ETV Bharat / state

ಕೋವಿಡ್ ಸೋಂಕಿತರ ಜೊತೆ ಸಿನಿಮಾ ಹಾಡಿಗೆ ಹೆಜ್ಜೆ ಹಾಕಿದ ರೇಣುಕಾಚಾರ್ಯ ದಂಪತಿ... ವಿಡಿಯೋ

author img

By

Published : May 27, 2021, 12:48 AM IST

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಮಾದನಬಾವಿಯಲ್ಲಿರುವ ಕೋವಿಡ್​ ಕೇರ್ ಸೆಂಟರ್​ನಲ್ಲಿ ಪತ್ನಿ ಸುಮಾ ಜತೆ ಶಾಸಕ ರೇಣುಕಾಚಾರ್ಯ ಸಖತ್ ಸ್ಟೆಪ್ಸ್ ಹಾಕಿದರು.

MLA Renukacharya Dance in Covid center
MLA Renukacharya Dance in Covid center

ದಾವಣಗೆರೆ: ಶಾಸಕ ಎಂಪಿ ರೇಣುಕಾಚಾರ್ಯ ಹಾಗೂ ಅವರ ಪತ್ನಿ ಸುಮಾ ಇಬ್ಬರು ಸೋಂಕಿತರ ಜೊತೆ ಸಿನಿಮಾ ಹಾಡಿಗೆ ಕೋವಿಡ್ ಕೇರ್ ಸೆಂಟರ್​ನಲ್ಲಿ ಹೆಜ್ಜೆ ಹಾಕಿದರು.

ಪತ್ನಿ ಸುಮಾ ಜತೆ ಶಾಸಕ ರೇಣುಕಾಚಾರ್ಯ ಸಖತ್ ಸ್ಟೆಪ್ಸ್

ಸೋಂಕಿತರಲ್ಲಿರುವ ಕೊರೊನಾ ಭಯ ದೂರ ಮಾಡುವ ಉದ್ದೇಶದಿಂದ ಈ ರೀತಿಯಾಗಿ ನಡೆದುಕೊಂಡಿದ್ದಾರೆ. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಮಾದನಬಾವಿಯಲ್ಲಿರುವ ಕೋವಿಡ್ ಕೇರ್ ಸೆಂಟರ್​ನಲ್ಲಿ 180 ಸೋಂಕಿತರು ಇದ್ದು, ಇವರಿಗಾಗಿ ಶಾಸಕ ಎಂಪಿ ರೇಣುಕಾಚಾರ್ಯ ಆರ್ಕೇಸ್ಟ್ರಾ ಆಯೋಜನೆ ಮಾಡಿದರು.

MLA Renukacharya Dance in Covid center
ಕೋವಿಡ್ ಸೆಂಟರ್​ನಲ್ಲಿ ಶಾಸಕ ಸಖತ್​​ ಡ್ಯಾನ್ಸ್​

ಸಿನಿಮಾ ಹಾಡುಗಳನ್ನು ಹಾಡಿ ಸೋಂಕಿತರಲ್ಲಿನ ಕೊರೊನಾ ಭಯ ಹೋಗಲಾಡಿಸಲು ವಿನೂತನ ಪ್ರಯತ್ನ ಮಾಡಿದ್ದಾರೆ. ಎರಡು ದಿನಗಳಿಂದ ಹೊನ್ನಾಳಿ-ನ್ಯಾಮತಿ ತಾಲ್ಲೂಕುಗಳ ಕೋವಿಡ್​ ಕೇರ್​ ಸೆಂಟರ್​ಗಳಲ್ಲಿ ಆರ್ಕೇಸ್ಟ್ರಾ ಆಯೋಜನೆ ಮಾಡಿದ್ದು, ದಂಪತಿಗಳು ಆರ್ಕೇಸ್ಟ್ರಾ ವೀಕ್ಷಣೆ ಮಾಡಿದರು.

ಅಲ್ಲದೆ ಶಾಸಕ ಎಂ.ಪಿ ರೇಣುಕಾಚಾರ್ಯ ಬಾಲಕನ ಜೊತೆ ಪೊಗರು ಚಿತ್ರದ ಖರಾಬು ಬಾಸು ಖರಾಬು ಸಾಂಗ್​ಗೆ ಸಖತ್ ಹೆಜ್ಜೆ ಹಾಕಿದರು. ನಂತರ ಮಹಿಳೆಯರ ಜೊತೆ ಯಾರೇ ನೀನು ರೋಜಾ ಹೂವೇ ಹಾಡಿಗೆ ಸಖತ್ ಡ್ಯಾನ್ಸ್ ಮಾಡಿದರು.

ಶಾಸಕರು ಡ್ಯಾನ್ಸ್ ಮಾಡುವುದರ ಮೂಲಕ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವ ಪ್ರಯತ್ನ ಮಾಡುತ್ತಿದ್ದು, ಕೊನೆಗೆ ಪತ್ನಿಯ ಜೊತೆ ಕುಲದಲ್ಲಿ ಕೀಳ್ಯಾವುದೋ ಎನ್ನುವ ಹಾಡಿಗೆ ಹೆಜ್ಜೆ ಹಾಕಿ ಸೋಂಕಿತರನ್ನು ಹುರಿದುಂಬಿಸುವ ಕೆಲಸ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.