ETV Bharat / state

ಬಿಟ್ ಕಾಯಿನ್ ಅಂದರೆ ಏನು ಅಂತಾ ಗೊತ್ತಿಲ್ಲ, ಅದರ ಬಗ್ಗೆ ಮಾಹಿತಿಯೂ ಇಲ್ಲ: ಸಚಿವ ಭೈರತಿ

ಪುನೀತ್‌ ರಾಜಕುಮಾರ್‌ ಎಲೆ ಮರೆ ಕಾಯಿಯಂತೆ ದಾನ ಮಾಡಿದ್ದಾರೆ. ಹಲವು ಸಂಸ್ಥೆಗಳ ಮೂಲಕ ಜನಸೇವೆ ಮಾಡಿದ್ದಾರೆ. ಅವರ ಸೇವೆ ಕಾರ್ಯಗಳನ್ನು ನೋಡಿದಾಗ ನನಗೆ ನಾಚಿಕೆಯಾಯ್ತು, ನಾವೇನಾದ್ರೂ ₹1 ಲಕ್ಷ ದಾನ ಮಾಡಿದ್ರೆ ಟಿವಿ, ಪತ್ರಿಕೆಯಲ್ಲಿ ಪ್ರಚಾರ ಪಡಿತೀವಿ. ದಾನ ಅಂದ್ರೆ ಅವರಂತೆ ಮಾಡಬೇಕು..

ಸಚಿವ ಭೈರತಿ ಬಸವರಾಜ್
ಸಚಿವ ಭೈರತಿ ಬಸವರಾಜ್
author img

By

Published : Nov 1, 2021, 2:40 PM IST

Updated : Nov 1, 2021, 4:18 PM IST

ದಾವಣಗೆರೆ : ಬಿಟ್ ಕಾಯಿನ್ ಅಂದರೆ ಏನು ಅಂತಾ ಗೊತ್ತಿಲ್ಲ. ಅದರ ಬಗ್ಗೆ ಮಾಹಿತಿಯೂ ಇಲ್ಲ. ಇದರಲ್ಲಿ ಯಾರು ಇದಾರೋ ಇಲ್ಲವೋ ಗೊತ್ತಿಲ್ಲ. ಈ ಬಗ್ಗೆ ಸಿಎಂ ಅವರೇ ಉತ್ತರಿಸಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ತಿಳಿಸಿದರು.

ನಗರದಲ್ಲಿಂದು ಮಾತನಾಡಿದ ಅವರು, ಸಿಂದಗಿ, ಹಾನಗಲ್ ಉಪಚುನಾವಣೆಯಲ್ಲಿ ಗೆಲುವು‌ ನಮ್ಮದೇ.. ನಾನು ಅಲ್ಲಿ ಕೆಲಸ ಮಾಡಿದ್ದು, ಮತದಾರರ ಮಿಡಿತ ಅರ್ಥ ಮಾಡಿಕೊಂಡಿದ್ದೇನೆ.

ಜನರು ನಮಗೆ ಅಶೀರ್ವಾದ ಮಾಡಿದ್ದಾರೆ ಎಂಬ ವಿಶ್ವಾಸವಿದೆ. ಬೊಮ್ಮಾಯಿ ‌ನೇತೃತ್ವದ ಸರ್ಕಾರಕ್ಕೆ ಜನ ಬೆಂಬಲ ನೀಡಿದ್ದಾರೆ. ನಾಳೆ ಎಲ್ಲವೂ ಗೊತ್ತಾಗುತ್ತೆ ಎಂದರು.

ಸಚಿವ ಭೈರತಿ, ಸಂಸದ ಜಿ.ಎಂ.ಸಿದ್ದೇಶ್ವರ್ ಹೇಳಿಕೆ

ಇಂಧನ ಬೆಲೆ ಏರಿಕೆಗೆ ಪ್ರತಿಕ್ರಿಯಿಸಿದ ಅವರು, ಕಚ್ಚಾ ತೈಲ ಬೆಲೆಯಲ್ಲಿ ಹೆಚ್ಚಳವಾಗಿರುವ ಹಿನ್ನೆಲೆ ಇಂಧನ ಬೆಲೆಯಲ್ಲಿ ಏರಿಕೆ ಆಗುತ್ತಿದೆ. ಡಾಲರ್ ಬೆಲೆ ವ್ಯತ್ಯಯವೂ ಕಾರಣವಾಗಿದೆ. ಕೆಲವೇ ದಿನಗಳಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಿದರು.

ಪುನೀತ್‌ ಎಲೆ ಮರೆ ಕಾಯಿಯಂತೆ ದಾನ ಮಾಡಿದ್ದಾರೆ : ಇದೇ ವೇಳೆ ಮಾತನಾಡಿದ ಸಂಸದ ಜಿ.ಎಂ.ಸಿದ್ದೇಶ್ವರ್, ಪುನೀತ್‌ ರಾಜಕುಮಾರ್‌ ಎಲೆ ಮರೆ ಕಾಯಿಯಂತೆ ದಾನ ಮಾಡಿದ್ದಾರೆ. ಹಲವು ಸಂಸ್ಥೆಗಳ ಮೂಲಕ ಜನಸೇವೆ ಮಾಡಿದ್ದಾರೆ.

ಅವರ ಸೇವೆ ಕಾರ್ಯಗಳನ್ನು ನೋಡಿದಾಗ ನನಗೆ ನಾಚಿಕೆಯಾಯ್ತು, ನಾವೇನಾದ್ರೂ ₹1 ಲಕ್ಷ ದಾನ ಮಾಡಿದ್ರೆ ಟಿವಿ, ಪತ್ರಿಕೆಯಲ್ಲಿ ಪ್ರಚಾರ ಪಡಿತೀವಿ. ದಾನ ಅಂದ್ರೆ ಅವರಂತೆ ಮಾಡಬೇಕು. ಬಲಗೈಯಿಂದ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು. ಎಲ್ಲರೂ ಅದನ್ನೇ ಅನುಕರಿಸಬೇಕು ಎಂದರು.

ಓದಿ: ರಾಜ್ಯದ ಎಲ್ಲಾ ಹಳ್ಳಿಗಳ ಮನೆ ಬಾಗಿಲಿಗೆ ಜನಸೇವಕ ಯೋಜನೆ.. ಕಾರ್ಯಕ್ರಮಕ್ಕೆ ಸಿಎಂ ಬೊಮ್ಮಾಯಿ ಚಾಲನೆ

Last Updated : Nov 1, 2021, 4:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.