ದಾವಣಗೆರೆ: ಶಾಲೆಯ ಪರವಾನಗಿ ನವೀಕರಣಕ್ಕೆ ಲಂಚ ಪಡೆಯುವ ಸಂದರ್ಭದಲ್ಲಿ ಹರಿಹರ ಶಿಕ್ಷಣಾಧಿಕಾರಿ ಸಿದ್ದಪ್ಪ ಎಂಬವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಇವರು ನಗರದ ವಿದ್ಯಾದಾಹಿನಿ ಶಾಲೆಯ ಮುಖ್ಯಸ್ಥ ರಘುನಾಥ್ ಅವರಿಗೆ ಸೇರಿದ ಸಿಬಿಎಸ್ಸಿ ಶಾಲೆಯ ಪರವಾನಗಿ ನವೀಕರಣಕ್ಕಾಗಿ 15 ಸಾವಿರ ರೂಪಾಯಿ ಲಂಚ ಕೇಳಿದ್ದರು. ತಮ್ಮ ಕಚೇರಿಯಲ್ಲಿ ಹಣ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ.
ಕೆಲವು ದಿನಗಳ ಹಿಂದೆ 10 ಸಾವಿರ ರೂ ಲಂಚವನ್ನು ಆರೋಪಿ ಅಧಿಕಾರಿ ಪಡೆದಿದ್ದರು ಎನ್ನಲಾಗಿದೆ. ಲೋಕಾಯುಕ್ತ ಎಸ್ಪಿ ಎಂ.ಎಸ್.ಕೌಲಾಪುರೆ ನೇತೃತ್ವದಲ್ಲಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ಆಂಜನೇಯ ಹಾಗೂ ಸಿಬ್ಬಂದಿ ಬಿಇಒ ಸಿದ್ದಪ್ಪರನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಲೋಕಾಯುಕ್ತ ಬಲೆಗೆ ಬಿದ್ದ ಭೂ ಅಧೀಕ್ಷಕ: ರೈತನಿಂದ ಲಂಚ ಪಡೆಯುತ್ತಿದ್ದ ಚಿತ್ತಣ್ಣ ಪಾಟೀಲ