ETV Bharat / state

ದಾವಣಗೆರೆ: ದಲಿತರ ಮನೆಯಲ್ಲಿ ಪೇಜಾವರ ಶ್ರೀಗೆ ಪಾದಪೂಜೆ

ದಾವಣಗೆರೆಗೆ ಭೇಟಿ ನೀಡಿದ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ದಲಿತರ ಮನೆಯಲ್ಲಿ ಪಾದಪೂಜೆ ಸ್ವೀಕರಿಸಿದರು.

pejavara-vishwaprasanna-theertha-swamiji-spoke-at-davanagere
ದಾವಣಗೆರೆ : ದಲಿತರ ಮನೆಯಲ್ಲಿ ಪಾದಪೂಜೆ ಸ್ವೀಕರಿಸಿದ ಪೇಜಾವರ ಶ್ರೀ
author img

By

Published : Dec 13, 2022, 4:07 PM IST

ದಾವಣಗೆರೆ: ಹಿರಿಯ‌ ಪೇಜಾವರ ಶ್ರೀಯವರ ಕಾಲದಲ್ಲಿ ಆಚರಣೆಯಲ್ಲಿದ್ದ ಕೆಳವರ್ಗದವರ ಮನೆಗಳಲ್ಲಿ ಪಾದಪೂಜೆ ಸ್ವೀಕರಿಸುವ ಆಚರಣೆಯನ್ನು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮುಂದುವರೆಸಿದ್ದಾರೆ. ಇಲ್ಲಿನ ಜಯನಗರದ ನಿವಾಸಿ ಹಾಗು ದಲಿತ ಸಮುದಾಯದ ಮುಖಂಡ ಆಲೂರು ನಿಂಗರಾಜ್‌ ನಿವಾಸದಲ್ಲಿ ಶ್ರೀಗಳು ಪಾದಪೂಜೆ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಪೇಜಾವರ ಶ್ರೀಗಳೊಂದಿಗೆ ಆದಿಜಾಂಬವ ಮಠದ ಷಡಕ್ಷರಮುನಿ ಸ್ವಾಮೀಜಿ ಉಪಸ್ಥಿತರಿದ್ದರು.

ಬಳಿಕ ಮಾತನಾಡಿದ ಶ್ರೀಗಳು, ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ‌ ನಿರ್ಮಾಣವಾಗುತ್ತಿದೆ. ಆದರೆ ರಾಮರಾಜ್ಯ ಆಗಬೇಕಾಗಿರುವುದು ಒಂದು ಬಾಕಿ ಇದೆ ಎಂದರು. ಮಂದಿರ ನಿರ್ಮಾಣಕ್ಕಾಗಿ ನಾವು ತಲೆತಲಾಂತರಗಳಿಂದ ಶ್ರಮಿಸಿದ್ದೇವೆ. ಇದೀಗ ಕನಸು ನನಸಾಗುವ ಸಂದರ್ಭ ಬಂದಿದೆ. ಇನ್ನೊಂದು ವರ್ಷ ಅಂದರೆ, 2024ರ ಜನವರಿ ವೇಳೆಗೆ ಶ್ರೀರಾಮನ ಭವ್ಯ ಮಂದಿರದಲ್ಲಿ ರಾಮನ ಪ್ರಾಣ ಪ್ರತಿಷ್ಠೆ ಆಗಲಿದೆ‌ ಎಂದರು.

ದಲಿತ ಮುಖಂಡ ಆಲೂರು ನಿಂಗರಾಜ್ ಮಾತನಾಡಿ, ಪೇಜಾವರ ಶ್ರೀಗಳು ನಮ್ಮ ನಿವಾಸಕ್ಕೆ ಆಗಮಿಸಿ ಪಾದಪೂಜೆ ಸ್ವೀಕರಿಸಿರುವುದು ತುಂಬಾ ಸಂತೋಷವಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ದಕ್ಷಿಣ ಕನ್ನಡ - ಉಡುಪಿ ಜಿಲ್ಲೆ ಉಗ್ರರ ಮೂಲ ಟಾರ್ಗೆಟ್: ಕಾಣಿಯೂರು ಶ್ರೀ ಹೇಳಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.