ಹರಿಹರ : ದೇಶವೇ ಲಾಕ್‌ಡೌನ್ ಆಗಿದ್ರೂ ಕೂಡ ಹರಿಹರದ ಜನ ಮಾತ್ರ ಆದೇಶ ಗಾಳಿಗೆ ತೂರಿ ಸಾಮಾಜಿಕ ಅಂತರವನ್ನು ಕಾಪಾಡದೇ ರಾಜಾರೋಷವಾಗಿ ವ್ಯಾಪಾರ-ವಹಿವಾಟು ನಡೆಸುತ್ತಿದ್ದಾರೆ.
ದೇಶವೇ ಲಾಕ್‌ಡೌನ್ ಆಗಿದೆ. ಆದರೆ, ನಗರದಲ್ಲಿನ ಪ್ಲಂಬಿಂಗ್, ಎಲೆಕ್ಟ್ರಿಕ್, ಬೇಕರಿ, ಆಟೋಮೊಬೈಲ್ ಇತರೆ ವಸ್ತುಗಳ ಅಂಗಡಿಗಳು ತೆರೆದು ತಮ್ಮ ಕಾರ್ಯಗಳನ್ನು ಮಾಡುತ್ತಿವೆ. ಕಿರಾಣಿ ಅಂಗಡಿಗಳಲ್ಲಿ ಸಾರ್ವಜನಿಕರು ಸಾಮಾಜಿಕ ಅಂತರ ಆದೇಶ ಪಾಲಿಸದೇ ಮುಗಿಬಿದ್ದು ದಿನಸಿ ಸಾಮಾನುಗಳನ್ನು ಖರೀದಿಸುತ್ತಿದ್ದಾರೆ. ನಗರದಲ್ಲಿನ ಅಂಗಡಿಗಳನ್ನ ತೆರೆದು ಸಾರ್ವಜನಿಕರು ಮುಗಿಬಿದ್ದರೂ ಕೂಡ ಯಾವೊಬ್ಬ ಅಧಿಕಾರಿಯೂ ಕೂಡ ಪ್ರಶ್ನಿಸದೇ ಮೂಕ ಪ್ರೇಕ್ಷಕರಾಗಿದ್ದಾರೆ.
ಅಧಿಕಾರಿಗಳು ಮತ್ತು ಪೊಲೀಸರ ಭಯದಿಂದ ಬಹುತೇಕ ಅಂಗಡಿಗಳು ಮುಚ್ಚಲಾಗಿದೆ. ಆದರೆ, ರಾಜಕೀಯ ಬಲ ಹಾಗೂ ಹಣಬಲ ಇರುವವರು ಅಂಗಡಿಗಳ ಒಂದು ಡೋರ್‌ಗಳನ್ನು ತೆಗೆದುಕೊಂಡು ನಿಯಮ ಮೀರಿ ಗ್ರಾಹಕರಿಗೆ ವಸ್ತುಗಳನ್ನು ನೀಡುತ್ತಿರುವುದನ್ನು ನೋಡಿದ ಜನ ತಮಗೊಂದು ನ್ಯಾಯ, ಅವರಿಗೊಂದು ನ್ಯಾಯವೇ ಎಂದು ಪ್ರಶ್ನಿಸುತ್ತಿದ್ದಾರೆ.