ETV Bharat / state
ಸರ್ಕಾರಿ ಕೆಲಸದ ಆಮಿಷ: ಮಾಜಿ ಸಿಎಂ ಸಿದ್ದರಾಮಯ್ಯ ಮಗನ ಸ್ನೇಹಿತರೆಂದು ಹೇಳಿ ₹ 60 ಲಕ್ಷ ವಂಚನೆ - undefined
ತಮ್ಮ ಮಕ್ಕಳನ್ನು ಸರ್ಕಾರಿ ಕೆಲಸಕ್ಕೆ ಸೇರಿಸಬೇಕೆಂಬ ಆಸೆಯಿಂದ ಕೂಡಿಟ್ಟಿದ್ದ ಹಣ ಕೊಟ್ಟ ಪೋಷಕರು ಈಗ ಕೈ ಕೈ ಹಿಸುಕಿಕೊಳ್ಳುವಂತಾಗಿದೆ.

ಪತ್ರಿಕಾಗೋಷ್ಠಿ
By
Published : Jun 13, 2019, 9:16 PM IST
| Updated : Jun 14, 2019, 8:10 AM IST
ದಾವಣಗೆರೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ದಿ. ರಾಕೇಶ್ ಸಿದ್ದರಾಮಯ್ಯ ಅವರ ಸ್ನೇಹಿತರು ಎಂದು ಹೇಳಿಕೊಂಡು ಉದ್ಯೋಗಾಂಕ್ಷಿಗಳಿಂದ ₹ 60 ಲಕ್ಷ ಪಡೆದು ವಂಚಿಸಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯಶವಂತಪ್ಪ ಮತ್ತು ಹುಚ್ಚೇಗೌಡ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹಣ ಕೊಟ್ಟು ಮೋಸ ಹೋದ ಉದ್ಯೋಗಾಂಕ್ಷಿಗಳ ಪಾಲಕರು ಅಳಲು ತೋಡಿಕೊಂಡರು. ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಬೆನಕನಹಳ್ಳಿ ಗ್ರಾಮದ ಬಿ.ಎಂ.ಮಹೇಶ್ ಬಿನ್ ಮಾದೇಗೌಡ, ಬಿ.ಎಂ.ವಿಜಿಕುಮಾರ್ ಯಾನೆ ರವಿಕುಮಾರ್, ಬಿ.ಎಂ.ನಟರಾಜ್ ಎಂಬುವವರು ಹಣ ಪಡೆದು ವಂಚಿಸಿದ್ದಾರೆ. ರಾಜಕಾರಣಿಗಳ ಹೆಸರು ಬಳಸಿಕೊಂಡು, ದುಡ್ಡು ಕೊಟ್ಟರೆ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ಹಣ ಪಡೆದಿದ್ದಾರೆ. ಈ ಮೂಲಕ ಹತ್ತು ಮಂದಿಯಿಂದ ತಲಾ 5 ಲಕ್ಷ ಪಡೆದುಕೊಂಡರು ಎಂದು ಮಾಹಿತಿ ನೀಡಿದ್ರು.
ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಂಘಟನೆಯ ವಿಭಾಗೀಯ ಸಂಚಾಲಕ ಎ.ಡಿ.ಯಶವಂತಪ್ಪ ಮಾತನಾಡಿ, ಕೆಲಸದ ನಿಮಿತ್ತ ಮೈಸೂರಿಗೆ ತೆರಳಿದ್ದಾಗ ವಿಜಿಕುಮಾರ್, ಮಹೇಶ್ ಮತ್ತು ನಟರಾಜ್ ಪರಿಚಯವಾಯಿತು. ಅವರೊಂದಿಗೆ ಮಾತನಾಡುತ್ತಾ ಕೆಲಸದ ವಿಚಾರದ ಬಗ್ಗೆ ಮಾತಾಡಿದರು. ಬಳಿಕ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಪರಿಚಯವಿದೆ. ನಿಮ್ಮ ಮಗನಿಗೆ ಮತ್ತು ಸ್ನೇಹಿತರ ಮಕ್ಕಳಿಗೆ ಸರ್ಕಾರದ ಹುದ್ದೆ ಕೊಡಿಸುತ್ತೇವೆ. ಸ್ಪಲ್ಪ ಖರ್ಚಾಗುತ್ತದೆ ಎಂದು ನಂಬಿಸಿ ಹಣ ಪಡೆದುಕೊಂಡರು. ಬಳಿಕ ಅವರು ಸಂಪರ್ಕಕ್ಕೆ ಸಿಗಲಿಲ್ಲ. ಕೆಲಸ ಕೊಡಿಸಿ ಅಥವಾ ಹಣ ವಾಪಸ್ ಕೊಡಿ ಎಂದು ಆರೋಪಿಗಳ ಗ್ರಾಮಕ್ಕೆ ಹೋಗಿ ಕೇಳಿದ್ದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದರು. ಮೇ 5ರಂದು ದಾವಣಗೆರೆ ಎಸ್ಪಿ ಮತ್ತು ಹೊನ್ನಾಳಿ ಪೊಲೀಸರಿಗೆ ದೂರು ಕೊಟ್ಟಿದ್ದೇವೆ ಎಂದು ತಿಳಿಸಿದರು.

