ETV Bharat / state

ಕುಮಾರಸ್ವಾಮಿ ಲಾಟರಿ‌ ಮುಖ್ಯಮಂತ್ರಿ, ಸಂಘ ಪರಿವಾರದ ಬಗ್ಗೆ ಮಾತನಾಡಿದ್ರೆ ಭಸ್ಮ ಆಗ್ತೀರ: ರೇಣುಕಾಚಾರ್ಯ

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ನವರಿಗೆ ಸಂಘ ಪರಿವಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಸಂಘಪರಿವಾರದ ವಿರುದ್ಧ ಮಾತನಾಡುವವರು ದೇಶದ್ರೋಹಿಗಳು. ಸಂಘದ ಬಗ್ಗೆ ಮಾತನಾಡಿದರೆ ಸುಟ್ಟು ಭಸ್ಮ ಆಗುತ್ತಾರೆ ಎಂದು ಶಾಸಕ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

minister-renukacharya-statement-against-hdk
ಸಂಘದ ಬಗ್ಗೆ ಮಾತನಾಡಿದರೆ ಸುಟ್ಟು ಭಸ್ಮ ಆಗುತ್ತಾರೆ ಎಂದು ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.
author img

By

Published : Jun 28, 2022, 5:01 PM IST

ದಾವಣಗೆರೆ : ಕುಮಾರಸ್ವಾಮಿ ಲಾಟರಿ‌ ಮುಖ್ಯಮಂತ್ರಿ ಆಗಿದ್ದವರು. ಅಂತವರು ಸಂಘ ಪರಿವಾರದ ಬಗ್ಗೆ ಮಾತನಾಡಿದರೆ ಭಸ್ಮ ಆಗ್ತಾರೆ ಎಂದು ಹೊನ್ನಾಳಿ ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಕಿಡಿಕಾರಿದ್ದಾರೆ. ರಾಜ್ಯದಿಂದ ಆರ್​ಎಸ್​ಎಸ್ 40% ಕಮಿಷನ್ ಪಡೆಯುತ್ತಿದೆ ಎಂದು ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ಹೇಳಿಕೆಗೆ ಅವರು ಗರಂ ಆದರು.

ಹೀಗೆ ಮಾತನಾಡುವ ಹೆಚ್​ ಡಿ ಕುಮಾರಸ್ವಾಮಿಗೆ ನಾಚಿಕೆಯಾಗಬೇಕು, ಸಂಘ ಪರಿವಾರದವರಿಗೆ ಕುಟುಂಬ ಸಂಸಾರ ಇದೆಯಾ ಎಂದು ಪ್ರಶ್ನಿಸಿದರು.‌ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೆ ಎಷ್ಟು ಪರ್ಸೆಂಟ್ ಇದೆ. ರೇವಣ್ಣ ಸಚಿವರಾಗಿ ಎಷ್ಟು ಲೂಟಿ ಹೊಡೆದಿದ್ದಾರೆ. ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿ ಲೂಟಿ ಹೊಡೆದಿಲ್ವಾ ಎಂದು ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.

ಸಂಘದ ಬಗ್ಗೆ ಮಾತನಾಡಿದರೆ ಸುಟ್ಟು ಭಸ್ಮ ಆಗುತ್ತಾರೆ ಎಂದು ಶಾಸಕ ರೇಣುಕಾಚಾರ್ಯ ವಾಗ್ದಾಳಿ

ಇವರಿಗೆ ಸಂಘ ಪರವಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಈ ಹಿಂದೆ ನಮ್ಮಿಂದ ಅಧಿಕಾರಕ್ಕೆ ಬಂದಿದ್ರಿ. ನೀವು ಅಂದು ಲಾಟರಿ‌ ಮುಖ್ಯಮಂತ್ರಿ ಕುಮಾರಸ್ವಾಮಿ ಆದವರು. ಸಂಘ ಪರಿವಾರದ ಬಗ್ಗೆ ಮಾತನಾಡುವವರು ದೇಶದ್ರೋಹಿಗಳು, ಅವರು ಭಸ್ಮ ಆಗಿ ಹೋಗ್ತಾರೆ ಎಂದು ಶಾಸಕ ರೇಣುಕಾರ್ಯ ಕಿಡಿಕಾರಿದರು.

40% ಕಮಿಷನ್ ಆರೋಪ ಕೇಂದ್ರದಿಂದ ತನಿಖಾ ತಂಡ : 40% ಕಮಿಷನ್ ಆರೋಪದ ತನಿಖೆಗೆ ಕೇಂದ್ರದ ತಂಡ ರಾಜ್ಯಕ್ಕೆ ಆಗಮಿಸಿದ್ದು, ದೂರು ನೀಡಿದ ಹಿನ್ನೆಲೆ ತನಿಖೆ‌ ನಡೆಸುತ್ತಿದ್ದಾರೆ. ಯಾರು ತಪ್ಪು ಮಾಡಿರುತ್ತಾರೋ ಅವರಿಗೆ ಶಿಕ್ಷೆ ಆಗುತ್ತದೆ. ಉಪ್ಪು ತಿಂದವರು ನೀರು ಕುಡಿಯುತ್ತಾರೆ. ಜನತಾ ನ್ಯಾಯಾಲಯದಲ್ಲಿ ಯಾವ ಶಿಕ್ಷೆ ನೀಡುತ್ತೋ ಅದೇ ನಿಜವಾದ ಶಿಕ್ಷೆ ಎಂದು ಹೇಳಿದರು.

