ETV Bharat / state

ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಸಂಸದ ಸಿದ್ದೇಶ್ವರ್​ - ಕುಮಾರಸ್ವಾಮಿ ವಿರುದ್ಧ ಸಿದ್ದೇಶ್ವರ್ ವಾಗ್ದಾಳಿ

ದೇಶದಲ್ಲಿ ಇರೋದು ಬಿಜೆಪಿ ಸರ್ಕಾರ ಅಲ್ಲ. ಅದು ಆರ್​ಎಸ್​ಎಸ್​ ಸರ್ಕಾರ. ಬಿಜೆಪಿ ಬದಲು ಅಧಿಕಾರ ಚಲಾಯಿಸುತ್ತಿರೋದು ಆರ್​ಎಸ್​ಎಸ್​ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ನೀಡಿದ್ದ ಹೇಳಿಕೆಗೆ ಸಂಸದ ಜಿ.ಎಂ.ಸಿದ್ದೇಶ್ವರ್​ ವಾಗ್ದಾಳಿ ನಡೆಸಿದ್ದಾರೆ.

MP Siddeshwar
ಸಂಸದ ಸಿದ್ದೇಶ್ವರ್​
author img

By

Published : Oct 7, 2021, 3:48 PM IST

ದಾವಣಗೆರೆ: ಆರ್​​ಎಸ್ ಎಸ್ ಅಂದ್ರೆ ಅದು ಬಾಂಬ್ ಸ್ಫೋಟ ಮಾಡುವ ಅಥವಾ ತಾಲಿಬಾನ್ ಥರ ಚಟುವಟಿಕೆ ನಡೆಸುವ ಸಂಸ್ಥೆಯಲ್ಲ. ಇದೊಂದು ಸೇವಾ ಸಂಸ್ಥೆಯಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಬಿಜೆಪಿ ಸಂಸದ ಜಿ.ಎಂ.ಸಿದ್ದೇಶ್ವರ್​ ವಾಗ್ದಾಳಿ ನಡೆಸಿದರು.

ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಸಂಸದ ಸಿದ್ದೇಶ್ವರ್​

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರ್​ಎಸ್​ಎಸ್​ನವರು ಎಲ್ಲಿಯೂ ಹೋಗಿ ಬಾಂಬ್ ಸ್ಫೋಟ ಮಾಡಿಲ್ಲ. ಪ್ರಕೃತಿ ವಿಕೋಪ ದಂತಹ ಘಟನೆ ನಡೆದರೆ ಆರ್​​ಎಸ್​​​ಎಸ್ ಕಾರ್ಯಕರ್ತರು ಹೋಗಿ ಸಂಕಷ್ಟದಲ್ಲಿದ್ದ ಜನರ ಸೇವೆ ಮಾಡುತ್ತಾರೆ. ಇಂತಹ ಸಂಸ್ಥೆ ಬಗ್ಗೆ ತಿಳಿವಳಿಕೆ ಇಲ್ಲದೇ ಮಾತಾಡುವುದು ಸರಿಯಲ್ಲ ಎಂದು ಗುಡುಗಿದರು.

ಕೆಲವರು ಆರ್​​ಎಸ್​​ಎಸ್ ಸಿದ್ಧಾಂತವನ್ನು ಮೆಚ್ಚಿಕೊಂಡಿದ್ದಾರೆ. ಅವರು ಕಷ್ಟಪಟ್ಟು ಓದಿ ಐಎಎಸ್, ಐಪಿಎಸ್ ಸೇರಿದಂತೆ ನಾನಾ ಹುದ್ದೆಗೆ ಹೋಗುತ್ತಾರೆ. ಅಂತವರನ್ನು ಆರ್​​ಎಸ್​​ಎಸ್ ನವರ ಎನ್ನವುದು ತಪ್ಪು ಎಂದರು.

ಇನ್ನು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕುರಿತಾಗಿ ಕೇಳಿದ ಪ್ರಶ್ನೆಗೆ ಉತ್ತರಿಸದೇ ಹಾಗೆಯೇ ಮುನ್ನೆಡೆದರು.

ಇದನ್ನೂ ಓದಿ: ದೇಶದಲ್ಲಿ ಇರೋದು ಬಿಜೆಪಿ ಅಲ್ಲ..ಆರ್​ಎಸ್​ಎಸ್​ ಸರ್ಕಾರ: ಹೆಚ್​ಡಿಕೆ ವಾಗ್ದಾಳಿ

ಇದನ್ನೂ ಓದಿ: ವೋಟಿಗಾಗಿ ಆರ್‌ಎಸ್‌ಎಸ್ ದೂಷಿಸಿ ನಿಮ್ಮ ವ್ಯಕ್ತಿತ್ವವನ್ನ ಚಿಲ್ಲರೆ ಮಾಡಬೇಡಿ: ಹೆಚ್‌ಡಿಕೆಗೆ ಕಟೀಲ್ ಸಲಹೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.