ದಾವಣಗೆರೆ : 2ಎ ಮೀಸಲಾತಿಗಾಗಿ ಹಮ್ಮಿಕೊಂಡಿರುವ ಪಂಚಮಸಾಲಿ ಸಮುದಾಯದ ಪಾದಯಾತ್ರೆಯಲ್ಲಿ ಅಸಮಾಧಾನ ಸ್ಫೋಟಗೊಂಡಿದೆ.
ದೊಡ್ಡ ಬಾತಿ ಗ್ರಾಮದಲ್ಲಿ ಆಯೋಜನೆಯಾಗಿದ್ದ ಬಹಿರಂಗ ಪಂಚಮಸಾಲಿ ಮೀಸಲಾತಿಗಾಗಿ ಪಾದಯಾತ್ರೆಯ ಸಮಾವೇಶಕ್ಕೆ ಹರಿಹರ ಮಾಜಿ ಶಾಸಕ ಹೆಚ್ ಎಸ್ ಶಿವಶಂಕರ್ ಆಗಮಿಸಿದ್ದರು. ಈ ವೇಳೆ ವೇದಿಕೆಯಿಂದ ಪಂಚಮಸಾಲಿ ಮುಖಂಡ ಹೆಚ್ ಎಸ್ ನಾಗರಾಜ್ ಕೆಳಗಿಳಿದರು.
ಈ ವೇಳೆ ಮಾಜಿ ಶಾಸಕ ವಿಜಯನಂದ ಕಾಶಪ್ಪನವರ್ ಮಧ್ಯ ಪ್ರವೇಶಿಸಿ ತಿಳಿ ಹೇಳಿದರೂ ಸಹ ಮನವೊಲಿಸುವ ಯತ್ನ ವಿಫಲವಾಯಿತು. ನಿನ್ನೆ ಹರಿಹರದಲ್ಲಿ ನಡೆದ ಕಾರ್ಯಕ್ರಮದಿಂದ ಅಂತರ ಕಾಯ್ದುಕೊಂಡಿದ್ದ ಹೆಚ್ ಎಸ್ ನಾಗರಾಜ್ ಬಾತಿ ಕಾರ್ಯಕ್ರಮಕ್ಕೆ ಮಾಜಿ ಶಾಸಕ ಶಿವಶಂಕರ್ ಆಗಮಿಸಿದ್ದಕ್ಕೆ ಅಸಮಾಧಾನಗೊಂಡು ವೇದಿಕೆಯಿಂದ ಕೆಳಗಿಳಿದಿದ್ದರು. ಹೆಚ್ ಎಸ್ ನಾಗರಾಜ್‌ರನ್ನು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರು ಮತ್ತೆ ಸಮಾಧಾನಪಡಿಸಿ ವೇದಿಕೆಗೆ ಕರೆ ತರುವಲ್ಲಿ ಯಶಸ್ವಿಯಾದರು.