ದಾವಣಗೆರೆ: ಸಚಿವ ಸ್ಥಾನ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಶಾಸಕ ಎಂ.ಪಿ.ರೇಣುಕಾಚಾರ್ಯರವರಿಗೆ ಸಚಿವ ಸ್ಥಾನ ಕೈ ತಪ್ಪಿದೆ. ಇದರಿಂದ ಅವರ ಅಭಿಮಾನಿಗಳಿಗೆ ಸಾಕಷ್ಟು ನಿರಾಸೆಯಾಗಿದೆ.
ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಅಭಿಮಾನಿಗಳು ನಿರಾಸೆಗೆ ಒಳಗಾಗದಂತೆ ಟ್ವಿಟರ್ನಲ್ಲಿ ಶಾಸಕ ರೇಣುಕಚಾರ್ಯ ಪೋಸ್ಟ್ ಮಾಡಿದ್ದಾರೆ. ಪಕ್ಷ ನನಗೆ ತಾಯಿ ಸಮಾನ, ನನ್ನ ಪಕ್ಷ, ಸಂಘಟನೆ ಹಾಗೂ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ದನಾಗಿದ್ದೇನೆ ಎಂದಿದ್ದಾರೆ.
-
ಪಕ್ಷ ನನಗೆ ತಾಯಿ ಸಮಾನ, ನನ್ನ ಪಕ್ಷ, ಸಂಘಟನೆ ಹಾಗೂ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ದ. ಜನ ಸೇವೆಯೇ ನನ್ನ ಕಾಯಕ, ನನ್ನ ಸಂಪೂರ್ಣ ಜೀವನವನ್ನು ನನ್ನ ಮತ ಕ್ಷೇತ್ರದ ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕಿನ ಜನತೆಯ ಸೇವೆಗೆ ಮುಡಿಪಿಟ್ಟಿದ್ದೇನೆ.
— M P Renukacharya (@MPRBJP) August 4, 2021 " class="align-text-top noRightClick twitterSection" data="
">ಪಕ್ಷ ನನಗೆ ತಾಯಿ ಸಮಾನ, ನನ್ನ ಪಕ್ಷ, ಸಂಘಟನೆ ಹಾಗೂ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ದ. ಜನ ಸೇವೆಯೇ ನನ್ನ ಕಾಯಕ, ನನ್ನ ಸಂಪೂರ್ಣ ಜೀವನವನ್ನು ನನ್ನ ಮತ ಕ್ಷೇತ್ರದ ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕಿನ ಜನತೆಯ ಸೇವೆಗೆ ಮುಡಿಪಿಟ್ಟಿದ್ದೇನೆ.
— M P Renukacharya (@MPRBJP) August 4, 2021ಪಕ್ಷ ನನಗೆ ತಾಯಿ ಸಮಾನ, ನನ್ನ ಪಕ್ಷ, ಸಂಘಟನೆ ಹಾಗೂ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ದ. ಜನ ಸೇವೆಯೇ ನನ್ನ ಕಾಯಕ, ನನ್ನ ಸಂಪೂರ್ಣ ಜೀವನವನ್ನು ನನ್ನ ಮತ ಕ್ಷೇತ್ರದ ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕಿನ ಜನತೆಯ ಸೇವೆಗೆ ಮುಡಿಪಿಟ್ಟಿದ್ದೇನೆ.
— M P Renukacharya (@MPRBJP) August 4, 2021
ಜನ ಸೇವೆಯೇ ನನ್ನ ಕಾಯಕ, ನನ್ನ ಜೀವನವನ್ನು ನನ್ನ ಮತ ಕ್ಷೇತ್ರದ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಜನತೆಯ ಸೇವೆಗೆ ಮುಡಿಪಾಗಿಡುತ್ತೇನೆ. ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ನಿರಾಶರಾಗಬಾರದು ಎಂದಿರುವ ಅವರು ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಗೆ ಪಕ್ಷವನ್ನು ಸಂಘಟಿಸುವಂತೆ ಅಭಿಮಾನಿಗಳಿಗೆ ಹಾಗೂ ಕಾರ್ಯರ್ತರಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: 7 ಮಂದಿಗೆ ಕೊಕ್.. ಐವರು ಹೊಸ ಮುಖಗಳಿಗೆ ಮಣೆ: ಬಿಎಸ್ವೈ ಮುಂದೆ ಮಂಡಿಯೂರಿತೆ ಹೈಕಮಾಂಡ್!?