ETV Bharat / state

ದಾವಣಗೆರೆ ಜಿಲ್ಲಾಸ್ಪತ್ರೆಯ ಆವರಣದಲ್ಲಿಯೇ ಕೊರೊನಾ ಆತಂಕ - Davanagere Chigateri Hospital

ಕೊರೊನಾಗೆ ಬಲಿಯಾಗುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇಂಥ ಸ್ಥಿತಿಯಲ್ಲಿ ತ್ಯಾಜ್ಯ ಹಾಕಿರುವುದರಿಂದ ಸೋಂಕು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ..

ದಾವಣಗೆರೆ ಆಸ್ಪತ್ರೆ
ದಾವಣಗೆರೆ ಆಸ್ಪತ್ರೆ
author img

By

Published : Aug 7, 2020, 3:52 PM IST

ದಾವಣಗೆರೆ : ವೈದ್ಯಕೀಯ ತ್ಯಾಜ್ಯವನ್ನು ಚಿಗಟೇರಿ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಬಿಸಾಡಿದ್ದು, ಇದು ಸಾರ್ವಜನಿಕರ ಆತಂಕಕ್ಕೆ‌ ಕಾರಣವಾಗಿದೆ.

ಮಾಸ್ಕ್, ಪಿಪಿಇ ಕಿಟ್, ಗ್ಲೌಸ್ ಸೇರಿ ಇತರೆ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಹಾಕಲಾಗಿದೆ. ಕೊರೊನಾ ಸೋಂಕು ದಿನೇದಿನೆ ಹೆಚ್ಚುತ್ತಿದೆ. ಜೊತೆಗೆ ಗಂಟಲು ದ್ರವದ ಪರೀಕ್ಷೆಗೆಂದು ಜನ ಆಸ್ಪತ್ರೆಗೆ ಹೆಚ್ಚಾಗಿ ಬರುತ್ತಿದ್ದಾರೆ. ಉಪಯೋಗಿಸಿದ ವಸ್ತುಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡದೆ ಬೇಜವಾಬ್ದಾರಿಯಿಂದ ಎಸೆಯಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಆಸ್ಪತ್ರೆಯ ಸಿಬ್ಬಂದಿ, ವೈದ್ಯರು, ಪೌರ ಕಾರ್ಮಿಕರಿಗೂ ಸೋಂಕು ತಗುಲಿದೆ. ಸೋಂಕಿತರಿಗೂ ಇಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಕೊರೊನಾಗೆ ಬಲಿಯಾಗುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇಂಥ ಸ್ಥಿತಿಯಲ್ಲಿ ತ್ಯಾಜ್ಯ ಹಾಕಿರುವುದರಿಂದ ಸೋಂಕು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಜಿಲ್ಲಾಸ್ಪತ್ರೆಯ ಆಡಳಿತ ವರ್ಗದವರು ಇತ್ತ ಗಮನ ಹರಿಸಿ ತ್ಯಾಜ್ಯ ವಿಲೇವಾರಿ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.