ದಾವಣಗೆರೆ: ಜಿಲ್ಲೆಗೆ ಮುಂಗಾರು ಮಳೆ ಎಂಟ್ರಿ ಕೊಟ್ಟಿದ್ದು, ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನ ಸುತ್ತಮುತ್ತ ಉತ್ತಮ ಮಳೆಯಾಗಿದೆ.
ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಜನರಿಗೆ ವರುಣ ತಂಪೆರೆದಿದ್ದಾನೆ. ಇನ್ನೂ ಮುಂಗಾರು ಆಗಮನಕ್ಕೆ ಕೃಷಿಕರ ಮೊಗದಲ್ಲಿ ಮಂದಹಾಸ ಮೂಡಿದೆ. ಈ ಬಾರಿ ಜೂನ್ 1ಕ್ಕೆ ಮುಂಗಾರು ಆಗಮನವಾಗಿದ್ದು, ಈ ವರ್ಷ ಉತ್ತಮ ಮಳೆಯಾಗುವ ಲಕ್ಷಣ ಗೋಚರಿಸಿದೆ.
ಕಾರ್ಯಕ್ರಮಕ್ಕೆ ವರುಣನ ಅಡ್ಡಿ
![ಮುಂಗಾರು ಆಗಮನ, ದಾವಣಗೆರೆ ಜಿಲ್ಲೆಗೆ ಕಾಲಿಟ್ಟ ಮುಂಗಾರು, ದಾವಣಗೆರೆ ಜಿಲ್ಲೆಗೆ ಮುಂಗಾರು ಆಗಮನ ಸುದ್ದಿ, Monsoon entry, Monsoon entry to Davanagere district, Monsoon entry to Davanagere district news,](https://etvbharatimages.akamaized.net/etvbharat/prod-images/kn-dvg-03-01-mungaru-entry-script-7203307_01062020155552_0106f_1591007152_149.png)
ಹೊನ್ನಾಳಿ ಪಟ್ಟಣದ ಹಿರೇಕಲ್ಮಠದಲ್ಲಿ ಆಯೋಜಿಸಿದ್ದ ಕೊರೊನಾ ವಾರಿಯರ್ಸ್ಗೆ ಕೃತಜ್ಞತಾ ಸಭಾ ಕಾರ್ಯಕ್ರಮಕ್ಕೆ ವರುಣ ಅಡ್ಡಿಪಡಿಸಿದ್ದಾನೆ. ಕಾರ್ಯಕ್ರಮ ಮುಗಿಯುವುದಕ್ಕಿಂತ ಸ್ವಲ್ಪ ಮುಂಚೆ ಮಳೆ ಅಬ್ಬರ ಕಂಡು ಬಂತು.
![ಮುಂಗಾರು ಆಗಮನ, ದಾವಣಗೆರೆ ಜಿಲ್ಲೆಗೆ ಕಾಲಿಟ್ಟ ಮುಂಗಾರು, ದಾವಣಗೆರೆ ಜಿಲ್ಲೆಗೆ ಮುಂಗಾರು ಆಗಮನ ಸುದ್ದಿ, Monsoon entry, Monsoon entry to Davanagere district, Monsoon entry to Davanagere district news,](https://etvbharatimages.akamaized.net/etvbharat/prod-images/kn-dvg-03-01-mungaru-entry-script-7203307_01062020155552_0106f_1591007152_290.png)
ವೇದಿಕೆಯ ಮೇಲಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ, ಅಧಿಕಾರಿಗಳು, ದಾದಿಯರು, ಪೊಲೀಸ್ ಸಿಬ್ಬಂದಿ, ವೈದ್ಯಕೀಯ ಸಿಬ್ಬಂದಿ ತಲೆ ಮೇಲೆ ಖುರ್ಚಿ ಹಿಡಿದುಕೊಂಡು ಮಳೆಯಿಂದ ಪಾರಾಗಲು ಯತ್ನಿಸಿದ ದೃಶ್ಯ ಸಾಮಾನ್ಯವಾಗಿತ್ತು.