ETV Bharat / state

ರೇಣುಕಾಚಾರ್ಯ ನಕಲಿ ಜಾತಿ ಸರ್ಟಿಫಿಕೇಟ್ ವಿವಾದ: ಕ್ರಮಕ್ಕಾಗಿ ಬೀದಿಗಿಳಿದ ದಲಿತ ಪರ ಸಂಘಟನೆಗಳು - ರೇಣುಕಾಚಾರ್ಯ ನಕಲಿ ಜಾತಿ ಸರ್ಟಿಫಿಕೇಟ್ ವಿವಾದ: ಕ್ರಮಕ್ಕಾಗಿ ಬೀದಿಗಿಳಿದ ದಲಿತ ಪರ ಸಂಘಟನೆಗಳು

ರೇಣುಕಾಚಾರ್ಯ ನಕಲಿ ಜಾತಿ ಸರ್ಟಿಫಿಕೇಟ್ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘಟನೆಗಳು ದಾವಣಗೆರೆಯಲ್ಲಿ ಹೋರಾಟ ನಡೆಸಿದವು.

Dalit organizations demand for action
ರೇಣುಕಾಚಾರ್ಯ ನಕಲಿ ಜಾತಿ ಸರ್ಟಿಫಿಕೇಟ್ ವಿವಾದ
author img

By

Published : Apr 6, 2022, 6:02 PM IST

ದಾವಣಗೆರೆ: ನಕಲಿ ಜಾತಿ ಸರ್ಟಿಫಿಕೇಟ್ ವಿವಾದದ ಕಾವು‌ ದಿನೇ ದಿನೇ ಏರುತ್ತಲೇ ಇದೆ. ಶಾಸಕ ರೇಣುಕಾಚಾರ್ಯ ಹಾಗು ಅವರ ಸಹೋದರ ದ್ವಾರಕೇಶ್ವರಯ್ಯ ವಿರುದ್ಧ ದಲಿತ ಪರ ಸಂಘಟನೆಗಳು ಕೆಂಡಕಾರುತ್ತಿವೆ. ಬೇಡ ಜಂಗಮ ನಕಲಿ ಎಸ್ಸಿ ಸರ್ಟಿಫಿಕೇಟ್ ಪಡೆದ ರೇಣುಕಾಚಾರ್ಯ ಕುಟುಂಬದ ವಿರುದ್ಧ ಕಾನೂನು ಕ್ರಮಕ್ಕೆ ದಲಿತ ಸಂಘಟನೆಗಳು ಪಟ್ಟು ಹಿಡಿದು ಇಂದು ಹೊನ್ನಾಳಿಯಲ್ಲಿ ಬೃಹತ್ ಪ್ರತಿಭಟನೆ ಮಾಡಿ ತಮ್ಮ ಶಕ್ತಿ ಪ್ರದರ್ಶನ ಮಾಡಿದರು.

ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಇಡೀ ಕುಟುಂಬ ನಕಲಿ ಬೇಡ ಜಂಗಮ ಎಸ್ಸಿ ಜಾತಿ ಪ್ರಮಾಣಪತ್ರ ಪಡೆದಿರುವುದು ಜಗತ್ ಜಾಹಿರ್ ಆಗಿದೆ. ನಕಲಿ ಜಾತಿ ಸರ್ಟಿಫಿಕೇಟ್​ನ್ನು ರೇಣುಕಾಚಾರ್ಯ ಮಗಳು ಚೇತನಾ, ಅವರ ಸಹೋದರ ದ್ವಾರಕೇಶ್ವರಯ್ಯ ಕುಟುಂಬ ನಕಲಿ ಎಸ್ಸಿ ಸರ್ಟಿಫಿಕೇಟ್ ಬೆಂಗಳೂರು ಉತ್ತರ ತಾಲೂಕಿನಲ್ಲಿ ಪಡೆದಿರುವುದು ತುಂಬಿದ ಸಧನದಲ್ಲಿ ಶಾಸಕ ರೇಣುಕಾಚಾರ್ಯ ಒಪ್ಪಿಕೊಂಡು, ತಮ್ಮ ಮಗಳಿಗೆ ಅದನ್ನು ಹಿಂದಿರುಗಿಸುವಂತೆ ಒತ್ತಾಯಿಸಿದ್ದೆ ಎಂದು ಸ್ಪಷ್ಟನೆ ನೀಡಿದ್ದರು.

ರೇಣುಕಾಚಾರ್ಯ ನಕಲಿ ಜಾತಿ ಸರ್ಟಿಫಿಕೇಟ್ ವಿವಾದ

ಆದರೆ ಇದಕ್ಕೊಪ್ಪದ ದಲಿತ ಪರ ಸಂಘಟನೆಗಳು ಇಡೀ ರೇಣುಕಾಚಾರ್ಯ ಕುಟುಂಬದ ವಿರುದ್ಧ ತಿರುಗಿಬಿದ್ದಿವೆ. ಇದರಿಂದ ಪರಿಶಿಷ್ಟ ಜಾತಿ ಪರಿಶಿಷ್ಟ, ಪಂಗಡ ಮೀಸಲಾತಿ ಸಂರಕ್ಷಣಾ ಒಕ್ಕೂಟದಿಂದ ಹೊನ್ನಾಳಿಯಲ್ಲಿ ಪ್ರತಿಭಟನೆ ನಡೆಸಿ ಶಾಸಕ ರೇಣುಕಾಚಾರ್ಯ ಕುಟುಂಬದ ವಿರುದ್ಧ ಕ್ರಮಕ್ಕೆ‌ ಆಗ್ರಹಿಸಿ ಎಸಿಯವರಿಗೆ ಮನವಿ ಸಲ್ಲಿಸಿದರು.

ಇದನ್ನೂ ಓದಿ: ಶಬ್ದಮಾಲಿನ್ಯ: ಮಂಗಳೂರಿನಲ್ಲಿ 1,001 ಸ್ಥಳಗಳಿಗೆ ನೋಟಿಸ್ ಜಾರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.