ETV Bharat / state

ಪಿಎಫ್​ಐ ಬಜರಂಗದಳ ಸೇರಿ ಶಾಂತಿ ಕದಡುವ ಸಂಘಟನೆಗಳನ್ನು ಬ್ಯಾನ್ ಮಾಡ್ಬೇಕು: ಎಂ ಬಿ ಪಾಟೀಲ್

ಬಿಜೆಪಿ ಸಾಕಷ್ಟು ಭ್ರಷ್ಟಾಚಾರದಲ್ಲಿ‌ ಮುಳುಗಿದೆ. ಆದ್ದರಿಂದ ಜನ ಈ ಪೇ ಸಿಎಂ ಎಂಬ ಅಭಿಯಾನ ಆರಂಭಿಸಿದ್ದಾರೆ ಎಂದು ವರುಣ ಕ್ಷೇತ್ರದ ಶಾಸಕ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಶಾಸಕ ಎಂ ಬಿ ಪಾಟೀಲ್  ಅವರು ಮಾತನಾಡಿದರು
ಶಾಸಕ ಎಂ ಬಿ ಪಾಟೀಲ್ ಅವರು ಮಾತನಾಡಿದರು
author img

By

Published : Sep 22, 2022, 7:51 PM IST

ದಾವಣಗೆರೆ: ತಪ್ಪು ಮಾಡಿದವರ ಮೇಲೆ ದಾಳಿ ಮಾಡುವ ಹಕ್ಕು ಎನ್​ಐಎಗೆ ಇದೆ. ಪಿಎಫ್​ಐ- ಬಜರಂಗದಳ, ಶ್ರೀರಾಮ ಸೇನೆಯಂತಹ ಕೋಮು ಸೌಹಾರ್ದ ಕದಡುವ ಕೆಲಸ ಮಾಡುವ ಎಲ್ಲ ಸಂಘಟನೆಗಳನ್ನು ಬ್ಯಾನ್​​ ಮಾಡಬೇಕು ಎಂದು ಮಾಜಿ ಸಚಿವ, ಶಾಸಕ ಎಂ ಬಿ ಪಾಟೀಲ್ ಅವರು ಆಕ್ರೋಶ ವ್ಯಕ್ತಪಡಿಸಿದರು.

ದಾವಣಗೆರೆಯಲ್ಲಿ ಮಾತನಾಡಿದ ಅವರು, ಯಾರೇ ಇದ್ದರೂ ಕ್ರಮ ಕೈಗೊಳ್ಳಬೇಕು. ಅದು ಬಜರಂಗದಳ ಆಗಿರಬಹುದು, ಪಿಎಫ್ಐ ಆಗಿರಬಹುದು. ಎಲ್ಲವನ್ನು ಬ್ಯಾನ್ ಮಾಡಬೇಕು. ಅಲ್ಪಸಂಖ್ಯಾತರನ್ನು ಟಾರ್ಗೇಟ್ ಮಾಡಬೇಕು ಎನ್ನುವುದು ಎಲ್ಲರಿಗೂ ಗೊತ್ತಿದೆ. ಮೊದಲು ಮುತಾಲಿಕ್ ನನ್ನು ಬ್ಯಾನ್ ಮಾಡಬೇಕು ಎಂದು ಎಂ ಬಿ ಪಾಟೀಲ್ ಅವರು ಒತ್ತಾಯಿಸಿದರು.

ಶಾಸಕ ಎಂ ಬಿ ಪಾಟೀಲ್ ಹಾಗೂ ಯತೀಂದ್ರ ಸಿದ್ದರಾಮಯ್ಯ ಅವರು ಮಾತನಾಡಿದರು

ಪೇ ಸಿಎಂ ಅಭಿಯಾನ: ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ರಾಜ್ಯ ಸರ್ಕಾರದಲ್ಲಿ ಶೇ40ರಷ್ಟು ಕಮಿಷನ್ ಇದೆ ಎಂದು ನಾವು ಹೇಳಿದ್ವಾ?. ಕಂಟ್ರಾಕ್ಟರ್ ಅಸೋಸಿಯೇಷನ್ ಅವರು ಆರೋಪ ಮಾಡಿದ್ದು. ಹೀಗಾಗಿ, ಜನರು ಅವರ ವಿರುದ್ಧ ಪ್ರತಿಭಟನೆ ಮಾಡ್ತಾರೆ. ಪೇ ಸಿಎಂ ಅಭಿಯಾನ ಜನರ ಕೈಯಲ್ಲಿ ಇದೆ. ಜನರನ್ನು ಹತೋಟಿ ಮಾಡಲು ಸಾದ್ಯವಾಗುತ್ತಾ?.