Intro:KN_DVG_02_13_DHOKHA_SCRIPT_7203307_YOGARAJ
REPORTER : YOGARAJ
ಸರ್ಕಾರಿ ಕೆಲಸಕ್ಕೆ ಸೇರ್ಬೇಕು ಅಂದ್ಕೊಳ್ಳೋರು ನೋಡ್ಲೇಬೇಕಾದ ಸ್ಟೋರಿ...!
ದಾವಣಗೆರೆ : ಸರ್ಕಾರಿ ಕೆಲಸ ಸಿಗುತ್ತೆ ಅಂದ್ರೆ ಯಾರು ಬಿಡ್ತಾರೆ ಹೇಳಿ. ಹಣ ಕೊಟ್ಟಾದರೂ ಗಿಟ್ಟಿಸಿಕೊಳ್ಳಬೇಕು ಎಂದುಕೊಳ್ಳುವವರೇ ಹೆಚ್ಚು. ಆದ್ರೆ, ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು
ಜಿಲ್ಲೆಯ ಹೊನ್ನಾಳಿ ತಾಲೂಕಿನ ಹತ್ತು ಮಂದಿಗೆ ಮೂವರು ಪಂಗನಾಮ ಹಾಕಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಬೆನಕನಹಳ್ಳಿ ಗ್ರಾಮದವರಾದ ಬಿ. ಎಂ. ಮಹೇಶ್ ಬಿನ್ ಮಾದೇಗೌಡ, ಬಿ. ಎಂ. ವಿಜಿಕುಮಾರ್ ಯಾನೆ ರವಿಕುಮಾರ್, ಬಿ. ಎಂ. ನಟರಾಜ್ 4
ಎಂಬುವವರ ಮೇಲೆ ಈ ಆರೋಪ ಮಾಡಲಾಗಿದೆ. ಸರ್ಕಾರಿ ಕೆಲಸ ಕೊಡಿಸುತ್ತೇವೆ, ನಾವು ಮಾಜಿ ಸಿಎಂ ಸಿದ್ದರಾಮಯ್ಯ ಪುತ್ರ ರಾಕೇಶ್ ಸಿದ್ದರಾಮಯ್ಯ ಸ್ನೇಹಿತರು. ಹಣ ಕೊಟ್ಟರೆ ನಿಮ್ಮ ಕೆಲಸ ಆದಂತೆ
ಎಂದು ನಂಬಿಸಿ ಲಕ್ಷಗಟ್ಟಲೇ ಹಣ ತೆಗೆದುಕೊಂಡ ಆರೋಪ ಮಾಡಲಾಗಿದೆ.
