ETV Bharat / state

ಮುರುಘಾ ಶರಣರ ಗದ್ದುಗೆಗೆ ಭೇಟಿ ಕೊಟ್ಟು ಆಶೀರ್ವಾದ ಪಡೆದ ಶಿವಮೂರ್ತಿ ಮುರುಘಾ ಶರಣರು

ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು ದಾವಣಗೆರೆಯ ಶಿವಯೋಗಿ ಮಠಕ್ಕೆ ಭೇಟಿ ನೀಡಿದ್ದಾರೆ.

ಮುರುಘಾ ಶರಣರ ಗದ್ದುಗೆಗೆ ಭೇಟಿ ಕೊಟ್ಟ ಶಿವಮೂರ್ತಿ ಮುರುಘಾ ಶರಣರು

author img

By ETV Bharat Karnataka Team

Published : Nov 16, 2023, 4:57 PM IST

Updated : Nov 16, 2023, 6:38 PM IST

ಮುರುಘಾ ಶರಣರ ಗದ್ದುಗೆಗೆ ಶ್ರೀಗಳ ಭೇಟಿ

ದಾವಣಗೆರೆ: ಪೋಕ್ಸೊ ಪ್ರಕರಣದಲ್ಲಿ ಜೈಲು ಸೇರಿದ್ದ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು ಸದ್ಯ ಚಿತ್ರದುರ್ಗ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಚಿತ್ರದುರ್ಗ ಮಠಕ್ಕೆ ಹೋಗಲು ಕೋರ್ಟ್ ನಿರ್ಬಂಧ ಹೇರಿದ ಹಿನ್ನೆಲೆ ಜೈಲಿನಿಂದ ಹೊರಬಂದ ಅವರು, ನೇರವಾಗಿ ದಾವಣಗೆರೆಯ ಶಿವಯೋಗಿ ಮಂದಿರಕ್ಕೆ ತೆರಳಿ ಮುರುಘಾ ಶರಣರ ಗದ್ದುಗೆಗೆ ಭೇಟಿ ಕೊಟ್ಟು ಆಶೀರ್ವಾದ ಪಡೆದರು.

ಮುರುಘಾ ಶರಣರ ಗದ್ದುಗೆ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಿವಮೂರ್ತಿ ಮುರುಘಾ ಶರಣರು, ನಾನು ಮೌನಕ್ಕೆ ಶರಣಾಗಿದ್ದೇನೆ, ಪ್ರಕರಣ ನ್ಯಾಯಾಲಯದಲ್ಲಿ ನಡೆಯುತ್ತಿರುವುದರಿಂದ ಯಾವುದೇ ಪ್ರತಿಕ್ರಿಯೆ ಕೋಡೋದಿಲ್ಲ. ಸದ್ಯ ಏನು ಹೇಳುವುದಿಲ್ಲ, ಮುಂದೆ ಹೇಳುತ್ತೇನೆ, ನನ್ನ ಪರವಾಗಿ ನನ್ನ ವಕೀಲರು ನಿಮಗೆ ಮಾಹಿತಿ ಕೊಡಲಿದ್ದಾರೆ. ಸದ್ಯ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದೇನೆ ಎಂದು ಹೇಳಿದರು. ಈ ವೇಳೆ ಶ್ರೀಗಳು ಶಿವಯೋಗಿ ಮಂದಿರಕ್ಕೆ ಆಗಮಿಸುತ್ತಿದ್ದಂತೆ ಭಕ್ತ ವೃಂದ ಶ್ರೀಯವರಿಗೆ ಹೂವಿನ ಹಾರ ಹಾಕಿ ಸಿಹಿ ತಿನ್ನಿಸಿದರು. ಬಳಿಕ ಇತರರಿಗೆ ಸಿಹಿ ಹಂಚಿ ಸಂಭ್ರಮಿಸಿದರು. ಇನ್ನು ಕೆಲ ಭಕ್ತರು ಹಾರ ತುರಾಯಿ ಹಾಕಿ ಸ್ವಾಮೀಜಿಯವರ ಆಶೀರ್ವಾದ ಪಡೆದರು.‌

