ETV Bharat / state

ಅನುಮತಿ ಪಡೆಯದೆ ತವರು ರಾಜ್ಯಗಳತ್ತ ಹೊರಟಿದ್ದ ನೂರಾರು ಕಾರ್ಮಿಕರು ಪೊಲೀಸ್​ ವಶಕ್ಕೆ

ದಾವಣಗೆರೆ ಜಿಲ್ಲೆಯಲ್ಲಿ ಅನುಮತಿ ಪಡೆಯದೆ ತಮ್ಮ ತವರು ರಾಜ್ಯಕ್ಕೆ ಹೊರಟಿದ್ದ ಉತ್ತರ ಭಾರತದ 100ಕ್ಕೂ ಅಧಿಕ ಕಾರ್ಮಿಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

author img

By

Published : May 15, 2020, 11:44 PM IST

ದಾವಣಗೆರೆ: ನೂರಕ್ಕೂ ಹೆಚ್ಚು ಹೊರರಾಜ್ಯದ ಕಾರ್ಮಿಕರು ಯಾವುದೇ ಅನುಮತಿ ಪಡೆಯದೆ ಲಾರಿಯಲ್ಲಿ ಹೊರಟಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಾಜಸ್ಥಾನ, ಗುಜರಾತ್ ಸೇರಿದಂತೆ ಉತ್ತರ ಭಾರತದ ಕಾರ್ಮಿಕರು ಜಿಲ್ಲಾಡಳಿತದ ಅನುಮತಿ ಪಡೆಯದೆ ತೆರಳುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಕೆಟಿಜೆ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕರ ವಿಚಾರಣೆ ನಡೆಸಿದರು.

ನೂರಕ್ಕೂ ಅಧಿಕ ಕಾರ್ಮಿಕರ ವಶ

ಈರುಳ್ಳಿ ಹೊತ್ತು ತಂದಿದ್ದ ರಾಜಸ್ಥಾನದ ಲಾರಿಯಲ್ಲಿ ಅನುಮತಿ ಇಲ್ಲದೆ ಹೊರಟಿರುವುದು ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲರ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದರು.

ಸದ್ಯ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಮುಂದಿನ ಕ್ರಮದ ಬಗ್ಗೆ ಜಿಲ್ಲಾಡಳಿತ ಏನು ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಎದುರು ನೋಡಲಾಗುತ್ತಿದೆ. ನೂರಕ್ಕೂ ಹೆಚ್ಚು ಜನ ಒಂದೇ ಲಾರಿಯಲ್ಲಿ ಹೊರಟಿದ್ದ ಕಾರಣ ಸದ್ಯಕ್ಕೆ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.