ETV Bharat / state

ಲಂಚ ಪಡೆಯುತ್ತಿದ್ದ ದೇವಿಕೆರೆ ಪಂಚಾಯಿತಿ ಪಿಡಿಒ ಮೇಲೆ ಲೋಕಾಯುಕ್ತ ದಾಳಿ - ಈಟಿವಿ ಭಾರತ ಕನ್ನಡ

ಲಂಚ ಸ್ವೀಕರಿಸುತ್ತಿದ್ದ ಪಿಡಿಒ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

Kn_dvg
ಪಿಡಿಒ ಬಸವರಾಜ್
author img

By

Published : Nov 25, 2022, 8:44 PM IST

ದಾವಣಗೆರೆ: ಲಂಚ ಸ್ವೀಕರಿಸುತ್ತಿದ್ದ ವೇಳೆ ಪಿಡಿಒ ಒಬ್ಬರು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ಶುಕ್ರವಾರ ನಡೆದಿದೆ. ಜಿಲ್ಲೆಯ ಜಗಳೂರು ತಾಲೂಕಿನ ದೇವಿಕೆರೆ ಗ್ರಾಮ ಪಂಚಾಯಿತಿ ಪಿಡಿಒ ಬಸವರಾಜ್​, ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.

ಪಿಡಿಒ ಬಸವರಾಜ್ ಜಗಳೂರು ತಾಲೂಕಿನ ಮೆದಿಕೆರೆನಹಳ್ಳಿ ಗ್ರಾಮದ ನಿವಾಸಿ ಶಾಂತಕುಮಾರ್ ಅವರ ತಾಯಿಯಾದ ಶ್ರೀಮತಿ ಶಾರದಮ್ಮ ಇವರ ಹೆಸರಿನಲ್ಲಿರುವ ಮನೆಯ ಇ - ಸ್ವತ್ತು ಮಾಡಿಕೊಡುವ ಸಂಬಂಧ 10,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಅದರಂತೆ 5,000 ರೂ. ಲಂಚದ ಹಣವನ್ನು ದಾವಣಗೆರೆಯ ಮಹೇಶ್ ಪ್ಲಾಜ್ ನೆಲಮಡಿಯಲ್ಲಿ ಪಿಡಿಒ ಬಸವರಾಜ್​ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಕಾರ್ಯಾಚರಣೆಯನ್ನು ದಾವಣಗೆರೆ ಲೋಕಾಯುಕ್ತ ಪೊಲೀಸ್‌ ಅಧೀಕ್ಷಕರಾದ ಎಂ.ಎಸ್‌.ಕೌಲಾಪೂರೆ ಅವರ ನೇತೃತ್ವದಲ್ಲಿ ನಡೆಸಲಾಗಿತ್ತು.

ಇದನ್ನು ಓದಿ: ಮಹಿಳಾ ಕೆಎಎಸ್ ಅಧಿಕಾರಿ ಮೇಲೆ ಲೋಕಾಯುಕ್ತ ಪೊಲೀಸರಿಂದ ದಾಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.