ETV Bharat / state

ನೀವು ರಾಜ್ಯದ ಆರೋಗ್ಯ ಸಚಿವರಾಗ್ಬೇಕು: ಶಾಸಕ ರೇಣುಕಾಚಾರ್ಯರ ಕಾರ್ಯ ಕೊಂಡಾಡಿದ ವ್ಯಕ್ತಿ

ಹೊನ್ನಾಳಿಯ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್​ನಿಂದ ಮನೆಗೆ ಮರಳುವಾಗ ಕೋವಿಡ್​ನಿಂದ ಗುಣಮುಖರಾದವರು ಶಾಸಕ ರೇಣುಕಾಚಾರ್ಯರ ಕಾರ್ಯವನ್ನು ಕೊಂಡಾಡಿದರು.

People Thanked Renukacharya
ಶಾಸಕ ರೇಣುಕಾಚಾರ್ಯ ಆರೋಗ್ಯ ಸಚಿವರಾಗಬೇಕು ಎಂದು ವ್ಯಕ್ತಿ
author img

By

Published : Jun 19, 2021, 11:55 AM IST

Updated : Jun 19, 2021, 12:16 PM IST

ದಾವಣಗೆರೆ: ಹೊನ್ನಾಳಿ ಶಾಸಕ ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು ರಾಜ್ಯದ ಆರೋಗ್ಯ ಸಚಿವರಾಗಬೇಕೆಂದು ಕೋವಿಡ್​ನಿಂದ ಗುಣಮುಖನಾದ ವ್ಯಕ್ತಿಯೊಬ್ಬ ಆಶಿಸಿದ್ದಾನೆ.

ಹೊನ್ನಾಳಿ ತಾಲೂಕಿನ ಅರಬಗಟ್ಟೆ ಕೋವಿಡ್​ ಸೆಂಟರ್​ನಲ್ಲಿ ಚಿಕಿತ್ಸೆ ಪಡೆದು ಗುಣಮುಖನಾಗಿ ಮನೆಗೆ ಮರಳುವ ವೇಳೆ ರೇಣುಕಾಚಾರ್ಯ ಅವರೇ ನೀವು ಆರೋಗ್ಯ ಸಚಿವರಾಗಬೇಕು. ನಿಮ್ಮ ಸೇವೆ ಇಡೀ ರಾಜ್ಯಕ್ಕೆ ಸಿಗಬೇಕು ಎಂದಿದ್ದಾನೆ.

ನೀವು ಕೋವಿಡ್ ಸೆಂಟರ್​ನಲ್ಲಿ ಇದ್ದುಕೊಂಡು ನಮಗೆ ಧೈರ್ಯ ತುಂಬಿದ್ದೀರಿ. ನಿಮ್ಮನ್ನು ಆರೋಗ್ಯ ಸಚಿವರನ್ನಾಗಿ ಮಾಡಿದರೆ ರಾಜ್ಯಕ್ಕೆ ಒಳ್ಳೆಯದಾಗುತ್ತದೆ ಎಂದು ಕೋವಿಡ್ ಗೆದ್ದ ವ್ಯಕ್ತಿ ಶಾಸಕರ ಕಾರ್ಯವನ್ನು ಕೊಂಡಾಡಿದ್ದಾನೆ. ಕೇವಲ ಒಬ್ಬ ವ್ಯಕ್ತಿ ಮಾತ್ರವಲ್ಲದೆ ಕೋವಿಡ್​ ಕೇರ್ ಸೆಂಟರ್​ನಿಂದ ಮನೆಗೆ ಮರಳುವ ವೇಳೆ ಮಹಿಳೆಯರು ಕೂಡ ರೇಣುಕಾಚಾರ್ಯ ಅವರಿಗೆ ಧನ್ಯವಾದ ಹೇಳಿದರು.

ಶಾಸಕ ರೇಣುಕಾಚಾರ್ಯ ಆರೋಗ್ಯ ಸಚಿವರಾಗಬೇಕು ಎಂದ ವ್ಯಕ್ತಿ

ಆ್ಯಂಬುಲೆನ್ಸ್ ಹತ್ತಿ ಮನೆಗೆ ತೆರಳುವಾಗ ಮಹಿಳೆಯರು ಕಣ್ಣೀರು ಹಾಕಿದರು. ಕೋವಿಡ್​ನಿಂದ ಗುಣಮುಖರಾದ ಎಲ್ಲರನ್ನು ಶಾಸಕ ರೇಣುಕಾಚಾರ್ಯ ಅವರೇ ಮುಂದೆ ನಿಂತು ಆ್ಯಂಬುಲೆನ್ಸ್​ಗಳಲ್ಲಿ ಮನೆಗೆ ಕಳುಹಿಸಿಕೊಟ್ಟರು.

ಓದಿ : ಕೋವಿಡ್​ ಸೆಂಟರ್​ನಲ್ಲಿ ಡ್ಯಾನ್ಸ್​, ಹೋಮ ಮಾಡಿದ ಶಾಸಕ ರೇಣುಕಾಚಾರ್ಯ ವಿರುದ್ಧ ದೂರು

Last Updated : Jun 19, 2021, 12:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.