ETV Bharat / state

ಸಹಜ ಸಾವಲ್ಲ, ಅಪಘಾತವೂ ಅಲ್ಲ; ಇದು ಕಾಣದ ಕೈಗಳ ಕೆಲಸ: ಎಂ ಪಿ ರೇಣುಕಾಚಾರ್ಯ - ಶಾಸಕ ರೇಣುಕಾಚಾರ್ಯ ಸಹೋದರನ ಮಗನ ಶವ ಪತ್ತೆ

ನನ್ನ ಮಗನದ್ದು ಸಹಜ ಸಾವಲ್ಲ, ಅಪಘಾತವೂ ಅಲ್ಲ. ಇದರ ಹಿಂದೆ ಕಾಣದ ಕೈಗಳಿವೆ- ಶಾಸಕ ಎಂ ಪಿ ರೇಣುಕಾಚಾರ್ಯ ಆರೋಪ.

MLA MP Renukacharya
ಶಾಸಕ ಎಂ.ಪಿ ರೇಣುಕಾಚಾರ್ಯ
author img

By

Published : Nov 4, 2022, 7:08 AM IST

Updated : Nov 4, 2022, 10:07 AM IST

ದಾವಣಗೆರೆ: ನನ್ನ ಮಗನ ಸಾವಿನ ಹಿಂದೆ ಕಾಣದ ಕೈಗಳಿವೆ. ಲಕ್ಷಾಂತರ ಜನ ಆತನ ಮದುವೆಗೆ ಬರಬೇಕಾಗಿತ್ತು. ಆದರೆ ಇದೀಗ ಈ ಸ್ಥಿತಿಯಲ್ಲಿ ನೋಡಲು ಜನ ಬಂದಿದ್ದಾರೆ ಎಂದು ಶಾಸಕ ಎಂ ಪಿ ರೇಣುಕಾಚಾರ್ಯ ಸಹೋದರನ ಮಗನ ಸಾವಿಗೆ ಮರುಗಿದರು.‌

ದಾವಣಗೆರೆ ಜಿಲ್ಲೆಯ ಹೊನ್ನಾಳಿ ನಿವಾಸದ ಬಳಿ ಮಾತನಾಡಿದ ಅವರು, ಆ ದೇವರು ನನ್ನನ್ನಾದ್ರೂ ಬಲಿ ಪಡೆಯಲ್ಲಿವೇ?, ಅವನು ಏನ್​ ಅನ್ಯಾಯ ಮಾಡಿದ್ದ?, ಕೈಲಾದ ಮಟ್ಟಿಗೆ ದಾನ-ಧರ್ಮ ಮಾಡುತ್ತಿದ್ದ ಚಂದ್ರುಗೆ ಇಂತಹ ಸ್ಥಿತಿ ಏಕೆ?, ಪ್ರವಾಸಕ್ಕೆ ಹೋಗಬೇಕು ಎನ್ನುತ್ತಿದ್ದ. ಇದು ಬಹಳ ನೋವಿನ ಸಂಗತಿ. ಈ ಅಧಿಕಾರ, ರಾಜಕೀಯ ಏನೂ ಬೇಡ ಎಂದರು.

