ದಾವಣಗೆರೆ : ಮಕ್ಕಳು, ಯುವಕರೊಂದಿಗೆ ಹೋಳಿ ಆಡಿದ ಹೊನ್ನಾಳಿ ಶಾಸಕ ರೇಣುಕಾಚಾರ್ಯ, ಮಡಿಕೆ ಒಡೆದು ಡಿಜೆ ಸಾಂಗ್ಗೆ ಸಖತ್ ಸ್ಟೆಪ್ ಹಾಕಿದರು.
ಹೊನ್ನಾಳಿ ತಾಲೂಕಿನ ದುರ್ಗಿಗುಡಿಯಲ್ಲಿ ಯುವಕರೊಂದಿಗೆ ಹೋಳಿ ಆಡಿ ಸಂಭ್ರಮಿಸಿದ ರೇಣುಕಾಚಾರ್ಯ ಅವರು ಮಕ್ಕಳಿಗೆ, ಯುವಕರಿಗೆ ಬಣ್ಣ ಹಚ್ಚಿ ಹೋಳಿ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ವಿವಿಧ ಬಣ್ಣದಲ್ಲಿ ಮಿಂದೆದ್ದ ರೇಣುಕಾಚಾರ್ಯ ಸಖತ್ ಎಂಜಾಯ್ ಮಾಡಿದರು.
ಪರಸ್ಪರ ಬಣ್ಣ ಹಚ್ಚಿ, ಹಬ್ಬ ಯುವಕರ ಬಾಳಲ್ಲಿ ಖುಷಿ, ಸಂಭ್ರಮ ತರಲಿ ಎಂದು ರೇಣುಕಾಚಾರ್ಯ ಶುಭ ಹಾರೈಸಿದರು.