ಕೆ. ವೈ. ಮಾರುತಿ, ಎನ್. ಕುಮಾರ್, ನವೀನ್, ಗದ್ದಿಗೇಶ್, ದ್ಯಾಮಪ್ಪ, ಪ್ರವೀಣ್, ಜಿ. ಎಸ್. ಪ್ರವೀಣ್, ಮಂಜು ಗೋಣಿಗೆರೆ, ಶಿವಕುಮಾರ್, ಸಂದೀಪ ಕುಮಾರ್ ಪೋಷಕರಿಂದ ಬರೋಬ್ಬರಿ 60 ಲಕ್ಷ
ರೂಪಾಯಿಯನ್ನು ಪಡೆಯಲಾಗಿದೆ. ಒಬ್ಬೊಬ್ಬರಿಂದ ಐದು ಲಕ್ಷ, ಎಂಟು ಲಕ್ಷ ರೂಪಾಯಿಯಂತೆ ಈ ಮೂವರು ತೆಗೆದುಕೊಂಡಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಂಘಟನೆಯ
ವಿಭಾಗೀಯ ಸಂಚಾಲಕ ಎ. ಡಿ. ಯಶವಂತಪ್ಪ ಆರೋಪಿಸಿದ್ದಾರೆ.
ಹಣ ಕೊಟ್ಟು ಮೋಸ ಹೋದ ಬಾಲಕರ ಪಾಲಕರು ದಾವಣಗೆರೆಗೆ ಬಂದು ಪತ್ರಿಕಾಗೋಷ್ಛಿ ನಡೆಸಿದರು. ಈ ವೇಳೆ ಮಾತನಾಡಿದ ಯಶವಂತಪ್ಪ, ನಾನು ಮೈಸೂರಿಗೆ ಕೆಲಸದ ನಿಮಿತ್ತ ತೆರಳಿದಾಗ
ವಿಜಿಕುಮಾರ್, ಮಹೇಶ್ ಮತ್ತು ನಟರಾಜ್ ಪರಿಚಯವಾಯಿತು. ಬಳಿಕ ತನ್ನ ಮಗನಿಗೂ, ಸ್ನೇಹಿತರ ಮಕ್ಕಳಿಗೆ ಸರ್ಕಾರಿ ಕೆಲಸ ಕೊಡಿಸುವಂತೆ ಕೇಳಿಕೊಂಡೆ. ಆಗ ಮಕ್ಕಳ ದಾಖಲೆಗಳು ಮತ್ತು ಹಣ
ಕೊಟ್ಟರೆ ಕೆಲಸ ಆಗುತ್ತೆ ನಂಬಿಸಿ ಲಕ್ಷಾಂತರ ರೂಪಾಯಿ ಪಡೆದಿದ್ದಾರೆ ಎಂದು ದೂರಿದರು.
ಕೆಲಸ ಕೊಡಿಸದಿದ್ದಾಗ ಸಂಪರ್ಕಿಸಿದರೆ ಸರಿಯಾಗಿ ಮಾತನಾಡಿಲ್ಲ. ಇದರಿಂದ ಅನುಮಾನಗೊಂಡು ಪೋಷಕರು ಸರ್ಕಾರಿ ಕೆಲಸ ಕೊಡಿಸಿ, ಇಲ್ಲವೇ ಹಣ ವಾಪಸ್ ಕೊಡಿ ಅಂತಾ ಹೇಳಿಕೊಂಡು ಮಹೇಶ್,
ವಿಜಿಕುಮಾರ್, ರವಿಕುಮಾರ್ ಸ್ವಂತ ಊರಾದ ಬೆನಕನಹಳ್ಳಿ ಗ್ರಾಮಕ್ಕೆ ಹೋಗಿದ್ದೆವು. ಆಗ ನಾವು ಮಾಜಿ ಸಿಎಂ ಸಿದ್ದರಾಮಯ್ಯರ ಸಂಬಂಧಿಕರು ಅಂತಾ ಹೇಳಿ ಆವಾಜ್ ಹಾಕಿ ಕೊಲೆ ಬೆದರಿಕೆ ಹಾಕಿದ್ದಾರೆ.
ಈ ಸಂಬಂಧ ಕಳೆದ ಮೇ ತಿಂಗಳ 5 ನೇ ತಾರೀಖಿನಂದು ದಾವಣಗೆರೆ ಎಸ್ಪಿ ಮತ್ತು ಹೊನ್ನಾಳಿ ಪೊಲೀಸರಿಗೆ ದೂರು ಕೊಟ್ಟಿದ್ದೆವು ಎಂದು ತಿಳಿಸಿದ್ದಾರೆ.