ಎಂ ಪಿ ರೇಣುಕಾಚಾರ್ಯ, ಎಸ್​ಪಿ ಸಿ.ಬಿ ರಿಷ್ಯಂತ್ ಪ್ರತಿಕ್ರಿಯೆ

ಕಾರನ್ನು ವ್ಯವಸ್ಥಿತವಾಗಿ ಕಾಲುವೆಗೆ ತಳ್ಳಿದ್ದಾರೆ: ನನ್ನ ಮಗ ಚಂದ್ರು ಕಾರಿನ ಹಿಂಭಾಗ ಮಲಗಿದ್ದಾನೆ. ವ್ಯವಸ್ಥಿತವಾಗಿ ಕಾರನ್ನು ಕಾಲುವೆಗೆ ತಳ್ಳಿದ್ದಾರೆ. ಇದು ಸಹಜ ಸಾವೋ ಇಲ್ಲ ಅಪಘಾತವೋ ಎಂಬುವುದನ್ನು ನೀವೇ ತೀರ್ಮಾನ ಮಾಡಿ. ಕಾರು ಚಾಲನೆ ಮಾಡುತ್ತಿದ್ದ ಚಂದ್ರು ಮುಂದಿನ‌ ಸೀಟ್​​ನಲ್ಲಿರಬೇಕಿತ್ತು. ಆದರೆ ಹಿಂಬದಿ ಸೀಟ್​​ನಲ್ಲಿ ಮಲಗಿದ್ದಾನೆ. ಹಾಗಾಗಿ, ಇದು ಸಹಜ ಸಾವಲ್ಲ, ಅಪಘಾತವೂ ಅಲ್ಲ. ನಾನು ಈಗಾಗಲೇ ಇದು ಕಿಡ್ನ್ಯಾಪ್ ಎಂದು ಖಚಿತವಾಗಿ ಹೇಳಿದ್ದೆ. ಯಾರನ್ನೂ ಆರೋಪಿ ಸ್ಥಾನದಲ್ಲಿ ನಿಲ್ಲಿಸಲ್ಲ. ಅವನ ಕಾರನ್ನು ಸ್ವಿಫ್ಟ್ ಡಿಸೈರ್‌ ಹಾಗೂ ಓಮಿನಿ ಎರಡು ಕಾರು ಫಾಲೋ ಮಾಡಿದೆ. ಅವರೇ ವ್ಯವಸ್ಥಿತವಾಗಿ ಈ ರೀತಿ ಮಾಡಿದ್ದಾರೆ ರೇಣುಕಾಚಾರ್ಯ ಆರೋಪಿಸಿದರು.

ದೂರಿನ ಆಧಾರದ ಮೇಲೆ ತನಿಖೆ: ಎಸ್​ಪಿ ಸಿ.ಬಿ ರಿಷ್ಯಂತ್ ಪ್ರತಿಕ್ರಿಯಿಸಿ, "ಕಾಣೆಯಾಗಿದ್ದ ಚಂದ್ರಶೇಖರ್ ಎಂಬ ಯುವಕ ಕಾರು ಸಮೇತ ಶವವಾಗಿ ಪತ್ತೆಯಾಗಿದ್ದಾನೆ. ಈಗಾಗಲೇ ಫಾರೆನ್ಸಿಕ್ ಟೀಂ ಆಗಮಿಸಿ ಪರಿಶೀಲನೆ ನಡೆಸಿ, ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದೆ. ಹೆಚ್ಚಿನ ತನಿಖೆ ನಡೆಸಲು ಮೃತ ದೇಹವನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ತುಂಗಾ ಕಾಲುವೆಯಲ್ಲಿ ಕಾರಿನ ಮೇಲಿನ ಭಾಗ ಕಾಣಿಸುತ್ತಿತ್ತು. ಆಗ ಈಜುಗಾರರನ್ನು ನೀರಿಗಿಳಿಸಿ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಚಂದ್ರು ಕುಟುಂಬಸ್ಥರು ಯಾವ ರೀತಿಯ ದೂರು ದಾಖಲು ಮಾಡ್ತಾರೋ ಅದನ್ನು ನೋಡಿಕೊಂಡು ಎಲ್ಲಾ ಕಡೆಯಿಂದ ತನಿಖೆ ಮಾಡುತ್ತೇವೆ" ಎಂದು ತಿಳಿಸಿದರು.

ಇದನ್ನೂ ಓದಿ: ತುಂಗಾ ಕಾಲುವೆಗೆ ಬಿದ್ದ ಕಾರಿನಲ್ಲಿ ಅಣ್ಣನ ಮಗನ ಶವ ಪತ್ತೆ.. ಮುಗಿಲು ಮುಟ್ಟಿದ ರೇಣುಕಾಚಾರ್ಯ ಆಕ್ರಂದನ

Last Updated : Nov 4, 2022, 10:07 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.