ದಾವಣಗೆರೆ: ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ್ಗೆ ಪತ್ರ ಮುಖೇನ ಹಾಗೂ ಕರೆ ಮಾಡಿ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರಿಗೆ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಪತ್ರ ಬರೆದಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಕಳೆದ 35 ವರ್ಷಗಳಿಂದಲೂ ಬಸವರಾಜ್ ದುಡಿದಿದ್ದಾರೆ. ಆದ್ರೆ ಇವರಿಗೆ ಮೂರ್ನಾಲ್ಕು ಬಾರಿ ಬೆದರಿಕೆ ಕರೆ ಹಾಗೂ ಪತ್ರಗಳು ಬಂದರೂ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ ಎಂದು ಉಲ್ಲೇಖಿಸಿರುವ ಅವರು ಕೂಡಲೇ ಆರೋಪಿಗಳನ್ನು ಬಂಧಿಸಬೇಕು. ಡಿ.ಬಸವರಾಜ್ ಅವರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ವೀರ ಸಾವರ್ಕರ್ಗೆ ಮರಣೋತ್ತರ ಭಾರತ ರತ್ನ ನೀಡಲು ಬಸವರಾಜ್ ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ದೂರವಾಣಿ ಕರೆ ಮಾಡಿ ದುಷ್ಕರ್ಮಿಯೊಬ್ಬ ಬೆದರಿಕೆ ಹಾಕಿದ್ದ. ಪತ್ರ ಬರೆದು ಕ್ಷಮೆಯಾಚಿಸದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ನಾಲ್ಕು ಬಾರಿ ಇದು ಪುನರಾವರ್ತನೆಯಾದ ಹಿನ್ನೆಲೆಯಲ್ಲಿ ಎಸ್ಪಿ ಕಚೇರಿಗೆ ತೆರಳಿ ಹನುಮಂತರಾಯ ಅವರನ್ನು ಭೇಟಿ ಮಾಡಿ ಮತ್ತೊಮ್ಮೆ ಮನವಿ ಅರ್ಪಿಸಿದರು.