ETV Bharat / state

ದಾವಣಗೆರೆ: ಸಚಿವರಿಗಾಗಿ ಕಾದು ಸುಸ್ತಾದ ನರೇಗಾ ಕಾರ್ಮಿಕರು; ಅಧಿಕಾರಿಗಳ ವಿರುದ್ಧ ಆಕ್ರೋಶ - ನರೇಗಾ ಕೂಲಿ ಕಾರ್ಮಿಕರು

Davanagere NREGA laborers problems: ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರ ಬರುವಿಕೆಯ ಹಿನ್ನೆಲೆಯಲ್ಲಿ ಸ್ಥಳೀಯ ಅಧಿಕಾರಿಗಳು ಬೆಳಿಗ್ಗೆಯಿಂದ ಸಂಜೆಯವರೆಗೆ ಸಿದ್ದಮ್ಮನಹಳ್ಳಿಯಲ್ಲಿ ಊಟ, ನೀರು ನೀಡದೇ ನರೇಗಾ ಕೂಲಿ ಕಾರ್ಮಿಕರಿಂದ ಕೆಲಸ ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Narega laborers
ಸಚಿವರಿಗಾಗಿ ಕಾದು ಸುಸ್ತಾದ ನರೇಗಾ ಕೂಲಿ ಕಾರ್ಮಿಕರು
author img

By ETV Bharat Karnataka Team

Published : Nov 22, 2023, 9:37 AM IST

ಸಚಿವರಿಗಾಗಿ ಕಾದು ಸುಸ್ತಾದ ನರೇಗಾ ಕೂಲಿ ಕಾರ್ಮಿಕರು

ದಾವಣಗೆರೆ: ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ ಅವರು ಜಗಳೂರು ಪ್ರವಾಸ ಕೈಗೊಂಡು ನಿನ್ನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗಿಯಾಗಿದ್ದರು. ಈ ಸಭೆಗೆ ಹಾಜರಾಗುವ ಮುನ್ನ ತಾಲೂಕಿನ ದೊಣ್ಣೆಹಳ್ಳಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಬರುವ ಸಿದ್ದಮ್ಮನಹಳ್ಳಿಯಲ್ಲಿ ನರೇಗಾ ಕೂಲಿ ಕಾರ್ಮಿಕರನ್ನು ಭೇಟಿಯಾಗಿ ಅವರು ಚರ್ಚೆ ನಡೆಸಬೇಕಿತ್ತು. ಆದರೆ, ಸಚಿವರು ಆಗಮಿಸದ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದ ಸಂಜೆಯತನಕ ಕಾದು ಸುಸ್ತಾದ ಕಾರ್ಮಿಕರು ಬಳಿಕ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಕೂಲಿ ಕಾರ್ಮಿಕ ಮಂಜಣ್ಣ, "ನಮಗೆ ಸರಿಯಾಗಿ ಕೂಲಿ ಕೊಡುವುದಿಲ್ಲ. ನಾವು ಹೇಗೆ ಜೀವನ ಮಾಡಬೇಕು?. ಇಂದು ಸಚಿವರು ಬರ್ತಾರೆಂದು ಬೆಳಿಗ್ಗೆಯಿಂದ ಕಾಯಿಸಿದ್ದಾರೆ. ಊಟ, ನೀರಿನ ವ್ಯವಸ್ಥೆಯನ್ನೂ ಮಾಡಿಲ್ಲ. ವೃದ್ಧರೇ ಹೆಚ್ಚು ಕೆಲಸಕ್ಕೆ ಬಂದಿದ್ದೇವೆ. ಏನಾದರೂ ಹೆಚ್ಚು ಕಡಿಮೆ ಆದರೆ ಏನೂ ಮಾಡುವುದು?. ಸರ್ಕಾರ ಬಡವರಿಗೆ ಅಂತಾ ಏನೂ ಮಾಡಿಲ್ಲ, ಶ್ರೀಮಂತರಿಗೆ ಅನುಕೂಲ ಮಾಡಿಕೊಟ್ಟಿದೆ. ಊಟ, ನೀರಿಲ್ಲದೆ ಕೆಲಸ ಮಾಡುವ ವೇಳೆ ಸಮಸ್ಯೆಯಾದರೆ ಯಾರಿಗೆ ಹೇಳುವುದು?, ಇಲ್ಲಿ ವೈದ್ಯರು ಕೂಡಾ ಇಲ್ಲ" ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ನರೇಗಾ ಯೋಜನೆಯಲ್ಲಿ ಮಾನವ ದಿನಗಳನ್ನ ಹೆಚ್ಚಿಸಲು ಕೇಂದ್ರಕ್ಕೆ ಮನವಿ: ಡಿಸಿಎಂ ಡಿ ಕೆ ಶಿವಕುಮಾರ್

ಮತ್ತೊಬ್ಬ ಕೂಲಿ ಕಾರ್ಮಿಕರಾದ ಗೌರಮ್ಮ ಮಾತನಾಡಿ , "12 ಗಂಟೆಯಿಂದ ಕಾಯುತ್ತಿದ್ದೇವೆ. ಊಟದ ವ್ಯವಸ್ಥೆ ಇಲ್ಲ, ಕೆಲಸ ಹೇಗೆ ಮಾಡುವುದು?. ಬೇರೆ ನಾಲ್ಕೈದು ಊರಿಂದ ಕೂಲಿ ಕಾರ್ಮಿಕರು ಬಂದಿದ್ದಾರೆ. ಅವರ ಪರಿಸ್ಥಿತಿ ಹೇಳತೀರದು. ನಾಲ್ಕು ಗಂಟೆಯಿಂದಾದ್ರೂ ಉಪವಾಸ ಇದ್ದೇವೆ. ಸಮಯಕ್ಕೆ ಸರಿಯಾಗಿ ಸಚಿವರು ಬಂದಿದ್ದರೆ ಸರಿಯಾಗುತ್ತಿತ್ತು. ವಯಸ್ಸಾದ ಕೂಲಿ ಕಾರ್ಮಿಕರಿದ್ದಾರೆ. ಅಧಿಕಾರಿಗಳು ನಮ್ಮ ಕೂಲಿ ಹೆಚ್ಚಿ,ಬೇಕು" ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಗುಡ್ಡಗಾಡು ಪ್ರದೇಶದಲ್ಲಿ 25 ಸಾವಿರ ಗಿಡ ನೆಟ್ಟ ಗಟ್ಟಿಗಿತ್ತಿ.. ದಾವಣಗೆರೆಯ ಮಹಿಳೆಯಿಂದ ಮುಂದುವರಿದ ಪರಿಸರ ಸೇವೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.