ದಾವಣಗೆರೆ : 15 ಸಚಿವರನ್ನ ಕ್ಯಾಬಿನೆಟ್ನಿಂದ ಕೈಬಿಡಬೇಕು, ದುರಹಂಕಾರಿ ಸಚಿವರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷರಿಗೆ ದೂರು ನೀಡಿದ್ದೇನೆ ಎಂದು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಸ್ವಪಕ್ಷೀಯ ಸಚಿವರ ವಿರುದ್ಧವೇ ಗುಡುಗಿದ್ದಾರೆ.
ದಾವಣಗೆರೆಯ ಹೊನ್ನಾಳಿಯಲ್ಲಿ ವಾಗ್ದಾಳಿ ನಡೆಸಿದ ಅವರು, 15 ದುರಹಂಕಾರಿ ಸಚಿವರ ವಿರುದ್ಧ ನಾನು ಬಿಜೆಪಿ ರಾಜ್ಯಾಧ್ಯಕ್ಷರಿಗೆ ದೂರು ನೀಡಿದ್ದೇನೆ. ನಾವು ಕರೆ ಮಾಡಿದರೆ ನಮ್ಮ ಕರೆಯನ್ನ ಸ್ವೀಕರಿಸೋದಿಲ್ಲ. ಅವರಿಗೆ ಅಭಿವೃದ್ದಿ ಕೆಲಸಕ್ಕೆ ಪತ್ರ ಕೊಟ್ಟರೆ ಅವರ ಆಪ್ತ ಕಾರ್ಯದರ್ಶಿ ಪರಿಶೀಲಿಸಿ ಅಂತಾ ಅಧಿಕಾರಿಗಳಿಗೆ ಹೇಳುತ್ತಾರೆ.
ಇದು ಶಾಸಕರಿಗೆ ಮಾಡುತ್ತಿರುವ ಅವಮಾನ ಅಂತಾ 15 ಸಚಿವರನ್ನ ಕ್ಯಾಬಿನೆಟ್ನಿಂದ ವಜಾ ಮಾಡಿ ಸಿಎಂಗೆ, ಬಿಜೆಪಿ ರಾಜ್ಯಾಧ್ಯಕ್ಷರಿಗೆ ಒತ್ತಾಯಿಸಿದ್ದೇನೆ. ನಾನು 15 ಸಚಿವರ ವಿರುದ್ಧ ಲಿಖಿತ ದೂರು ನೀಡಿಲ್ಲ. ಕರೆ ಮಾಡಿ ಸಚಿವರ ವರ್ತನೆ ಬಗ್ಗೆ ರಾಜ್ಯಾಧ್ಯಕ್ಷರ ಗಮನಕ್ಕೆ ತಂದಿದ್ದೇನೆ. ನಾಲ್ಕು ದಿನದಲ್ಲಿ ಸಚಿವರ ಸಭೆ ಕರೆಯುತ್ತೇನೆ ಅಂತಾ ಕಟೀಲ್ ಹೇಳಿದ್ದಾರೆ ಎಂದು ದುರಂಹಕಾರಿ ಸಚಿವರು ಕ್ಯಾಬಿನೆಟ್‌ನಲ್ಲಿರೋದು ಬೇಡ, ಅವರನ್ನ ಸಂಪುಟದಿಂದ ವಜಾ ಮಾಡುವಂತೆ ರೇಣುಕಾಚಾರ್ಯ ಸ್ವಪಕ್ಷದವರ ವಿರುದ್ಧವೇ ಗುಡುಗಿದರು.
ನಾ ಸಚಿವರೊಬ್ಬರಿಗೆ ಕರೆ ಮಾಡಿದೆ, ಅವರು ರಿಸೀವ್ ಮಾಡಿಲ್ಲ
ನಾನು ಸಚಿವರೊಬ್ಬರಿಗೆ ಕರೆ ಮಾಡಿದೆ. ಅವರು ಕರೆ ರಿಸೀವ್ ಮಾಡಿಲ್ಲ. ಅವರ ಆಪ್ತ ಕಾರ್ಯದರ್ಶಿಗೆ ಮಾಡಿದರೆ ಕೋವಿಡ್ ಬಂದಿದೆ ಎಂದು ಹೇಳಿದ್ದಾರೆ. ಆದರೆ, ಅದೇ ಸಚಿವರು ಸಚಿವ ಸಂಪುಟ ಸಭೆಗೆ ಹಾಜರಾಗಿದ್ದಾರೆ. ಇದು ನನಗೆ ಸಾಕಷ್ಟು ಬೇಸರ ತಂದಿರುವ ವಿಚಾರ. ಆದ್ದರಿಂದ, ನಾನು ರಾಜ್ಯಾಧ್ಯಕ್ಷರ ಜೊತೆ ಇದನ್ನು ಹೇಳಿದ್ದೇನೆ.
ದುರಹಂಕಾರಿ ಸಚಿವರ ಹೆಸರುಗಳನ್ನು ಹೇಳಿದ್ದೇನೆ. ಇಂತಹವರಿಂದ ಪಕ್ಷಕ್ಕೆ-ಸಂಘಟನೆಗೆ ಮುಜುಗರವಾಗುತ್ತದೆ ಎಂದು ಹೇಳಿದ್ದೇನೆ. ಇನ್ನು ನಾಲ್ಕು ದಿನಗಳಲ್ಲಿ ರಾಜ್ಯಾಧ್ಯಕ್ಷರು ಅವರನ್ನು ಕರೆಸಿ ಮಾತನಾಡುತ್ತಾರೆ. ಇಂತಹ ದುರಹಂಕಾರಿ ಸಚಿವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ರೇಣುಕಾಚಾರ್ಯ ಒತ್ತಾಯಿಸಿದರು.
ಓದಿ: ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