ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆ ಸ್ಮಾರ್ಟ್ ಸಿಟಿಯಾಗಿ ವರ್ಷಗಳೇ ಕಳೆಯುತ್ತಿದ್ದರೂ ಗುಂಡಿಗಳಿಗೆ ಮಾತ್ರ ಬರ ಇಲ್ಲದಂತಾಗಿದೆ. ಮಳೆಯಿಂದಾಗಿ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳಿಂದ ಬೆಂಗಳೂರು ಸುದ್ದಿಯಾಗಿತ್ತು.
ಆದರೆ ಇದೀಗ ದಾವಣಗೆರೆ ನಗರ ಕೂಡು ರಸ್ತೆ ಗುಂಡಿ ವ್ಯಾಪ್ತಿಯಲ್ಲಿ ಸೇರುತ್ತಿದೆ. ಇಲ್ಲೊಂದು ತಂಡ ರಸ್ತೆ ಗುಂಡಿಗಳಿಂದ ರೋಸಿ ಹೋಗಿ ವಾಹನ ಸವಾರರಿಗೆ ನೆರವಾಗಿದ್ದಾರೆ. ರಸ್ತೆ ಗುಂಡಿಗಳಿಂದ ರೋಸಿ ಹೋಗಿರುವ ವಾಹನ ಸವಾರರು ಗುಂಡಿ ಮುಚ್ಚಿ ಸಾರ್ವಜನಿಕರಿಗೆ ನೆರವಾಗಿದ್ದಾರೆ.
ದಾವಣಗೆರೆ ನಗರದ ಪ್ರಮುಖ ರಸ್ತೆಗಳಲ್ಲಿ ಹೆಚ್ಚಿರುವ ಗುಂಡಿಗಳನ್ನು ಮುಚ್ಚುವ ಕೆಲಸವನ್ನು ಯುವಕರ ತಂಡ ಮಾಡುತ್ತಿದೆ. ಸ್ವಂತ ಖರ್ಚಿನಲ್ಲಿ ಸಿಮೆಂಟ್ ಕಾಂಕ್ರೀಟ್ನಿಂದ ಗುಂಡಿ ಯುವಕರು ಮುಚ್ಚುತ್ತಿದ್ದಾರೆ.
ಶ್ರೀಕಾಂತ್, ದೀಪಕ್ ಜೈನ್ ಸೇರಿದಂತೆ ಹತ್ತು ಜನ ಯುವಕರ ತಂಡ ಸಾರ್ವಜನಿಕರಿಗೆ ಸಹಾಯವಾಗುವ ಕೆಲಸ ಮಾಡ್ತಿದ್ದಾರೆ. ಇನ್ನು ಈ ಯುವಕರ ತಂಡ ಗುಂಡಿ ಮುಚ್ಚುವಂತೆ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಮನವಿ ನೀಡಿದ್ರು ಯಾವುದೇ ಪ್ರಯೋಜನ ಆಗಿರಲಿಲ್ಲ. ಇದರಿಂದ ಎಚ್ಚೆತ್ತುಕೊಂಡ ಯುವಕರ ತಂಡ ತಾವೇ ಗುಂಡಿ ಮುಚ್ಚಿ ಜನಸಾಮಾನ್ಯರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಇನ್ನು ರಾತ್ರಿ ವೇಳೆಯಲಿ ಸಂಚಾರ ಕಡಿಮೆ ಇದ್ದ ಕಾರಣ ನಗರದಾದ್ಯಂತ ಇಪ್ಪತ್ತಕ್ಕೂ ಹೆಚ್ಚು ರಸ್ತೆಗಳ ಗುಂಡಿ ಮುಚ್ಚುತ್ತಿದ್ದಾರೆ. ಇನ್ನು ಪಾಲಿಕೆ ಮಾಡುವ ಕೆಲಸವನ್ನು ಯುವಕರು ಮಾಡಿ ತೋರಿಸಿದ್ದಾರೆ.
ಓದಿ: 1. 85 ಕೋಟಿ ಮೌಲ್ಯದ ಅಕ್ರಮ ಮರಳು ಸಾಗಾಣಿಕೆ: ಗಂಗಾವತಿಯಲ್ಲಿ 8 ಮಹಿಳೆಯರು 36 ರೈತರ ವಿರುದ್ಧ ದೂರು