ದಾವಣಗೆರೆ: ಕೆಟ್ಟುಲ ಹೋಗಿದ್ದ ಬೋರ್ವೆಲ್ ರಿಪೇರಿ ಮಾಡುವಾಗ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು, ಮತ್ತೋರ್ವನ ಸ್ಥಿತಿ ಗಂಭೀರವಾಗಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೇವರಹಳ್ಳಿ ಗ್ರಾಮದಲ್ಲಿ ನಡೆದಿದೆ. ದೇವರಹಳ್ಳಿ ಗ್ರಾಮದ ನಿವಾಸಿ ರವಿ (40) ಸಾವನ್ನಪ್ಪಿದ್ದಾರೆ. ಗಂಭೀರ ಗಾಯಗೊಂಡ ರಾಜು (35) ಆಸ್ಪತ್ರೆಗೆ ದಾಖಲಾಗಿದ್ದಾರೆೆ.
ಕೊಳವೆ ಬಾವಿಗೆ ಕಬ್ಬಿಣದ ಪೈಪ್ ಅಳವಡಿಸುವಾಗ ಪೈಪ್ ಮೇಲಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಅವಘಡ ಉಂಟಾಗಿದೆ. ದೇವರಹಳ್ಳಿ ವಿದ್ಯುತ್ ಪ್ರಸರಣದ ಕೇಂದ್ರಕ್ಕೆ ಮುತ್ತಿಗೆ ಹಾಕಿದ ಸಂಬಂಧಿಕರು ಸೂಕ್ತ ಪರಿಹಾರ ಕಲ್ಪಿಸುವಂತೆ ಬೆಸ್ಕಾಂ ಅಧಿಕಾರಿಗಳನ್ನು ಒತ್ತಾಯಿಸಿದರು. ಸ್ಥಳಕ್ಕಾಗಮಿಸಿದ ಚನ್ನಗಿರಿ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.
ಇದನ್ನೂ ಓದಿ: ಮೋದಿ ದೂರದೃಷ್ಟಿ ನಾಯಕ, ಅಮಿತ್ ಶಾ ದಕ್ಷ ನಾಯಕ: ಸಿಎಂ ಬೊಮ್ಮಾಯಿ ಬಣ್ಣನೆ