ETV Bharat / state

ಆಕ್ಷೇಪಾರ್ಹ ಪದ ಬಳಕೆ ಆರೋಪದ ವಿಡಿಯೋ ವೈರಲ್​: ಸಚಿವ ಎಸ್​.ಎಸ್.ಮಲ್ಲಿಕಾರ್ಜುನ್​ ಸ್ಪಷ್ಟನೆ - ಬಿಜೆಪಿ ವಿರುದ್ಧ ಸಚಿವ​​ ಮಲ್ಲಿಕಾರ್ಜುನ್​ ವಾಗ್ದಾಳಿ

ಸಚಿವ ಎಸ್.​ಎಸ್.ಮಲ್ಲಿಕಾರ್ಜುನ್​ ಅವರು ಆಕ್ಷೇಪಾರ್ಹ ಪದಬಳಕೆ ಮಾಡಿದ್ದಾರೆ ಎನ್ನಲಾದ ವಿಡಿಯೋ ವೈರಲ್​ ಆಗಿದ್ದು, ಈ ಬಗ್ಗೆ ಸಚಿವರು ಸ್ಪಷ್ಟನೆ ನೀಡಿದ್ದಾರೆ.

ಎಸ್​ಎಸ್​​ ಮಲ್ಲಿಕಾರ್ಜುನ್
ಎಸ್​ಎಸ್​​ ಮಲ್ಲಿಕಾರ್ಜುನ್
author img

By

Published : Aug 15, 2023, 4:50 PM IST

Updated : Aug 15, 2023, 10:55 PM IST

ಸಚಿವ ಎಸ್​.ಎಸ್.ಮಲ್ಲಿಕಾರ್ಜುನ್​ ಸ್ಪಷ್ಟನೆ

ದಾವಣಗೆರೆ: ತೋಟಗಾರಿಕಾ ಸಚಿವ ಎಸ್.​ಎಸ್.ಮಲ್ಲಿಕಾರ್ಜುನ್​ ಅವರು ಮಾತನಾಡಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಈ ವಿಡಿಯೋದಲ್ಲಿ ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಸಚಿವ ಎಸ್.​ಎಸ್.ಮಲ್ಲಿಕಾರ್ಜುನ್ ಸ್ಪಷ್ಟನೆ ನೀಡಿದ್ದಾರೆ.

ಇಂದು ದಾವಣಗೆರೆಯಲ್ಲಿ ಸ್ವಾತಂತ್ರೋತ್ಸವ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ ಅವರು, "ಉಪೇಂದ್ರ ಅವರ ಪ್ರಕರಣದ ಬಗ್ಗೆ ನನಗೆ ಗೊತ್ತಿಲ್ಲ. ನಾನು ಆ ರೀತಿಯ ಪದ ಬಳಕೆ ಮಾಡಿಲ್ಲ. ಒಳ್ಳೆದು ಮಾಡಿ, ಹೊಲಸು ಮಾಡಬೇಡಿ ಎಂದು ಹೇಳಿದ್ದೇನೆ ಅಷ್ಟೇ, ಅದನ್ನು ತಿರುಚಲಾಗಿದೆ" ಎಂದರು.

ಬಿಜೆಪಿ ವಿರುದ್ಧ ವಾಗ್ದಾಳಿ: "ನಮ್ಮ ಸರ್ಕಾರ ಬೀಳುತ್ತೆ ಎಂದು ಹೇಳಿದ್ದ ಬಿಜೆಪಿಗರೇ ಗುಂಡಿಗೆ ಬಿದ್ದಿದ್ದಾರೆ. ಐದು ವರ್ಷದಲ್ಲಿ ಅವರು ಮಾಡ್ಬಾರದ್ದನ್ನು ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಒಳ್ಳೆಯ ಆಡಳಿತ ನೀಡ್ತಾರೆ, ಜನರಿಗೆ ಮುಟ್ಟುವಂತಹ ಯೋಜನೆಗಳನ್ನು ಸರ್ಕಾರ ನೀಡುತ್ತಿದೆ" ಎಂದು ತಿಳಿಸಿದರು.

ಮರಳು ಪಾಲಿಸಿ ವಿಚಾರ: ಜನಸಾಮಾನ್ಯರಿಗೆ ಸುಲಭವಾಗಿ ಮರಳು ಸಿಗುವಂತೆ ನಿಯಮ ಮಾಡ್ತಿದ್ದೇವೆ ಎಂದರು. ಇನ್ನು, ಜಲಸಿರಿ ಯೋಜನೆಯನ್ನು ಸರಿಪಡಿಸುತ್ತೇವೆ. ದಾವಣಗೆರೆ ಜಿಲ್ಲೆಯಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳಾಗಬೇಕಿದೆ. ಸದ್ಯ ಐದು ಗ್ಯಾರಂಟಿಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಜಲಜೀವನ್​ ಯೋಜನೆಯನ್ನು ಆದಷ್ಟು ಬೇಗೆ ಕಾರ್ಯಉಫಕ್ಕೆ ತರಲಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ವರದಿ ಸಿದ್ದಪಡಿಸುತ್ತಿದ್ದಾರೆ ಎಂದು ಹೇಳಿದರು.