ಶಾಖಾ ಮಠಕ್ಕೆ ಆಗಮಿಸಿದ ಮುರುಘಾ ಶ್ರೀ‌: ಮುರುಘಾ ಶರಣರ ಗದ್ದುಗೆಗೆ ಭೇಟಿ ನೀಡಿ ಆಶೀರ್ವಾದ ಪಡೆದ ಬಳಿಕ ಶಿವಮೂರ್ತಿ ಮುರುಘಾ ಶರಣರು ಹಳೇ ದಾವಣಗೆರೆಯಲ್ಲಿರುವ ವಿರಕ್ತ ಮಠಕ್ಕೆ ಭೇಟಿ ನೀಡಿದ್ದಾರೆ. ಈ ಮಠ ಜಯದೇವ ಮುರುಘಾ ಮಠದ ಶಾಖಾ ಪೀಠಗಳಲ್ಲಿ ಒಂದಾಗಿದ್ದು, ಶ್ರೀಗಳು ಇಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಇನ್ನು ಈ ವಿರಕ್ತ ಮಠದಲ್ಲಿ ತಮ್ಮ ಕೋಣೆಯಲ್ಲಿರುವ ಸ್ವಾಮೀಜಿಯನ್ನು ಕಾಣಲು ಬರುವ ಭಕ್ತರಿಗೆ ವಿರಕ್ತ ಮಠದಲ್ಲೇ ಶ್ರೀಗಳು ಸಿಗುತ್ತಾರೆಂದು ಶಿಷ್ಯಂದಿರು ಮಾಹಿತಿ ನೀಡಿದ್ದಾರೆ. 14 ತಿಂಗಳ ನಂತರ ದಾವಣಗೆರೆಗೆ ಆಗಮಿಸಿರುವ ಸ್ವಾಮೀಜಿಯವರನ್ನು ಭೇಟಿಯಾಗಲು ಸಮಾಜದ ಮುಖಂಡರು ಸೇರಿ ಭಕ್ತರು ವಿರಕ್ತ ಮಠದ ಆವರಣಕ್ಕೆ ಆಗಮಿಸುತ್ತಿದ್ದಾರೆ.

ಭಕ್ತರಲ್ಲಿ ಸಂತಸ: ಶಿವಮೂರ್ತಿ ಮುರುಘಾ ಶರಣರು ಜೈಲಿನಿಂದ ಆಗಮಿಸಿದ್ದರಿಂದ ದಾವಣಗೆರೆಯ ವಿರಕ್ತ ಮಠದತ್ತ ಭಕ್ತರು ಆಗಮಿಸುತ್ತಿದ್ದಾರೆ. ಸದ್ಯ ವಿಶ್ರಾಂತಿಗೆ ಜಾರಿರುವ ಮುರುಘಾ ಶರಣರನ್ನು ಕಾಣಲು ಭಕ್ತರು ಮಠದ ಆವರಣದಲ್ಲಿ ಕಾದು ಕುಳಿತಿದ್ದಾರೆ. ಅಲ್ಲದೆ ಮುಸ್ಲಿಂ ಮುಖಂಡರು ಹಾಗು ಮುಸ್ಲಿಂ‌ ಸಮಾಜದ ಸಾಕಷ್ಟು ಜನ ಶ್ರೀಗಳನ್ನು ಕಾಣಲು ಆಗಮಿಸುತ್ತಿರುವುದು ವಿಶೇಷವಾಗಿದೆ. ದಾವಣಗೆರೆಗೆ ಆಗಮಿಸು ಮೊದಲು ಮುರುಘಾ ಶರಣರು ಕೋರ್ಟ್ ವಿಸಿಗೆ ಆಟೆಂಡ್ ಆಗಿ ಶಿವಯೋಗಿ ಮಂದಿರಕ್ಕೆ ಆಗಮಿಸಿದ್ದಾರೆ ಎಂದು ವಕೀಲ ಪ್ರತಾಪ್ ಜೋಗಿ ಮಾಹಿತಿ ನೀಡಿದರು.

ಮಠದ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಪೋಕ್ಸೋ ಪ್ರಕರಣದಲ್ಲಿ ಶಿವಮೂರ್ತಿ ಮುರುಘಾ ಶರಣರನ್ನು ಕಳೆದ ವರ್ಷ ಸೆಪ್ಟೆಂಬರ್​ ತಿಂಗಳಲ್ಲಿ ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ: ಚಿತ್ರದುರ್ಗ: ಮುರುಘಾ ಶ್ರೀ ಜೈಲಿನಿಂದ ಬಿಡುಗಡೆ

Last Updated : Nov 16, 2023, 6:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.