ಪಂಚಮಸಾಲಿ ಹೋರಾಟ ನ್ಯಾಯಯುತವಾಗಿದೆ. ಪಂಚಮಸಾಲಿ ಸಮಾಜದಲ್ಲಿ ಸಾಕಷ್ಟು ಜನರು ಬಡವರು ಇದ್ದಾರೆ. ಅವರ ಹೋರಾಟಕ್ಕೆ ನಾನು ಬೆಂಬಲ ಸೂಚಿಸಿದ್ದೇನೆ‌. ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಮುಂದೆ ಸ್ವಾಮೀಜಿಗಳು ಕೂಡಿ ಮಾತುಕತೆ ನಡೆಸುತ್ತೇವೆ ಎಂದರು.

ಜನರು ಈ ಪೇ ಸಿಎಂ ಅಭಿಯಾನ ಮಾಡ್ತಿದ್ದಾರೆ: ಶಾಸಕ ಯತೀಂದ್ರ ಸಿದ್ದರಾಮಯ್ಯ: ಬಿಜೆಪಿ ಸಾಕಷ್ಟು ಭ್ರಷ್ಟಾಚಾರದಲ್ಲಿ‌ ಮುಳುಗಿದೆ. ಆದ್ದರಿಂದ ಜನ ಈ ಪೇ ಸಿಎಂ ಎಂಬ ಅಭಿಯಾನ ಆರಂಭಿಸಿದ್ದಾರೆ ಎಂದು ವರುಣ ಕ್ಷೇತ್ರದ ಶಾಸಕ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ದಾವಣಗೆರೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಶೇ 40ರಷ್ಟು ಕಮಿಷನ್ ಬಗ್ಗೆ ಗುತ್ತಿಗೆದಾರರು ಅಧ್ಯಕ್ಷರಿಗೆ ಹಾಗೂ ಪ್ರಧಾನಿಗಳಿಗೆ ಪತ್ರ ಬರೆದಿದ್ದಾರೆ. ಆದರೂ ಕ್ರಮ ಆಗಿಲ್ಲ. ಇದು ಎಲ್ಲಾ ಜನರಿಗೂ ಗೊತ್ತಾಗಲಿ ಎಂದು ಜನರು ಈ ಅಭಿಯಾನ ಮಾಡ್ತಾರೆ ಎಂದರು.

ಸಿದ್ದರಾಮಯ್ಯ ಸ್ಪರ್ಧಿಸುವ ಕ್ಷೇತ್ರ ಯಾವುದು?: ಸಿದ್ದರಾಮಯ್ಯನವರನ್ನು ಸಾಕಷ್ಟು ಕ್ಷೇತ್ರಗಳಲ್ಲಿ‌ ಚುನಾವಣೆಗೆ ಸ್ಪರ್ಧಿಸುವಂತೆ ಅಭಿಮಾನಿಗಳು ಕರೆಯುತ್ತಿದ್ದಾರೆ. ಆದರೆ ತಂದೆಯವರು ಇನ್ನು ಯಾವುದೇ ನಿರ್ಧಾರ ಮಾಡಿಲ್ಲ. ಅಕ್ಟೋಬರ್, ನವೆಂಬರ್ ಒಳಗೆ ಎಲ್ಲಿ ಸ್ಪರ್ಧಿಸುವುದಾಗಿ ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.

ಎಎಪಿಯಿಂದ ಪೇ ಎಕ್ಸ್ ಸಿಎಂ ಅಭಿಯಾನ ವಿಚಾರ: ರಾಜಕೀಯ ಪಕ್ಷ ಎಂದರೆ ಆರೋಪ ಮಾಡ್ತಾ ಇರ್ತಾರೆ. ನಾವು ಬಿಜೆಪಿ ವಿರುದ್ದ ಆರೋಪ ಮಾಡಿಲ್ಲ. ಗುತ್ತಿಗೆದಾರ ಸಂಘದವರು ಆರೋಪ ಮಾಡಿರೋದು. ಎಎಪಿ ಕೂಡ ರಾಜಕೀಯ ಪಕ್ಷವಾಗಿದ್ದರಿಂದ ಎಲ್ಲರ ಮೇಲೆ ಆರೋಪ ಮಾಡ್ತಾ ಇದ್ದಾರೆ ಎಂದರು.

ಓದಿ: ಉಗ್ರ ಚಟುವಟಿಕೆಗಳಿಗೆ ಹಣ ಫಂಡಿಂಗ್​ ಆರೋಪ: ಯಾಸಿರ್​ ಹಸನ್​ ಬಂಧಿಸಿದ ಎನ್​ಐಎ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.