ದಾವಣಗೆರೆ: ಓಮಿನಿ ಕೆರೆಗೆ ಬಿದ್ದು ಒಬ್ಬ ವ್ಯಕ್ತಿ ದುರಂತ ಸಾವನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹಳ್ಳೋರಕಟ್ಟೆ ಬಳಿ ನಡೆದ ಘಟನೆ ನಡೆದಿದೆ. ಈ ಘಟನೆಯಲ್ಲಿ ಚನ್ನಗಿರಿ ತಾಲೂಕಿನ ಯಲೋದಹಳ್ಳಿಯ ಬಸವರಾಜಪ್ಪ ಮೃತ ದುರ್ದೈವಿ. ಶನಿವಾರ ಸಂಜೆ ಯಲೋದಹಳ್ಳಿ ಗ್ರಾಮದ ಮಾರ್ಗದ ಮೂಲಕ ಚಿರಡೋಣಿ ಗ್ರಾಮಕ್ಕೆ ಓಮಿನಿಯಲ್ಲಿ ತೆರಳುತ್ತಿದ್ದ ಬಸವರಾಜಪ್ಪ ವಾಹನ ಚಾಲನೆ ನಿಯಂತ್ರಣ ತಪ್ಪಿ ಹಳ್ಳೋರಕಟ್ಟೇ ಬಳಿ ಇರುವ ಕೆರೆಗೆ ಓಮಿನಿ ಕಾರು ಪಲ್ಟಿಹೊಡೆದಿದೆ. ಪರಿಣಾಮ ಕೆರೆಗೆ ಬಿದ್ದ ಓಮಿನಿಯಲ್ಲೇ ಬಸವರಾಜಪ್ಪ ಉಸಿರುಗಟ್ಟಿ ಸಾವನಪ್ಪಿದ್ದಾರೆ ಎಂದು ಪೋಲಿಸ್ ಮೂಲಗಳಿಂದ ತಿಳಿದು ಬಂದಿದೆ.
ಮೊಬೈಲ್ ಸ್ವಿಚ್ಡ್ ಆಫ್, ಹುಡುಕಿದಾಗ ಪ್ರಕರಣ ಬೆಳಕಿಗೆ: ರಾತ್ರಿ ಕರೆ ಮಾಡಿದಾಗ ಬಸವರಾಜಪ್ಪ ಮೊಬೈಲ್ ಸ್ವಿಚ್ಡ್ ಆಫ್ ಆಗಿದ್ದು, ಮೊಬೈಲ್ ಸ್ವಿಚ್ಡ್ ಆಫ್ ಆದ ಹಿನ್ನೆಲೆ ಭಯಗೊಂಡು ಸಂಬಂಧಿಕರಿಗೆ ಕರೆ ಮಾಡಿ ಕುಟುಂಬಸ್ಥರು ವಿಚಾರಿಸಿದ್ದಾರೆ. ಇನ್ನೂ ಬಸವರಾಜಪ್ಪ ಎಲ್ಲೂ ಪತ್ತೆಯಾಗದ ಕಾರಣ ಕುಟುಂಬಸ್ಥರು ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು.
ದೂರು ನೀಡಿದ ಬೆನ್ನಲ್ಲೇ ಪೋಲಿಸರು ಕೂಡ ಬಸವರಾಜಪ್ಪನಿಗಾಗಿ ದಾಗಿನಕಟ್ಟೆ-ಯಲ್ಲೋದಹಳ್ಳಿ ಗ್ರಾಮದ ಮಾರ್ಗ ಮಧ್ಯೆ ಹುಡುಕಾಟ ನಡೆಸಿದರು. ಈ ವೇಳೆ, ಹಳ್ಳೋರಕಟ್ಟೆ ಬಳಿಯಿರುವ ಕೆರೆಯ ತಡೆ ಗೋಡೆ ಒಡೆದಿರುವುದು ಗಮನಕ್ಕೆ ಬಂದಿದೆ. ಸಂಶಯಗೊಂಡ ಕುಟುಂಬಸ್ಥರು ತಕ್ಷಣ ಬಸವಾಪಟ್ಟಣ ಪೊಲೀಸ್ ಠಾಣೆಗೆ ಕುಟುಂಬಸ್ಥರಿಂದ ಮಾಹಿತಿ ನೀಡಿದರು. ಬಳಿಕ ಕೆರೆಯಲ್ಲಿ ಓಮಿನಿ ಬಿದ್ದಿರುವುದನ್ನು ಖಚಿತ ಪಡಿಸಿಕೊಂಡ ಪೊಲೀಸರು ಸ್ಥಳಕ್ಕಾಗಮಿಸಿ ಜೆಸಿಬಿ ಸಹಾಯದಿಂದ ಓಮಿನ ಹೊರತೆಗೆಯಲಾಗಿದೆ. ಓಮಿನಿ ಕಾರಿನಲ್ಲಿ ಬಸವರಾಜಪ್ಪನ ಮೃತದೇಹ ಪತ್ತೆಯಾಗಿದ್ದು, ಈ ಕುರಿತು ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಕ್ಕುಪತ್ರಕ್ಕಾಗಿ ಶಾಸಕರ ಮನೆ ಮುಂದೆ ಪ್ರತಿಭಟನೆ: ದಾವಣಗೆರೆ ಜಿಲ್ಲೆಯ ಜಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ವಿಜಯನಗರ ತಾಲೂಕಿನ ಕಡೇಕಲ್ ತಾಂಡಾ, ಪುಣಬಘಟ್ಟ ಗ್ರಾಮದ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ, ಸಾಗುವಳಿ ಚೀಟಿ, ಪಟ್ಟಾ ನೀಡಬೇಕು ಎಂದು ಒತ್ತಾಯಿಸಿ ಇಂದು ಜಗಳೂರು ಶಾಸಕ ಎಸ್. ವಿ. ರಾಮಚಂದ್ರ ನಿವಾಸದ ಮುಂದೆ ದಲಿತ ಸಂಘಟನೆಗಳ ಒಕ್ಕೂಟದಿಂದ ಮೌನವಾಗಿ ಪ್ರತಿಭಟನೆ ನಡೆಸಿದರು.