ಸೂಳೆಕೆರೆ ನೀರು ಕಲುಷಿತಗೊಂಡ ವಿಚಾರಕ್ಕೆ, "ಜಿ.ಪಂ ಸಿಇಒ ಗಮನಕ್ಕೆ ತರಲಾಗಿದೆ. ಪರಿಹಾರ ಹುಡುಕಲು ತಿಳಿಸಿದ್ದೇನೆ. ಕೆರೆಗೆ ತ್ಯಾಜ್ಯ ಸೇರುತ್ತಿದೆ ಎಂದು ಪಾಂಡೋಮಟ್ಟಿ ಸ್ವಾಮೀಜಿ ಕೂಡ ನನ್ನ ಗಮನಕ್ಕೆ ತಂದಿದ್ದಾರೆ. ತ್ಯಾಜ್ಯವನ್ನು ತಡೆಯಲು ಹಾಗು ಡೈವರ್ಟ್ ಮಾಡಲು ಸರ್ವೇ ಮಾಡ್ತೀದ್ದೇವೆ. ಕೆರೆ ನೀರು ಹಲವು ಗ್ರಾಮಗಳಿಗೆ ಸರಬರಾಜು ಆಗುತ್ತಿರುವುದರಿಂದ ಸರ್ವೇ ಮಾಡುತ್ತಿದ್ದು, ಪರೀಕ್ಷಾ ವರದಿ ಬಂದ ತಕ್ಷಣ ಕ್ರಮ ಕೈಗೊಳುತ್ತೇವೆ" ಎಂದು ಹೇಳಿದರು.

ಮಳೆ ಬಾರದ ಕಾರಣ ಬೆಳೆ ಒಣಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, "ಮುಂದಿನ ವಾರ ಸಭೆ ನಡೆಯಲಿದ್ದು, ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ. ಜಿಲ್ಲಾಧಿಕಾರಿ ಗಮನಕ್ಕೂ ತಂದಿದ್ದೇವೆ" ಎಂದರು. ನಗರದಲ್ಲಿ ಹೆಚ್ಚಾದ ಲೋಡ್ ಶೆಡ್ಡಿಂಗ್​ಗೆ ಕುರಿತು ಮಾತನಾಡಿ, "ರಾಯಚೂರು ವಿದ್ಯುತ್ ಉತ್ಪಾದನಾ ಘಟಕದಲ್ಲಿ ಸಮಸ್ಯೆ ಆಗಿದ್ದು ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿತ್ತು. ಇನ್ಮುಂದೆ ಈ ಸಮಸ್ಯೆ ಆಗಲ್ಲ" ಎಂದು ಸಚಿವರು ಭರವಸೆ ಕೊಟ್ಟರು.

ಇದೇ ವೇಳೆ ದಾವಣಗೆರೆ ಇನ್ನೂ ಹೆಚ್ಚಿನ ಅಭಿವೃದ್ಧಿ ಪಥದೆಡೆಗೆ ಸಾಗಬೇಕಿದೆ. ಮುಖ್ಯವಾಗಿ ಜಿಲ್ಲೆಯಾದ್ಯಂತ ಇರುವ ಕೆರಗಳನ್ನು ತುಂಬಿಸುವ ಯೋಜನೆ ಮತ್ತು ರೈತಪರ ಕೆಲಸಗಳನ್ನು ನಮ್ಮ ಸರ್ಕಾರ ಮಾಡುತ್ತದೆ ಎಂಬ ವಿಶ್ವಾಸವಿದೆ. ಅದೇ ರೀತಿಯಾಗಿ ಜಿಲ್ಲೆಯಲ್ಲಿನ ಹೆಚ್ಚಿನ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದಾಗಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಭರವಸೆ ನೀಡಿದರು.

ಇದನ್ನೂ ಓದಿ: Satish Jarakiholi: ಜಿಲ್ಲೆ ವಿಭಜನೆಗೂ‌ ಮೊದಲು ಬೆಳಗಾವಿ ಹೊಸ ತಾಲೂಕು ರಚನೆ- ಸಚಿವ ಸತೀಶ್ ಜಾರಕಿಹೊಳಿ

Last Updated : Aug 15, 2023, 10:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.