ದಾವಣಗೆರೆ: ತಮಿಳಿಗರೊಂದಿಗೆ ತಮಿಳು ಭಾಷೆಯಲ್ಲೇ ಅಲ್ಪಸ್ವಲ್ಪ ಮಾತನಾಡಿ ಶಾಸಕ ರೇಣುಕಾಚಾರ್ಯ ಪೇಚಿಗೆ ಸಿಲುಕಿದರು.
ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಚಿನ್ನಿಕಟ್ಟೆ ಗ್ರಾಮದಲ್ಲಿ ಬಹು ಸಂಖ್ಯೆಯಲ್ಲಿ ತಮಿಳಿಗರೆ ಇದ್ದು, ಅವರ ಸಮಸ್ಯೆಗಳನ್ನು ಆಲಿಸಲು ತೆರಳಿದ ಶಾಸಕರು ತಮಿಳು ಮಾತನಾಡಲು ಹೋಗಿ ಪೇಚಿಗೆ ಸಿಲುಕಿದರು. ಜಾತಿ ಪ್ರಮಾಣಪತ್ರ ಇಲ್ಲದೆ ನಾವು ಹೈರಾಣಾಗಿದ್ದೀವಿ ಎಂದು ತಮಿಳಿಗರು ಶಾಸಕ ರೇಣುಕಾಚಾರ್ಯ ಬಳಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ.
ಓದಿ: ದಾವಣಗೆರೆಯಲ್ಲಿ 2ನೇ ಹಂತದ ಚುನಾವಣೆ: ಅವಿರೋಧ ಆಯ್ಕೆ ಪರ್ವ ಬಲು ಜೋರು
ಸ್ಥಳೀಯರು ಕನ್ನಡದಲ್ಲಿ ಮಾತನಾಡಿದರೂ ಕೂಡ ಶಾಸಕರು ಮಾತ್ರ ತಮಿಳಿನಲ್ಲೇ ಮಾತನಾಡಲು ಮುಂದಾಗಿ ನಗೆಪಾಟಲಿಗೀಡಾದರು. 'ಏನಮ್ಮ ಎನ್ನ ಸೊಲ್ಲು' ಎಂದು ಮಾತನ್ನು ಆರಂಭಿಸಿದ ಶಾಸಕ ರೇಣುಕಾಚಾರ್ಯ, ಬಳಿಕ ಬೇರೆ ಪದಗಳು ಬಾರದೆ ಇರುವುದರಿಂದ ಕನ್ನಡದಲ್ಲೇ ಸಮಸ್ಯೆಯನ್ನು ಆಲಿಸಿದರು.