ETV Bharat / state

ಕೋವಿಡ್ ನಿಯಮ ಉಲ್ಲಂಘಿಸಿ ಪಾಲಿಕೆ ಮೇಯರ್ ಭರ್ಜರಿ ಬರ್ತಡೇ ಆಚರಣೆ: ವಿಡಿಯೋ ವೈರಲ್ - Davangere

ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಅಜಯ್ ಕುಮಾರ್ ನೂರಾರು ಜನರ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ.

mayor birthday Video viral
ಪಾಲಿಕೆ ಮೇಯರ್ ಅಜಯ್ ಕುಮಾರ್
author img

By

Published : Jul 7, 2020, 4:55 PM IST

ದಾವಣಗೆರೆ: ಜಿಲ್ಲೆಯ ಮೆಹಬೂಬ್ ನಗರದ ಆಂಜನೇಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಭಾನುವಾರ ಪಾಲಿಕೆ ಮೇಯರ್ ಅಜಯ್ ಕುಮಾರ್ ನೂರಾರು ಜನರ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ.

ಕೊರೊನಾ ಸೋಂಕು ತಡೆಗೆ ರಾಜ್ಯ ಸರ್ಕಾರ ಕಳೆದ ಭಾನುವಾರ ಲಾಕ್​ಡೌನ್​ಗೆ ಆದೇಶಿಸಿತ್ತು. ಆದರೆ ಅಂದು ರಾತ್ರಿ ಹುಟ್ಟುಹಬ್ಬ ಆಚರಣೆಯ ಸಂದರ್ಭದಲ್ಲಿ ನೂರಾರು ಜನರು ಪಾಲ್ಗೊಂಡು ಸಾಮಾಜಿಕ ಅಂತರವನ್ನು ಮರೆತಿದ್ದರು. ಬಾಷಾನಗರ, ಇಮಾಮ್ ನಗರ ಹಾಗೂ ಮೆಹಬೂಬ್ ನಗರ ಅಕ್ಕಪಕ್ಕದಲ್ಲಿವೆ. ಈ ಭಾಗದಲ್ಲಿ ಕೊರೊನಾ ಸೋಂಕಿತರಿದ್ದಾರೆ. ಆದರೂ ಪಾಲಿಕೆಯ ಮೇಯರ್ ಅಜಯ್ ಕುಮಾರ್ ಜನರೆಲ್ಲರನ್ನೂ ಸೇರಿಸಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ಮೂಲಕ‌ ಕಾನೂನು ಉಲ್ಲಂಘಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.‌

ಕೋವಿಡ್ ನಿಯಮ ಉಲ್ಲಂಘಿಸಿ ಪಾಲಿಕೆ ಮೇಯರ್ ಜನ್ಮ ದಿನಾಚರಣೆ

ಕೊರೊನಾ‌ ಸೋಂಕು ತಡೆಗೆ ಜನರಲ್ಲಿ‌ ಜಾಗೃತಿ ಮೂಡಿಸಬೇಕಾದ ಮೇಯರ್ ಅವರೇ ಮಾಸ್ಕ್ಅನ್ನು ಸರಿಯಾಗಿ ಧರಿಸಿರಲಿಲ್ಲ. ವೇದಿಕೆ ಮೇಲಿದ್ದವರು ಸಹ ಮಾಸ್ಕ್​ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.