ದಾವಣಗೆರೆ ಜಿಲ್ಲೆಗೆ ಸಚಿವ ಸ್ಥಾನ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಸಚಿವ ಸ್ಥಾನಕ್ಕಾಗಿ ಅರ್ಜಿ ಹಾಕಿಲ್ಲ. ಅಧಿಕಾರವನ್ನು ನಾನು ಹುಡುಕಿಕೊಂಡು ಹೋಗುವುದಿಲ್ಲ. ಅದೇ ನನ್ನನ್ನು ಹುಡುಕಿಕೊಂಡು ಬರಬೇಕು. ಪಕ್ಷ, ಸಂಘವನ್ನು ನಾನು ಗೌರವಿಸುತ್ತೇನೆ. ಮಂತ್ರಿಗಿರಿಗೆ ಒತ್ತಾಯ ಮಾಡೋದಿಲ್ಲ. ಮಂತ್ರಿಸ್ಥಾನಕ್ಕೆ ಪೈಪೋಟಿ ನಡೆಸಿದ್ರೆ ಕ್ಷೇತ್ರ ಕಳೆದುಕೊಳ್ಳಬೇಕಾಗುತ್ತದೆ. ಎಲ್ಲಾ ಸಚಿವರು ನಾನು ಕೇಳಿದಷ್ಟು ಅನುದಾನ ನೀಡುತ್ತಾರೆ ಎಂದು ಹೇಳಿದರು.

ಡಿಕೆಶಿ ಮುಂದಿನ ಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೊನ್ನಾಳಿ ಶಾಸಕರು, ಮುಳುಗಿದ ಹಡಗಿಗೆ ತಾವು ನಾವಿಕ ಆಗಬೇಕು ಎಂದು ಡಿಕೆಶಿ ಪೈಪೋಟಿ ‌ನಡೆಸುತ್ತಿದ್ದಾರೆ. ಕಾಂಗ್ರೆಸ್ ಒಡೆದ ಮನೆ, ಕೇಂದ್ರದಲ್ಲೂ, ರಾಜ್ಯದಲ್ಲಿಯೂ ಅದಕ್ಕೆ ಅಸ್ತಿತ್ವ ಇಲ್ಲ. ಆಡಳಿತ ಸಂದರ್ಭದಲ್ಲಿ ದುರಾಡಳಿತ ನಡೆಸಿದ್ರು. ವಂಶಪಾರಂಪರ್ಯವಾಗಿ ಆಡಳಿತ ನಡೆಸುತ್ತಿದ್ದಾರೆ ಎಂದು ಟೀಕಿಸಿದರು. ಕಾಂಗ್ರೆಸ್​ನಲ್ಲಿ A ಯಿಂದ Zವರೆಗೂ ಗುಂಪುಗಳಿವೆ. ಒಂದು ಗುಂಪು ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಬೇಕು ಅಂತಿದ್ದರೆ, ಮತ್ತೊಂದು ಗುಂಪು ಡಿಕೆಶಿಯನ್ನು ಸಿಎಂ ಮಾಡಬೇಕು ಎಂದು ಓಡಾಡುತ್ತಿದ್ದಾರೆ. ಕೇಂದ್ರದಲ್ಲಿ ಜನಪರ ಯೋಜನೆಯಿಂದ ವಿಶ್ವದ ಜನ ನರೇಂದ್ರ ಮೋದಿ ಆಡಳಿತವನ್ನು, ರಾಜ್ಯದಲ್ಲಿ ಕೂಡ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಕೆಲಸವನ್ನು ಮೆಚ್ಚಿದ್ದಾರೆ. ಡಿಕೆಶಿ ಕನಸು ನನಸಾಗುವುದಿಲ್ಲ, ಯಾಕೆಂದರೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ. ಇನ್ನೆಷ್ಟು ದಿನ ಕನಸು ಕಾಣುತ್ತಾರೆ ಎಂದು ನೋಡೋಣ ಎಂದು ವ್ಯಂಗ್ಯವಾಡಿದರು.

ಓದಿ : ರಾಜ್ಯದ ಜನರಿಗೆ ವಿದ್ಯುತ್ ದರ ಏರಿಕೆ ಶಾಕ್: ಜು.1ರಿಂದ ಇಂಧನ ವೆಚ್ಚ ಹೊಂದಾಣಿಕೆ ಶುಲ್ಕ ಬರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.