ETV Bharat / state

ಎಸ್ಟಿ ಸಮಾಜದ ಹೋರಾಟಕ್ಕೆ ಸಿದ್ದರಾಮಯ್ಯ ಬರಲ್ಲ ಅಂದ್ರೆ ನಾವೇನು ಮಾಡೋದು : ಸಚಿವ ಭೈರತಿ ಬಸವರಾಜ್ - Kuruba community

ಗಡಿ ವಿಚಾರದಲ್ಲಿ, ಕನ್ನಡನಾಡು ನುಡಿ ವಿಚಾರದಲ್ಲಿ ಧಕ್ಕೆಯಾದ್ರೆ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳುತ್ತೇವೆ, ನಾಳೆಯ ಬಂದ್ ಕೈಬಿಡುವಂತೆ ಕನ್ನಡ ಪರ ಸಂಘಟನೆಗಳಿಗೆ ಭೈರತಿ ಬಸವರಾಜ್ ಮನವಿ..

Byrati Basavaraj
ಭೈರತಿ ಬಸವರಾಜ್
author img

By

Published : Dec 4, 2020, 12:03 PM IST

ದಾವಣಗೆರೆ : ಕುರುಬ ಸಮುದಾಯದ ಹೋರಾಟಕ್ಕೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಬರಲ್ಲ ಅಂದ್ರೆ ನಾವೇನು ಮಾಡುವುದು ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಎಸ್​ಟಿ ಹೋರಾಟಕ್ಕೂ ಆರ್​ಎಸ್​ಎಸ್​ಗೂ ಏನೂ ಸಂಬಂಧ ಇಲ್ಲ. ಆದ್ರೆ, ನಾವು ಮಾಡುವ ಪ್ರಯತ್ನ ಮಾಡುತ್ತೇವೆ. ಕುರುಬ ಸಮಾಜವನ್ನು ಎಸ್​ಟಿಗೆ ಸೇರಿಸುವುದು ಸಿಎಂ ಹಾಗೂ ಪ್ರಧಾನ ಮಂತ್ರಿಗಳಿಗೆ ಬಿಟ್ಟ ವಿಚಾರ. ಇದರಲ್ಲಿ ಹೋರಾಟಕ್ಕೆ ಕರೆಯುವ, ಬಿಡುವ ಪ್ರಶ್ನೆಯೇ ಇಲ್ಲಾ ಎಂದರು.

ಸಚಿವ ಭೈರತಿ ಬಸವರಾಜ್

ಮುಖ್ಯಮಂತ್ರಿಗಳು ರಾಜ್ಯದ ಮರಾಠ ಜನಾಂಗಕ್ಕೆ ಮಾಡಿದ ನಿಗಮದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮರಾಠಿಗರು ನಿನ್ನೆ-ಮೊನ್ನೆ ಬಂದಿಲ್ಲ. ಅನಾದಿಕಾಲದಿಂದಲೂ ಇಲ್ಲೇ ಇದ್ದು, ಇದು ಭಾಷೆಗೆ ನಿಗಮ ಮಾಡಿಲ್ಲ, ಜನಾಂಗಕ್ಕೆ ನಿಗಮ ಮಾಡಲಾಗಿದೆ. ನಿಗಮವನ್ನು ಬೆಳಗಾವಿ ಪ್ರಕರಣಗಳನ್ನು ಇಟ್ಟುಕೊಂಡು ವಿರೋಧ ಮಾಡೋದು ಅಷ್ಟೊಂದು ಸಮಂಜಸವಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಗಡಿ ವಿಚಾರದಲ್ಲಿ, ಕನ್ನಡನಾಡು ನುಡಿ ವಿಚಾರದಲ್ಲಿ ಧಕ್ಕೆಯಾದ್ರೆ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳುತ್ತೇವೆ, ನಾಳೆಯ ಬಂದ್ ಕೈಬಿಡುವಂತೆ ಕನ್ನಡ ಪರ ಸಂಘಟನೆಗಳಿಗೆ ಭೈರತಿ ಬಸವರಾಜ್ ಮನವಿ ಮಾಡಿದರು.

ಆಪ್ತರಿಗೆ ಮಾತ್ರ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿ, ಪಕ್ಷ ಸಂಪೂರ್ಣ ಒಗ್ಗಟ್ಟಾಗಿದೆ. ನಮ್ಮಲ್ಲಿ ಯಾವುದೇ ಅಪಸ್ವರ ಇಲ್ಲ, ಪಕ್ಷದಲ್ಲಿ ಕೆಲಸ ಮಾಡಿದ ಕಾರ್ಯಕರ್ತರಿಗೆ ಸ್ಥಾನ ಸಿಕ್ಕಿದೆ ಎಂದು ಪಕ್ಷದ ನಿರ್ಧಾರ ಸಮರ್ಥಿಸಿಕೊಂಡರು.

ಓದಿ...ಕುರುಬರ ಎಸ್​ಟಿ ಹೋರಾಟ ಸಮಿತಿಗೆ ಪದಾಧಿಕಾರಿಗಳ ನೇಮಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.