದೇಶ ಹೊರಡಿಸಿದ್ದಾರೆ.
ಸನಾವುಲ್ಲಾ ಸಸ್ಪೆಂಡ್ ಆದ ಪೊಲೀಸ್ ಸಿಬ್ಬಂದಿ. ಮಾತ್ರವಲ್ಲ, ಡಿವೈಎಸ್ಪಿ ಅವರು ಈ ಪ್ರಕರಣದ ಬಗ್ಗೆ ತನಿಖೆ ನಡೆಸಲಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.
ಇದನ್ನು ಓದಿ: ದಾವಣಗೆರೆ: ಪೊಲೀಸ್ ಸಿಬ್ಬಂದಿ ವಿರುದ್ಧ ಪಾಕ್ ಪರ ಆಡಿಯೋ ಶೇರ್ ಮಾಡಿದ ಆರೋಪ
"ಪವರ್ ಆಫ್ ಪಾಕಿಸ್ತಾನ" ಎನ್ನುವ ಪೇಜ್ ಹಾಗೂ 2008 ರ "ಬ್ಯಾಚ್ ಪೊಲೀಸ್ ಟೀಮ್' ಎನ್ನುವ ಗ್ರೂಪ್ನಲ್ಲಿ ಪಾಕಿಸ್ತಾನ ಪರವಾದ ಸಂದೇಶ ಹರಿಬಿಟ್ಟಿದ್ದ ಸನಾವುಲ್ಲಾ, 2014 ರಲ್ಲಿ ಇದೇ ರೀತಿ ದೇಶವಿರೋಧಿ ಪೋಸ್ಟ್ ಹಾಕಿ ಸಸ್ಪೆಂಡ್ ಆಗಿದ್ದರು.