ETV Bharat / state

ಜಾತಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ಕುಂಬಾರ ಸಮಾಜ ಮನವಿ

ಕುಂಬಾರ ಸಮಾಜದ ವಿದ್ಯಾರ್ಥಿಗಳು, ಉದ್ಯೋಗ ಅಕಾಂಕ್ಷಿಗಳು ಸರ್ಕಾರದ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ತಾಲೂಕು ಆಡಳಿತದವರು ಮಾಡುತ್ತಿರುವ ಈ ಪ್ರಕ್ರಿಯೆಯು ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬ ಗಾದೆ ಮಾತನ್ನು ನೆನಪಿಸುವಂತಿದೆ..

Kumbara society
Kumbara society
author img

By

Published : Sep 21, 2020, 5:43 PM IST

ಹರಿಹರ : ದಾಖಲಾತಿಗಳಲ್ಲಿರುವಂತೆ ಜಾತಿ ಪ್ರಮಾಣ ಪತ್ರ ನೀಡಲು ಆಗ್ರಹಿಸಿ ಕುಂಬಾರ ಯುವ ಸೇನೆ, ಅಂಬೇಡ್ಕರ್ ಸೇವಾ ಸಮಿತಿ ಕಾರ್ಯಕರ್ತರು ಗ್ರೇಡ್-2 ತಹಶೀಲ್ದಾರ್ ಚೆನ್ನವೀರಸ್ವಾಮಿಯವರಿಗೆ ಮನವಿ ನೀಡಿದರು.

ಮನವಿ ಸಲ್ಲಿಸಿ ಮಾತನಾಡಿದ ಪದಾಧಿಕಾರಿಗಳು, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡಲು ಶಾಲಾ ದಾಖಲಾತಿಗಳಲ್ಲಿರುವ ಮಾಹಿತಿ ಅನುಸರಿಸುವುದು ಸಾಮಾನ್ಯ. ಆದರೆ, ಶಾಲಾ ದಾಖಲಾತಿ ಅಥವಾ ಈ ಹಿಂದೆ ಪಡೆದ ಜಾತಿ ಪ್ರಮಾಣ ಪತ್ರ ನೀಡಿದ್ರೂ ಕುಂಬಾರ ಸಮಾಜದ ಅಭ್ಯರ್ಥಿಗಳ ಅರ್ಜಿಗಳನ್ನು ತಡ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಇದರಿಂದ ಕುಂಬಾರ ಸಮಾಜದ ವಿದ್ಯಾರ್ಥಿಗಳು, ಉದ್ಯೋಗ ಅಕಾಂಕ್ಷಿಗಳು ಸರ್ಕಾರದ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ತಾಲೂಕು ಆಡಳಿತದವರು ಮಾಡುತ್ತಿರುವ ಈ ಪ್ರಕ್ರಿಯೆಯು ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬ ಗಾದೆ ಮಾತನ್ನು ನೆನಪಿಸುವಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮನವಿ ಸ್ವೀಕರಿಸಿದ ಗ್ರೇಡ್-2 ತಹಸೀಲ್ದಾರ್ ಚೆನ್ನವೀರಸ್ವಾಮಿಯವರು, ಬೇಡಿಕೆಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದರು. ಈ ವೇಳೆ ಈರಪ್ಪ ಕುಂಬಾರ, ಕೆ.ಶಂಕರಪ್ಪ, ಎನ್.ಗಣೇಶಪ್ಪ, ಕೆ ಬಿ ಕರಿಬಸಪ್ಪ, ನಂದಿಮನಿ ಗಣೇಶಪ್ಪ, ಮಲ್ಲಿಕಾರ್ಜುನ್, ಟಿ.ರುದ್ರೇಶಪ್ಪ, ಬಿ.ಚೈತ್ರ, ಎಫ್.ವೃಂದಾ, ಆರ್.ಶ್ರೀನಿವಾಸ್, ಅಣ್ಣಪ್ಪ ಅಜ್ಜೇರ್ ಇತರರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.