ETV Bharat / state

ದಾವಣಗೆರೆಯಲ್ಲಿ ಮೊಬೈಲ್ ಟವರ್​ಗೆ ಆಕಸ್ಮಿಕ ಬೆಂಕಿ: ದಟ್ಟ ಹೊಗೆಗೆ ಬೆಚ್ಚಿಬಿದ್ದ ಜನ - ದಾವಣಗೆರೆಯಲ್ಲಿ ದಟ್ಟ ಹೊಗೆಗೆ ಬೆಚ್ಚಿಬಿದ್ದ ಜನ

ಮೊಬೈಲ್ ಟವರ್ ಜನರೇಟರ್​ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ ದಟ್ಟ ಹೊಗೆ ಆವರಿಸಿಕೊಂಡ ಘಟನೆ ದಾವಣಗೆರೆ ನಗರದ ಜಯದೇವ ವೃತ್ತದ ಮಲ್ಲಿಕಾರ್ಜುನ ಲಾಡ್ಜ್‌ ಬಳಿ ನಡೆದಿದೆ.

ದಾವಣಗೆರೆಯಲ್ಲಿ ಮೊಬೈಲ್ ಟವರ್​ಗೆ ಆಕಸ್ಮಿಕ ಬೆಂಕಿ

author img

By

Published : Sep 25, 2021, 2:33 PM IST

Updated : Sep 25, 2021, 4:25 PM IST

ದಾವಣಗೆರೆ: ನಗರದ ಜಯದೇವ ವೃತ್ತದ ಮಲ್ಲಿಕಾರ್ಜುನ ಲಾಡ್ಜ್‌ ಬಳಿ ಮೊಬೈಲ್ ಟವರ್ ಜನರೇಟರ್​ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ ದಟ್ಟ ಹೊಗೆ ಆವರಿಸಿಕೊಂಡಿದ್ದು, ಆತಂಕಕ್ಕೆ ಕಾರಣವಾಯಿತು.

ಮೊಬೈಲ್ ಟವರ್​ಗೆ ಆಕಸ್ಮಿಕ ಬೆಂಕಿ

ಸಕಾಲಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ, ಬೆಂಕಿ ನಿಯಂತ್ರಣ ಕಾರ್ಯದಲ್ಲಿ ತೊಡಗಿದೆ. ಮೊಬೈಲ್ ಟವರ್ ಜನರೇಟರ್ ಟಾಟಾ ಕಂಪನಿಗೆ ಸೇರಿದ್ದು ಎಂದು ಹೇಳಲಾಗುತ್ತಿದ್ದು, ಜನರೇಟರ್​ ಸಂಪೂರ್ಣ ಸುಟ್ಟು ಕರಕಲಾಗಿದೆ.‌

ಇನ್ನು ಬೆಂಕಿಯನ್ನು ನಂದಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಯಾವ ರೀತಿ ಬೆಂಕಿ ಹೊತ್ತಿಕೊಂಡಿತ್ತು ಎಂಬ ಮಾಹಿತಿ ಲಭ್ಯವಾಗಿಲ್ಲ. ಇನ್ನು ಆವರಿಸಿಕೊಂಡಿದ್ದ ದಟ್ಟ ಹೊಗೆ ಹಾಗೂ ಬೆಂಕಿಯನ್ನು ನೋಡಲು ಕಿಕ್ಕಿರಿದಿದ್ದ ನೆರದಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.

Last Updated : Sep 25, 2021, 4:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.