ದಾವಣಗೆರೆ: ರಸ್ತೆ ಅಪಘಾತ ಪ್ರಕರಣದಲ್ಲಿ ಕೋರ್ಟ್ ಪರಿಹಾರ ನೀಡಲು ಆದೇಶಿಸಿದ್ದರೂ ಕ್ಯಾರೆ ಎನ್ನದ ಕೆಎಸ್ಆರ್ಟಿಸಿ ಸಂಸ್ಥೆಗೆ ಪರಿಹಾರದ ಮೊತ್ತದ ಜೊತೆಗೆ ಬಡ್ಡಿ ಸಮೇತ ನೀಡುವಂತೆ ಆದೇಶಿಸಿ ಬಸ್ ಜಪ್ತಿ ಮಾಡುವಂತೆ ಆದೇಶಿಸಿದೆ.
ಅಪಘಾತವಾಗಿದ್ದ ಪಕೀರಪ್ಪ ಸಿ.ಮಾಳಿಯವರಿಗೆ ಈ ಹಿಂದೆಯೇ 3.87.500 ರೂ. ಪರಿಹಾರ ನೀಡುವಂತೆ ಸಿವಿಲ್ ನ್ಯಾಯಾಲಯ ಆದೇಶ ನೀಡಿತ್ತು. ಆದರೆ ಪರಿಹಾರ ನೀಡದ ಹಿನ್ನಲೆಯಲ್ಲಿ ಕೆಎಸ್ಆರ್ಟಿಸಿ ಸಂಸ್ಥೆಗೆ ನ್ಯಾಯಾದೀಶರು ದಂಡ ವಿಧಿಸಿದ್ದಲ್ಲದೆ ಬಸ್ನ ಜಪ್ತಿಗೆ ಆದೇಶಿಸಿದ್ದಾರೆ.
ಎನ್.ಡಬ್ಲೂ.ಆರ್.ಟಿ.ಸಿ ರಾಣೆಬೆನ್ನೂರು ವಿಭಾಗದ ಬಸ್ಸ್ ಅನ್ನು ಜಪ್ತಿ ಮಾಡಿ ಕಕ್ಷಿದಾರ ಪಕೀರಪ್ಪ.ಸಿ.ಮಾಳಿರವರಿಗೆ ಬಡ್ಡಿ ಸಮೇತ ಒಟ್ಟು 4.78.225 ರೂ. ಪರಿಹಾರ ನೀಡುವಂತೆ ಹರಿಹರದ ಹಿರಿಯ ಸಿವಿಲ್ ನ್ಯಾಯಾಲಯ ಆದೇಶ ಮಾಡಿದೆ. ಇನ್ನು ಬುಧವಾರ ಹರಿಹರದ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಬಸ್ಸಅನ್ನು ಜಪ್ತಿ ಮಾಡಲಾಯಿತು
ಏನಿದು ಪ್ರಕರಣ?
2015 ರಲ್ಲಿ ಕುಮಾರ ಪಟ್ಟಣಂ ನಿವಾಸಿಯಾದ ಪಕೀರಪ್ಪನಿಗೆ ಹರಿಹರದ ನಿಯೋ ಮೆಡಿಕಲ್ಸ್ ಹತ್ತಿರ ಕೆಎಸ್ಆರ್ಟಿಸಿ ಬಸ್ನಿಂದ ಅಪಘಾತವಾಗಿತ್ತು. ಗಾಯಗೊಂಡಿದ್ದ ಇವರು ಪರಿಹಾರಕ್ಕಾಗಿ ಕೇಸ್ ದಾಖಾಲಿಸಿದ್ದರು. ವಿಚಾರಣೆ ನಡೆಸಿದ ಹರಿಹರ ಹಿರಿಯ ಸಿವಿಲ್ ನ್ಯಾಯಾಲಯ 27/03/2018 ರಂದು ಕಕ್ಷಿದಾರ ಪಕೀರಪ್ಪ.ಸಿ.ಮಾಳಿಯವರಿಗೆ ಪರಿಹಾರವಾಗಿ 3.87.500 ರೂ. ನೀಡುವಂತೆ ಅದೇಶ ಮಾಡಿತ್ತು. ಆದರೆ, ಎನ್.ಡಬ್ಲೂ.ಆರ್.ಟಿ.ಸಿ ರಾಣೆಬೆನ್ನೂರು ವಿಭಾಗ ಪರಿಹಾರ ನೀಡಿರಲಿಲ್ಲ. ಇದೀಗ ನ್ಯಾಯಾದೀಶರು ದಂಡದ ರೂಪದಲ್ಲಿ ಬಡ್ಡಿ ಸೇರಿ ಒಟ್ಟು 4.78.225 ರೂ. ನೀಡುವಂತೆ ಆಜ್ಞೆ ಹೊರಡಿಸಿದ್ದು ಬಸ್‌ನ್ನು ಜಪ್ತಿ ಮಾಡಲು ಆದೇಶಿಸಿದೆ.