ದಾವಣಗೆರೆ ನಗರದ ಕೆಬಿ ಬಡಾವಣೆಯಲ್ಲಿರುವ ನಿವಾಸದ ಎದುರು ಕರ್ನಾಟಕ ದಲಿತ ಸಂಘಟನೆಗಳ ಪದಾಧಿಕಾರಿಗಳು ಮನೆಯಲ್ಲಿ ಶಾಸಕರಿಲ್ಲದ ಕಾರಣ ಸಂಬಂಧ ಪಟ್ಟವರಿಗೆ ಮನವಿ ಸಲ್ಲಿಸಿದರು. ಗ್ರಾಮದ ಸರ್ವೇ ನಂಬರ್ 3/ಎ ಅಲ್ಲಿ ಕಳೆದ ಹಲವಾರು ವರ್ಷಗಳಿಂದ ಅನೇಕ ಕುಟುಂಬದವರು ಸಾಗುವಳಿ ಮಾಡುತ್ತಿದ್ದಾರೆ.
ಅವರಲ್ಲಿ ಕೆಲವರಿಗೆ ಈಗಾಗಲೇ ಹಕ್ಕುಪತ್ರ, ಸಾಗುವಳಿ ಚೀಟಿ, ಪಟ್ಟಾ ನೀಡಲಾಗಿದ್ದು, ಉಳ್ಳವರಿಗೇ ಮಾತ್ರ ನೀಡಲಾಗಿದೆ. ಬಡವರಿಗೆ ನೀಡಿಲ್ಲ. ಶಾಸಕ ರಾಮಚಂದ್ರ ಅವರು ಕೂಡಲೇ ಈ ಬಗ್ಗೆ ಗಮನಹರಿಸಿ ಸಂಬಂಧಪಟ್ಟವರಿಗೆ ಕೂಡಲೇ ಹಕ್ಕು ಪತ್ರ ನೀಡಬೇಕು ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಸಿ. ಬಸವರಾಜ್ ಶಾಸಕರಿಗೆ ಒತ್ತಾಯಿಸಿದರು.
75 ವರ್ಷಗಳಿಂದ ಮಾಡ್ತಿದ್ದಾರೆ ಸಾಗುವಳಿ : ಕಳೆದ 75 ವರ್ಷಗಳಿಂದ ಕಡೇಕಲ್ ತಾಂಡಾ, ಪುಣಬಘಟ್ಟ ಗ್ರಾಮದ ನೂರಕ್ಕು ಹೆಚ್ಚು ಗ್ರಾಮಸ್ಥರು ರೈತರು ಜಮೀನಿನಲ್ಲಿ ಸಾಗುವಳಿ ಮಾಡುತ್ತಾ ಬಂದಿದ್ದಾರೆ. ಅದ್ದರಿಂದ ಅಲ್ಲಿ ಉಳ್ಳವರಿಗೆ ಮಾತ್ರ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ, ಸಾಗುವಳಿ ಚೀಟಿ, ಪಟ್ಟಾ ಶಾಸಕ ಎಸ್ ವಿ ರಾಮಚಂದ್ರ ಅವರು ನೀಡಲಾಗಿದೆ.
ಇನ್ನೂ ಉಳಿದವರಿಗೂ ಹಕ್ಕುಪತ್ರ, ಸಾಗುವಳಿ ಚೀಟಿ, ಪಟ್ಟಾ ನೀಡಬೇಕೆಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಯಿತು. ಈಗಾಗಲೇ ಬೆಳೆ ಬೆಳೆಯಲು ಬೋರ್ ವೆಲ್ ಕೊರೆಸಿದ್ದು, ರೈತರು ತಲೆಮೇಲೆ ಕೈ ಹೊತ್ತು ಕೂರವ ಪರಿಸ್ಥಿತಿ ನಿರ್ಮಾಣ ಆಗಿದೆ. ಇದರಿಂದ ಶಾಸಕರ ಮನೆ ಮುಂದೆ ಮೌನವಾಗಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಇದನ್ನೂ ಓದಿ :ರಾಯಚೂರು: ಚರಂಡಿ ಗುಂಡಿಗೆ ಬಿದ್ದು ಇಬ್ಬರು ಬಾಲಕರು ಸಾವು