ದಾವಣಗೆರೆ : ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಪ್ರತಿ ದಿನ 450ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣ ಬೆಳಕಿಗೆ ಬರುತ್ತಿವೆ.
ನಗರದಲ್ಲಿ ಸೋಂಕಿತರಿಗೆ ಪೌಷ್ಟಿಕ ಆಹಾರದ ಕೊರತೆ ಎದುರಾಗಿರುವುದರಿಂದ ಮಹಾನಗರ ಪಾಲಿಕೆ ಮೇಯರ್ ಅವರು ವೈದ್ಯರ ಸಲಹೆ ಮೇರೆಗೆ ಸೋಂಕಿತರ ಮನೆಗೆ ಪೌಷ್ಟಿಕ ಆಹಾರವನ್ನು ಮನೆಗೆ ನೀಡುತ್ತಿದ್ದಾರೆ.
ಆಹಾರ ತಯಾರಿಸಲು ದಾನಿಗಳ ಕೊಡುಗೆ ಅಪಾರ : ತರಕಾರಿ, ದಿನಸಿ, ಅಕ್ಕಿ, ಬೇಳೆ ಕಾಳುಗಳನ್ನು ದಾನಿಗಳು ತಂದು ಕೊಡುತ್ತಿದ್ದು, ಇದರೊಂದಿಗೆ ದಾವಣಗೆರೆಯ ತರಳಬಾಳು ಸೇವಾ ಸಮಿತಿ ಹಾಗೂ ಶಿವಸೈನ್ಯ, ಬಿ ಎಸ್ ಚನ್ನಬಸಪ್ಪ ಅಂಡ್ ಸನ್ಸ್ ಅವರುಗಳಿಂದ ಬೆಳಗ್ಗಿನ ಉಪಹಾರದ ವ್ಯವಸ್ಥೆ, ಮಧ್ಯಾಹ್ನ ಮತ್ತು ರಾತ್ರಿ 800 ಕೊರೊನಾ ಸೋಂಕಿತರಿಗೆ ಚಪಾತಿ, ರೊಟ್ಟಿ, ಪೌಷ್ಠಿಕ ಆಹಾರದ ಕಾಳುಗಳನ್ನು ಉಚಿತವಾಗಿ ನೀಡಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ ಯಾರು ಸಹ ಹಸಿವಿನಿಂದ ಸಾವಿನ್ನಪ್ಪಬಾರದು ಎಂಬ ಉದ್ದೇಶದಿಂದ ಈ ಕೋವಿಡ್ ಮುಗಿಯುವವರೆಗೂ ಈ ಮೂರು ಸೇವಾ ಸಮಿತಿಯವರು ಪ್ರತಿದಿನ ಮೂರು ಹೊತ್ತು 800 ಸೋಂಕಿತರಿಗೆ ಉಚಿತ ಊಟದ ವ್ಯವಸ್ಥೆ ಮಾಡುತ್ತೇವೆಂದು ಒಪ್ಪಿಕೊಂಡಿವೆಯಂತೆ.
ಆಹಾರ ಪಡೆಯಲು ಏನ್ಮಾಡ್ಬೇಕು ಗೊತ್ತಾ?: ಮನೆ ವಿಳಾಸವನ್ನು 9945977433 ದೂರವಾಣಿ ಸಂಖ್ಯೆಗೆ ಕರೆ ಮಾಡಿ ನೊಂದಣಿ ಮಾಡಿದರೆ ಸಾಕು ಹೋಮ್ ಐಸ್ಯೂಲೆಷನ್ನಲ್ಲಿರುವವರ ಕುಟುಂಬಕ್ಕೆ ಈ ಸಂಸ್ಥೆಗಳು ಆಹಾರವನ್ನು ಒದಗಿಸಲಿವೆ.
ಈಗಾಗಲೇ ಈ ಕಾರ್ಯಕ್ರಮವನ್ನು ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿರುವ ಸೋಂಕಿತರಿಗೆ ಆಹಾರ ಒದಗಿಸುವ ಮೂಲಕ ಮೇಯರ್ ಎಸ್ ಟಿ ವೀರೇಶ್ ರವರು ಆರಂಭಿಸಿದ್ದು, ಸಹಾಯದ ಹಸ್ತ ಚಾಚಿವೆ.
ಆಹಾರ ಬೇಕಾದವರು ಎಷ್ಟು ಗಂಟೆಗೆ ಆಹಾರ ನೊಂದಣಿ ಮಾಡ್ಬೇಕು? : ದಾವಣಗೆರೆ ಕೆಲ ಸಂಸ್ಥೆಗಳು ಉಚಿತವಾಗಿ ಆಹಾರವನ್ನು ಮನೆ ಬಾಗಿಲಿಗೆ ನೀಡಲು ಆರಂಭಿಸಿವೆ. ಇದರಿಂದ ಆಹಾರದ ಅವಶ್ಯಕತೆ ಇರುವವರು ಬೆಳಗ್ಗೆಯ ಉಪಹಾರವನ್ನು ಬೆಳಗ್ಗೆ 09 ಗಂಟೆಯೊಳಗೆ, ಮಧ್ಯಾಹ್ನದ ಊಟಕ್ಕಾಗಿ ಬೆಳಗ್ಗೆ 11 ಹಾಗೂ ರಾತ್ರಿಯ ಊಟ ಅವಶ್ಯಕತೆ ಇರುವವರು ಸಂಜೆ 06 ಗಂಟೆಯೊಳಗೆ ದೂರವಾಣಿ ಕರೆಗೆ ಕರೆ ಮಾಡುವ ಮೂಲಕ ನೊಂದಣಿ ಮಾಡ್ಬೇಕಾಗಿದೆ.
ಓದಿ: ರೋಗಿಗಳಿಗೆ ಮೋಸ ಮಾಡಿದ ವೈದ್ಯ ಅಂದರ್.. ಎರಡು ಪ್ರತ್ಯೇಕ ಪ್ರಕರಣದಲ್ಲಿ ಒಟ್ಟು ನಾಲ್ವರ ಬಂಧನ..