ದಾವಣಗೆರೆ : ಎಲ್ಲಾ ಮಕ್ಕಳು ಒಂದಾಗಿರಬೇಕು ಎಂದು ಶಾಲೆಗಳಲ್ಲಿ ಸಮವಸ್ತ್ರ ಮಾಡಲಾಗಿದೆ. ಆದರೆ, ಉಡುಪಿಯಲ್ಲಿ ಆರು ವಿಧ್ಯಾರ್ಥಿಗಳಿಂದ ಪ್ರಾರಂಭವಾದ ಹಿಜಾಬ್ ವಿವಾದ ಈಗ ರಾಜಕೀಯವಾಗಿದೆ. ಶಿಕ್ಷಣ ವಿಚಾರದಲ್ಲಿ ರಾಜಕೀಯ ಬೆರೆಸಬಾರದು ಎಂದು ಶಾಸಕ ಎಂ ಪಿ ರೇಣುಕಾಚಾರ್ಯ ಬೇಸರ ವ್ಯಕ್ತಪಡಿಸಿದರು.
ಈ ಬಗ್ಗೆ ಹೊನ್ನಾಳಿ ತಾಲೂಕಿನಲ್ಲಿ ಮಾತನಾಡಿದ ಅವರು, ಎಲ್ಲಾ ಮಕ್ಕಳು ಕಡ್ಡಾಯವಾಗಿ ಸಮವಸ್ತ್ರವನ್ನು ಧರಿಸುವಂತೆ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಈಗ ಬೆಳಗಾವಿ, ಚಿಕ್ಕಮಗಳೂರು, ಮಂಗಳೂರು, ಹಿಜಾಬ್ ವಿವಾದ ಬುಗಿಲೆದ್ದಿದೆ.
ಎಲ್ಲಾ ಕಡೆ ಸಂಘರ್ಷ ಇರಬಾರದು, ಸಮನ್ವಯತೆ ಇರಬೇಕು. ಮಕ್ಕಳಲ್ಲಿ ತಾರತಮ್ಯ ಹೋಗಲಾಡಿಸಲು ಸಮವಸ್ತ್ರದಿಂದ ಮಾತ್ರ ಸಾಧ್ಯ. ಹಿಜಾಬ್, ಕೇಸರಿ ಶಾಲು ಧರಿಸದೆ ಸಮವಸ್ತ್ರ ಧರಿಸುವಂತೆ ಮಕ್ಕಳಿಗೆ ಎಂ ಪಿ ರೇಣುಕಾಚಾರ್ಯ ಮನವಿ ಮಾಡಿದರು.
ನಾವು ಅಲ್ಪಸಂಖ್ಯಾತರನ್ನು ದ್ವೇಷಿಸಲ್ಲ, ಇಂತಹ ಸಂಘರ್ಷ ನಮ್ಮ ಹೊನ್ನಾಳಿ, ನ್ಯಾಮತಿ ತಾಲೂಕಿನ ಮಕ್ಕಳಲ್ಲಿ ಈ ರೀತಿಯ ಸ್ವಭಾವ ಇಲ್ಲ ಎಂದರು.