ದಾವಣಗೆರೆ: ನಾನು ಚಡ್ಡಿ ಹಾಕಿಕೊಳ್ಳುವಾಗ ಪೆಟ್ರೋಲ್ ಹಾಗೂ ಬೇರೆ ವಸ್ತುಗಳ ಬೆಲೆ ಕಮ್ಮಿ ಇತ್ತು, ಆದರೆ ಇದೀಗ ಪ್ಯಾಂಟ್ ಹಾಕಿಕೊಳ್ಳುತ್ತಿದ್ದೇನೆ ಎಲ್ಲ ವಸ್ತುಗಳ ಬೆಲೆ ಜಾಸ್ತಿ ಆಗಿದೆ, ಅದು ವಾತಾವರಣ ಹೇಗಿರುತ್ತೇ ಹಾಗೆ ಹೋಗ್ತಾ ಇರುತ್ತೇ ಎಂದು ಬೆಲೆ ಏರಿಕೆ ಕುರಿತು ಸಂಸದ ಸಿದ್ದೇಶ್ವರ್ ಮತ್ತೆ ಉಡಾಫೆ ಉತ್ತರ ನೀಡಿದರು.
ನಗರದಲ್ಲಿ ಮಾತನಾಡಿದ ಅವರು, ದಿನ ಕಳೆದಂತೆ ಎಲ್ಲ ವಸ್ತುಗಳ ಬೆಲೆ ಹೆಚ್ಚಾಗುತ್ತೆ ಎಂದು ಬೇಜವಾಬ್ದಾರಿ ಉತ್ತರ ನೀಡಿದ ಅವರು ಟ್ಯಾಕ್ಸ್ ಜಾಸ್ತಿ ಆಗಿದೆ ಎನ್ನುವ ಪ್ರಶ್ನೆಗೆ ಕೈ ಮುಗಿದು ಹೊರಟು ಹೋದರು.
ಬಂದ್ ಕೈ ಬಿಟ್ಟರೆ ಸೂಕ್ತ: ಎಲ್ಲವೂ ರೈತರ ಅನುಕೂಲವಾಗುವ ಕಾಯ್ದೆಗಳನ್ನು ಕೇಂದ್ರ ಸರ್ಕಾರ ನೀಡಿದ್ದು, ರೈತರು ಯಾರು ಅ ಕಾಯ್ದೆಯನ್ನು ವಿರೋಧಿಸುತ್ತಿಲ್ಲ, ಸಂಘಟನೆಯವರು ಮಾತ್ರ ವಿರೋಧಿಸುತ್ತಿದ್ದಾರೆ ಎಂದರು. ಇನ್ನು ಕೊರೊನಾದಿಂದ ಜನ ಬೇಸತ್ತಿದ್ದಾರೆ, ಹೋರಾಟಗಾರರು ಬಂದ್ ಕೈ ಬಿಟ್ಟರೆ ಸೂಕ್ತ ಎಂದು ಸಲಹೆ ನೀಡಿದರು.