ದಾವಣಗೆರೆ : ಬಿಜೆಪಿ ಸರ್ಕಾರ ಬಂದಾಗಲೆಲ್ಲ ಅವರೇ ಸಚಿವರಾಗಬೇಕಾ?. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನ ಆಗಲು ನಾನು ಯತ್ನಾಳ್ ಎಷ್ಟು ಪ್ರಯತ್ನ ಮಾಡಿದ್ದೇವೆ. ನಮಗೆ ಸಚಿವರಾಗುವ ಯೋಗ್ಯತೆ ಇಲ್ಲವಾ? ಎಂದು ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಹೊನ್ನಾಳಿ ಪಟ್ಟಣದಲ್ಲಿ ಮಾತನಾಡಿದ ಅವರು, ಕೆಲ ಸಚಿವರಂತು ಶಾಸಕರ ಫೋನ್ ರಿಸೀವ್ ಮಾಡಲ್ಲ. ಶಾಸಕರು ಪತ್ರ ಕೊಟ್ಟರೇ ಸಚಿವರು ಉತ್ತರಾ ಕೊಡಬೇಕು?. ಆದ್ರೆ, ಸಚಿವರ ಆಪ್ತ ಸಹಾಯಕರು ಶರಾ ಬರೆಯುತ್ತಾರೆ. ಇದರಿಂದ ನಮಗೆ ಬೇಜಾರು, ಅವಮಾನ ಆಗುತ್ತದೆ. ಇಂತಹ ಸಚಿವರು ಬೇಕಾ? ಎಂದು ಕೆಲ ಸಚಿವರ ವಿರುದ್ಧ ಶಾಸಕ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ನಮಗೆ ಅವಕಾಶ ಕಲ್ಪಿಸಲಿ : ಈಗ ನಾಲ್ಕು ಸಚಿವ ಸ್ಥಾನ ಖಾಲಿ ಇವೆ. ಸತತ ಸಚಿವರಾದವರು ತಾವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಮಾರ್ಚ್ನಲ್ಲಿ ಸಂಪುಟ ವಿಸ್ತರಣೆ ಬೇಡ. ಈಗಲೇ ಸಂಪುಟ ವಿಸ್ತರಣೆ ಆಗಲಿ. ಅಗತ್ಯ ಬಿದ್ದರೇ ದೆಹಲಿಗೂ ಹೋಗುತ್ತೇವೆ. ಈ ವಿಚಾರದ ಬಗ್ಗೆ ನಾನು ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಸೇರಿ ನಿರ್ಧರಿಸಿದ್ದೇವೆ ಎಂದರು.
ಯತ್ನಾಳ್ ಮತ್ತು ನಾನು ಪರಸ್ಪರ ವಾಗ್ದಾಳಿ ಮಾಡಿದ್ದೇವೆ. ಆದ್ರೆ, ಮತ್ತೆ ಬಿಜೆಪಿ ಸರ್ಕಾರ ಬರಬೇಕು. ಹೊಸಬರಿಗೆ ಸಚಿವ ಸ್ಥಾನ ಸಿಗಬೇಕು ಎಂಬ ಕಾರಣಕ್ಕೆ ಒಂದಾಗಿದ್ದೇವೆ. ನಮಗೆ ಸಚಿವರಾಗುವ ಯೋಗ್ಯತೆ ಇಲ್ಲವೇ?. ನಾಲ್ಕು ಸಚಿವ ಸ್ಥಾನ ಖಾಲಿಯಿದ್ದರೂ ಸಹ ಬೇರೆಯವರಿಗೆ ಹೆಚ್ಚುವರಿ ಕೊಟ್ಟಿದ್ದಾರೆ.
ಅವರು ಕಾರು ಸೇರಿದಂತೆ ಎಲ್ಲ ಬಳಕೆ ಮಾಡಿತ್ತಿದ್ದಾರೆ. ಸರ್ಕಾರಕ್ಕೆ ಹೊರಯಾಗುತ್ತಿದೆ. ನಮಗೂ ಸಚಿವ ಸ್ಥಾನ ಕೊಡಲಿ. ಈ ಎಲ್ಲ ವಿಚಾರವನ್ನ ಯತ್ನಾಳ್ ಜತೆ ಮಾತಾಡಿರುವೆ. ಇದು ಚುನಾವಣೆ ವರ್ಷ. ವಿಳಂಬ ಮಾಡಿ ಸಚಿವ ಸ್ಥಾನ ಕೊಟ್ಟರೇ ಉಪಯೋಗವಿಲ್ಲ. ಕೊಡುವುದಿದ್ದರೇ ಬೇಗ ಕೊಡಿ ಎಂದು ಆಗ್ರಹಿಸಿದರು.
ವಿಜಯೇಂದ್ರ ಪರ ಮಾತನಾಡಲ್ಲ : ವಿಜಯೇಂದ್ರ ಕೇವಲ ಬಿಎಸ್ವೈ ಪುತ್ರ ಅಂತಾ ಹೇಳಲ್ಲ. ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಸೇವೆ ಮಾಡುತ್ತಿದ್ದಾರೆ. ಅವರದ್ದೇ ಆದ ವರ್ಚಸ್ಸು ಇದೆ. ಅವರಿಗೆ ಸಚಿವ ಸ್ಥಾನ ನೀಡುವುದರ ಬಗ್ಗೆ ವರಿಷ್ಠರು ನಿರ್ಧಾರ ಮಾಡುತ್ತಾರೆ. ಆದ್ರೆ, ಹೊಸ ಮುಖಗಳಿವೆ ಅವಕಾಶ ನೀಡಿ. ಪಕ್ಷ ಮತ್ತೆ ಅಧಿಕಾರಕ್ಕೆ ಬರಲು ಅನುಕೂಲ ಆಗುತ್ತದೆ ಎಂದು ರೇಣುಕಾಚಾರ್ಯ ಸಲಹೆ ನೀಡಿದರು.
ಇದನ್ನೂ ಓದಿ: ಪಂಚರಾಜ್ಯಗಳ ಚುನಾವಣೆ: ಉತ್ತರಪ್ರದೇಶದಲ್ಲಿ ಐಟಿ ದಾಳಿ, 3 ಕೋಟಿ ರೂ. ವಶ