ETV Bharat / state

ನಾವು ಮತ್ತು ಬೊಮ್ಮಾಯಿ ಬೀಗರು, ನಮ್ಮ ಭೇಟಿ ರಾಜಕೀಯ ಪ್ರೇರಿತ ಅಲ್ಲ: ಶಾಮನೂರು ಶಿವಶಂಕರಪ್ಪ

ನಾವು ಮತ್ತು ಬೊಮ್ಮಾಯಿ ಅವರು ಸಂಬಂಧಿಕರು. ಅವರು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೋಗುವ ಮಾರ್ಗದಲ್ಲಿ ಬಂದು ಭೇಟಿ ಮಾಡಿ ಹೋಗಿದ್ದಾರೆ. ಈ ಭೇಟಿ ಹಿಂದೆ ಯಾವುದೇ ರಾಜಕೀಯ ಇಲ್ಲ ಎಂದು ಕಾಂಗ್ರೆಸ್​​ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

mla-shamannuru-shivashankarappa-spoke-about-bommai-visit
ನಾವು ಮತ್ತು ಬೊಮ್ಮಾಯಿಯವರು ಬೀಗರು, ನಮ್ಮ ಭೇಟಿ ರಾಜಕೀಯ ಪ್ರೇರಿತ ಅಲ್ಲ: ಶಾಮನೂರು ಶಿವಶಂಕರಪ್ಪ
author img

By

Published : Jun 14, 2023, 3:55 PM IST

ಮಾಜಿ ಸಿಎಂ ಬೊಮ್ಮಾಯಿ ಭೇಟಿ ಕುರಿತು ಮಾತನಾಡಿದ ಶಾಸಕ ಶಾಮನೂರು ಶಿವಶಂಕರಪ್ಪ

ದಾವಣಗೆರೆ : ನಾವು ಮತ್ತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರು ಸಂಬಂಧಿಕರು. ಚುನಾವಣೆ ಆದಾಗಿನಿಂದ ನಾವು ಭೇಟಿಯಾಗಿರಲಿಲ್ಲ. ನಾನು ಚುನಾವಣೆಯಲ್ಲಿ ಗೆದ್ದಿದ್ದೀನಿ. ಅವರು ಗೆದ್ದಿದ್ದಾರೆ. ಹೀಗಾಗಿ ಭೇಟಿಯಾಗಿದ್ದೆವು. ನಮ್ಮ ಭೇಟಿ ರಾಜಕೀಯ ಪ್ರೇರಿತ ಭೇಟಿ ಅಲ್ಲ ಎಂದು ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಸ್ಪಷ್ಟಪಡಿಸಿದರು.

ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೋಗುವ ಮಾರ್ಗದಲ್ಲಿ ಬಂದು ಬಸವರಾಜ ಬೊಮ್ಮಾಯಿ ಅವರು ಭೇಟಿಯಾಗಿ ಹೋಗಿದ್ದಾರೆ. ಭೇಟಿಯಾಗಿ ಅವರು ನನಗೆ ಹಾರ ಹಾಕಿದ್ರು. ನಾನು ಅವರಿಗೆ ಶಾಲು ಹೊದಿಸಿದೆ. ನಮ್ಮ ಸಂಬಂಧ ಹೀಗೆ ಮುಂದುವರಿಯಲಿ ಎಂದು ಹೇಳಿದೆ‌ ಎಂದರು. ಕೆಲವೊಂದು ವಿಚಾರಗಳನ್ನು ಹೇಳುವುದಕ್ಕೆ ಆಗುವುದಿಲ್ಲ. ಅವರು ಬಿಜೆಪಿಯವರು ನಾವು ಕಾಂಗ್ರೆಸ್ ನವರು. ನಮ್ಮಲ್ಲಿ ಯಾವ ರಾಜಕೀಯ ಮಾತುಕತೆ ಇರುತ್ತದೆ. ನಾವು ಹೊಂದಾಣಿಕೆ ರಾಜಕಾರಣ ಮಾಡಲು ಚುನಾವಣೆ ಪೂರ್ವವಾಗಿ ಭೇಟಿಯಾಗಿಲ್ಲ, ಚುನಾವಣೆ ನಂತರ ಭೇಟಿಯಾಗಿದ್ದೇವೆ ಎಂದರು.

ಸದಾ ಬಾಯಿಗೆ ಬಂದಂಗೆ ಮಾತನಾಡುತ್ತಾನೆ : ಸಂಸದ ಪ್ರತಾಪ್ ಸಿಂಹ ಹೊಂದಾಣಿಕೆ ರಾಜಕಾರಣ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಾಮನೂರು, ಪ್ರತಾಪಸಿಂಹ ಬಾಯಿಗೆ ಬಂದಂಗೆ ಮಾತನಾಡುತ್ತಾ ಇರುತ್ತಾನೆ. ನಂಗೇನೂ ಗೊತ್ತಿಲ್ವಾ. ಯಾವಾಗಲೂ ಹಾಗೇ ಮಾತನಾಡುತ್ತಾನೆ ಎಂದು ಟಾಂಗ್​ ಕೊಟ್ಟರು.

ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಬಗ್ಗೆ ಮಾತನಾಡಿ, ಅಖಿಲ ಭಾರತ ವೀರಶೈವ ಮಹಾಸಭೆಯ ಪದಾಧಿಕಾರಿಗಳ ಸಭೆ ಕರೆದು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಸಾಮಾಜಿಕ ಸಮೀಕ್ಷೆಯ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು. ಜಾಗತಿಕ ಲಿಂಗಾಯತ ಮಹಾಸಭಾ ಎಲ್ಲಿದೆ.
ಜಾಮದಾರ್ ಒಬ್ಬ ಇದ್ದಾನೆ. ಅವನನ್ನು ಹುಚ್ಚಾಸ್ಪತ್ರೆಗೆ ಕಳಿಸಬೇಕು. ಇಲ್ಲಾ ಅಂದ್ರೆ ನಾವೇ ಕಳಿಸುತ್ತೇವೆ. ಪ್ರತ್ಯೇಕ ಧರ್ಮದ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.‌

ಗ್ಯಾರಂಟಿ ಯೋಜನೆಗಳ ಕಂಡಿಷನ್ ಬಗ್ಗೆ ಶಾಮನೂರು ಅಸಮಾಧಾನ : ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರವು ಜನರಿಗೆ ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳಬಾರದು, ಮಾತು ಕೊಟ್ಟಂತೆ ನಡೆದುಕೊಳ್ಳಬೇಕು. ವಿದ್ಯುತ್ ದರ ಏರಿಕೆಯಿಂದ ಇಂಡಸ್ಟ್ರೀಸ್ ಗೆ ಹೊಡೆತ ಬಿದ್ದಿದೆ. ಇಂಡಸ್ಟ್ರಿಗಳು ಉಳಿಯುವುದು ಕಷ್ಟ ಆಗಿದೆ. ಮಾತು ಕೊಟ್ಟಂತೆ ನಡೆದುಕೊಂಡು ವಿದ್ಯುತ್ ದರ ಏರಿಕೆ ಬಗ್ಗೆ ಆಮೇಲೆ ತೀರ್ಮಾನ ತೆಗೆದುಕೊಳ್ಳಿ ಎಂದು ಶಾಮನೂರು ಶಿವಶಂಕರಪ್ಪ ಸಲಹೆ ನೀಡಿದರು.

ವಿದ್ಯುತ್ ದರ ಏರಿಕೆ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ನಾವು ಮಾಡಿಲ್ಲ ಎನ್ನುತ್ತಿದ್ದಾರೆ. ವಿದ್ಯುತ್​ ದರ ಏರಿಕೆ ಬಿಜೆಪಿ ಕಾಲದಲ್ಲೇ ಆಗಿತ್ತು. ಬಿಜೆಪಿಯವರು ಅದಕ್ಕೆ ಸಹಿ ಮಾಡಿಲ್ಲ. ಕಾಂಗ್ರೆಸ್​ನವರು ಸಹಿ ಮಾಡಿದ್ದಾರೋ ಬಿಟ್ಟಿದ್ದಾರೋ ಗೊತ್ತಿಲ್ಲ. ಅದನ್ನು ಕಾಂಗ್ರೆಸ್ ನವರು ಒಪ್ಪಬಾರದು. ಹಿಂದೆ ದರ ಹೇಗಿತ್ತೋ ಅದೇ ರೀತಿ ಮುಂದುವರಿಸಬೇಕು ಎಂದು ಹೇಳಿದರು. ಶಕ್ತಿ ಯೋಜನೆಯಿಂದ ಖಾಸಗಿ ಬಸ್ ಗಳಿಗೆ ನಷ್ಟ ಆದ್ರೆ ನಾವೇನು ಮಾಡೋಕೆ ಆಗುತ್ತೆ. ರೈಲುಗಳಲ್ಲಿ ಸಂಚರಿಸುವ ಮಹಿಳೆಯರ ಸಂಖ್ಯೆ ಕಡಿಮೆ ಆಗಿದೆ. ಬೆಂಗಳೂರಿನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ​ ಸುರ್ಜೇವಾಲಾ ಅವರು ಬಿಬಿಎಂಪಿ ಮೀಟಿಂಗ್ ಬಗ್ಗೆ ಕೇಳಿದಾಗ ಅದು ನನಗೆ ಗೊತ್ತಿಲ್ಲ ಎಂದು ಜಾರಿಕೊಂಡರು.

ಲೋಕಸಭಾ ಚುನಾವಣೆ ಸ್ಪರ್ಧೆ ವಿಚಾರ : ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಜಿ ಎಂ ಸಿದ್ದೇಶ್ವರ್ ಈ ಬಾರಿ ಸ್ಪರ್ಧೆ ಮಾಡಲಿ. ಮೊದಲು ಲೋಕಸಭೆ ಚುನಾವಣೆಗೆ ಟಿಕೆಟ್​​ ತಗೊಂಡು ಬಂದು ನಿಲ್ಲೋಕೆ ಹೇಳಿ, ಕಾಂಗ್ರೆಸ್ ನಿಂದ ಬಹಳ ಜನರಿದ್ದಾರೆ. ಯಾರು ನಿಲ್ಲಲ್ಲ ಅಂದ್ರೆ ನಾನೇ ನಿಲ್ಲುತ್ತೇನೆ. ಜಿ.ಎಂ ಸಿದ್ದೇಶ್ವರ್ ಸೋಲುವುದನ್ನು ನಾನು ನೋಡಬೇಕು. ಬೇಕಾದ್ರೆ ಜಿ ಎಂ ಸಿದ್ದೇಶ್ವರ್ ಗೆ ಚುನಾವಣೆಗೆ ಫಂಡ್ ಮಾಡುತ್ತೇನೆ, ಬೊಮ್ಮಾಯಿ ಹೇಗೆ ಸಂಬಂಧನೋ ಅವನು ಕೂಡ ನನ್ನ ಸಂಬಂಧಿಕ ಎಂದು ಹೇಳಿದರು.

ಇದನ್ನೂ ಓದಿ : ಶಾಮನೂರು ಶಿವಶಂಕರಪ್ಪ ಭೇಟಿಗೆ ವಿಶೇಷ ಅರ್ಥ ಬೇಡ: ಬಸವರಾಜ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.