ETV Bharat / state

ಮಾಯಕೊಂಡ 'ಕಸ್ಟೋಡಿಯಲ್‌ ಡೆತ್' ಪ್ರಕರಣ: ಮಹತ್ವದ ಸಾಕ್ಷ್ಯ ಕಲೆ ಹಾಕ್ತಿರುವ ಸಿಐಡಿ - Dhawangere Mayakonda Custodial Death Case

ದಾವಣಗೆರೆಯ ಮಾಯಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಸ್ಟೋಡಿಯಲ್ ಡೆತ್​ ಪ್ರಕರಣದ ತನಿಖೆಯನ್ನು ಸಿಐಡಿ ತಂಡ ಚುರುಕುಗೊಳಿಸಿದ್ದು, ಪ್ರಕರಣದ ಸಂಬಂಧ ಮಹತ್ವದ ಸಾಕ್ಷ್ಯಗಳನ್ನು ಕಲೆ ಹಾಕುತ್ತಿದೆ.

Mayakonda Custodial Death Case Update
ಘಟನೆ ನಡೆದ ಸ್ಥಳಗಳಿಗೆ ಭೇಟಿ ನೀಡಿದ ತನಿಖಾ ತಂಡ
author img

By

Published : Oct 9, 2020, 3:25 PM IST

ದಾವಣಗೆರೆ : ಮಾಯಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ "ಕಸ್ಟೋಡಿಯಲ್ ಡೆತ್'' ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ.

ಮಾಯಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯ ವಿಟ್ಟಲಾಪುರ ಗ್ರಾಮದ ಮರಳಸಿದ್ಧಪ್ಪ ಅವರ ಮರಣೋತ್ತರ ಪರೀಕ್ಷಾ ವರದಿ ಅಧಿಕಾರಿಗಳ ಕೈ ಸೇರಿದೆ. ಎಫ್​ಎಸ್​​ಎಲ್‌ ವರದಿ ಇನ್ನೂ ಬರಬೇಕಿದೆ. ಈ ನಡುವೆ ತನಿಖೆ ವೇಗಗೊಳಿಸಿರುವ ಡಿವೈಎಸ್ಪಿ ಗಿರೀಶ್ ನೇತೃತ್ವದ ತಂಡ, ಪೊಲೀಸರು ಥಳಿಸಿದ ಕಾರಣದಿಂದ ಮರಳಸಿದ್ದಪ್ಪ ಮೃತಪಟ್ಟರೇ..? ಅಥವಾ ಠಾಣೆಯಲ್ಲಿ‌ ನೇಣು ಹಾಕಿಕೊಂಡಿದ್ದಾರಾ?. ಬಳಿಕ ಪೊಲೀಸರು ಮೃತದೇಹವನ್ನು ಬಸ್ ನಿಲ್ದಾಣದಲ್ಲಿಟ್ಟು ಬಂದಿದ್ದರಾ..? ಸಿಸಿಟಿವಿ ದೃಶ್ಯಗಳನ್ನು ಡಿಲಿಟ್ ಮಾಡಲಾಗಿತ್ತಾ ಎಂಬುವುದು ಸೇರಿದಂತೆ, ಎಲ್ಲಾ ದೃಷ್ಠಿಕೋನಗಳಲ್ಲಿಯೂ ತನಿಖೆ ಮುಂದುವರಿಸಿದ್ದಾರೆ.

ಘಟನೆ ನಡೆದ ಸ್ಥಳಗಳಿಗೆ ಭೇಟಿ ನೀಡಿದ ತನಿಖಾ ತಂಡ

ಇದನ್ನೂ ಓದಿ: ಪೊಲೀಸ್ ಕಸ್ಟಡಿಯಲ್ಲಿ ವ್ಯಕ್ತಿ ಸಾವು ಪ್ರಕರಣ: ತನಿಖೆ ಚುರುಕುಗೊಳಿಸಿದ ಸಿಐಡಿ

ವಿಟ್ಟಲಾಪುರ ಗ್ರಾಮಕ್ಕೆ ತೆರಳಿದ ಸಿಐಡಿ ತಂಡ, ಮೃತ ಮರಳಸಿದ್ಧಪ್ಪ ಅವರ ಇಬ್ಬರು ಪತ್ನಿಯರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಪೊಲೀಸರು ಠಾಣೆಗೆ ಕರೆದುಕೊಂಡು ಬಂದ ವೇಳೆ‌ ಮಾಹಿತಿ ನೀಡಿದ್ದರಾ..? ಮೃತಪಟ್ಟ ವಿಷಯವನ್ನು ಎಷ್ಟೊತ್ತಿಗೆ ತಿಳಿಸಿದರು ಎಂಬ ಬಗ್ಗೆಯೂ ಅಧಿಕಾರಿಗಳು ಮರಳಸಿದ್ದಪ್ಪ ಅವರ ಪತ್ನಿಯರಿಂದ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಪ್ರಕರಣ ಸಂಬಂಧ ಅಮಾನತು ಆಗಿ ಬಂಧನಕ್ಕೊಳಗಾಗಿರುವ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಹೇಳಿಕೆ ಪಡೆಯುವ ಸಾಧ್ಯತೆ ಇದೆ. ಇನ್ನು ಮೂರು ದಿನಗಳ ಕಾಲ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಪ್ರಕರಣ ಸಂಬಂಧ ಸಿಐಡಿ ಪೊಲೀಸರಿಗೆ ಕೆಲ ಸಾಕ್ಷ್ಯಗಳು ಲಭ್ಯವಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.