ಇನ್ನು ಮೋಸ ಹೋದವರು ಕೇವಲ ದಾವಣಗೆರೆ ಜಿಲ್ಲೆಯವರು ಮಾತ್ರವಲ್ಲ, ಮಂಡ್ಯ ಜಿಲ್ಲೆಯ ಹಾರೋಹಳ್ಳಿಯ ಹುಚ್ಚೇಗೌಡರಿಗೂ ವಿಜಿಕುಮಾರ್, ಮಹೇಶ್ ಕೆಲಸ ಕೊಡಿಸುವುದಾಗಿ ಹೇಳಿ ಪಂಗನಾಮ
ಹಾಕಿದ್ದಾರೆ. ಹೊನ್ನಾಳಿ ಪೊಲೀಸರು ದೂರು ದಾಖಲಾದ ಬಳಿಕ ಮಹೇಶ್ ನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದು, ಬಳಿಕ ಜಾಮೀನಿನ ಮೂಲಕ ತೆರಳಿದ್ದಾನೆ.
ಈ ವಿಷಯ ಗೊತ್ತಾಗುತ್ತಿದ್ದಂತೆ ಹುಚ್ಚೇಗೌಡ ಹೊನ್ನಾಳಿಯಲ್ಲಿ ಮೋಸ ಹೋದವರನ್ನು ಸಂಪರ್ಕಿಸಿದ್ದಾರೆ. ತಮಗಾದ ಮೋಸವನ್ನು ಹೇಳಿಕೊಂಡಿದ್ದಾರೆ. ದಾವಣಗೆರೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಹುಚ್ಚೇಗೌಡ,
ಇದೇ ರೀತಿಯಲ್ಲಿ ಇನ್ನೂ ಹಲವರಿಗೆ ಮೋಸ ಮಾಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ತಮ್ಮ ಮಕ್ಕಳನ್ನು ಸರ್ಕಾರಿ ಕೆಲಸಕ್ಕೆ ಸೇರಿಸಬೇಕೆಂದುಕೊಂಡು ಕೂಡಿಟ್ಟಿದ್ದ ಹಣ ಕೊಟ್ಟ ಪೋಷಕರು ಈಗ ಕೈಕೈ ಹಿಸುಕಿಕೊಳ್ಳುವಂತಾಗಿದೆ. ರಾಜಕಾರಣಿಗಳ ಹೆಸರು ಹೇಳಿಕೊಂಡು ಮೋಸ ಮಾಡುವುದು
ಹೊಸದೇನಲ್ಲ. ಆದ್ರೆ, ಮಾಜಿ ಸಿಎಂ ಸಿದ್ದರಾಮಯ್ಯರ ಪುತ್ರ ರಾಕೇಶ್ ಸಿದ್ದರಾಮಯ್ಯರ ಸ್ನೇಹಿತರು ಅಂತಾ ಹೇಳಿಕೊಂಡು ಮೋಸ ಮಾಡಿರುವುದನ್ನು ನೋಡಿದರೆ ವಂಚಕರ ವಂಚನೆ ಯಾವ ಮಟ್ಟಿಗೆ ಇದೆ ಅಂತಾ
ಊಹಿಸಲು ಆಗುತ್ತಿಲ್ಲ. ಕೊಟ್ಟೋನು ಕೋಡಂಗಿ ಇಸ್ಕೊಂಡೋನು ಈರಭದ್ರ ಎಂಬಂತಾಗಿದೆ ಪೋಷಕರ ಪರಿಸ್ಥಿತಿ.
ಬೈಟ್- 01
ಬೈಟ್- ಎ. ಡಿ. ಯಶವಂತಪ್ಪ, ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಮಿತಿಯ ವಿಭಾಗೀಯ ಸಂಚಾಲಕ (ಬೈಟ್-01)
ಬೈಟ್-02
ಬೈಟ್- ಹುಚ್ಚೇಗೌಡ , ಮೋಸ ಹೋದವರು (ಬೈಟ್-02)
Body:KN_DVG_02_13_DHOKHA_SCRIPT_7203307_YOGARAJ

ಬೈಟ್- ಹುಚ್ಚೇಗೌಡ , ಮೋಸ ಹೋದವರು (ಬೈಟ್-02)Conclusion:
Last Updated : Jun 14, 2019, 8:10 AM IST