ದಾವಣಗೆರೆ: ಪುನೀತ್ ರಾಜ್‍ಕುಮಾರ್ ಸಾವಿನಲ್ಲೂ ನೇತ್ರದಾನ ಮಾಡಿ ಸಾರ್ಥಕತೆ ಮೆರೆದಿದ್ದರು. ಅವರ ಆದರ್ಶಗಳನ್ನು ಪಾಲಿಸುತ್ತಿರುವ ರಾಜ್ಯದ ಜನರು ನೇತ್ರದಾನ ಮಾಡಲು ನಿರ್ಧಾರ ಮಾಡಿ ಕಣ್ಣಿನ ಆಸ್ಪತ್ರೆಗಳಲ್ಲಿ ಹೇಸರು ನೋಂದಣಿ ಮಾಡುತ್ತಿದ್ದಾರೆ.
ಇದೀಗ ಹೊನ್ನಾಳಿ ಶಾಸಕ ರೇಣುಕಾಚಾರ್ಯರ ಇಡೀ ಕುಟುಂಬ ನೇತ್ರದಾನ ಮಾಡಲು ನಿರ್ಧರಿಸಿದೆ.
ಈಗಾಗಲೇ ಮರಣೋತ್ತರವಾಗಿ ನೇತ್ರದಾನ ಮಾಡಲು ರೇಣುಕಾಚಾರ್ಯ ಕುಟುಂಬ ಶಿವಮೊಗ್ಗ ಮೂಲದ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ನೋಂದಣಿ ಮಾಡಿಸಿದ್ದಾರೆ. ಶಾಸಕರ ಅವಿಭಕ್ತ ಕುಟುಂಬದಲ್ಲಿ ಒಟ್ಟು 62 ಜನರಿದ್ದಾರಂತೆ. ಈ 62 ಮಂದಿ ನೇತ್ರದಾನ ಮಾಡಲು ನೋಂದಣಿ ಮಾಡಿಸಿದ್ದಾರೆ ಎಂದು ರೇಣುಕಾರ್ಚಾರ್ಯರ ಪತ್ನಿ ಸುಮಿತ್ರ ತಿಳಿಸಿದರು.
ಇಂದು ಹೊನ್ನಾಳಿಯಲ್ಲಿ ನಟ ಪುನೀತ್‌ಗೆ ಭಾವಪೂರ್ಣ ಶ್ರದ್ಧಾಂಜಲಿ ಹಾಗು ನೇತ್ರದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ವಿಶೇಷ ನಮನ ಸಲ್ಲಿಸಲಾಯಿತು. ಇದೇ ಕಾರ್ಯಕ್ರಮದಲ್ಲಿ ಹಿರಿಯ ನಟ ಹೊನ್ನವಳ್ಳಿ ಕೃಷ್ಣ ಹಾಗು ಟೆನ್ನಿಸ್ ಕೃಷ್ಣ ಭಾಗಿಯಾಗಿ ಪುನೀತ್ ಜೊತೆ ಕೆಲಸ ಮಾಡಿದ ನೆನಪುಗಳನ್ನು ಮೆಲುಕು ಹಾಕಿದರು.
ಇದನ್ನೂ ಓದಿ: ಅಪ್ಪು ಪ್ರೇರಣೆ: ದಾವಣಗೆರೆಯ ಜಿಲ್ಲೆಯ ಈ ಗ್ರಾಮದಲ್ಲಿ 60ಕ್ಕೂ ಹೆಚ್ಚು ಜನರಿಂದ ನೇತ್ರದಾನ