ದಾವಣಗೆರೆ : ಸಿದ್ದರಾಮಯ್ಯ ಕುರುಬರ ಎಸ್ಟಿ ಮೀಸಲಾತಿ ಹೋರಾಟದಿಂದ ಎಷ್ಟು ದಿನ ದೂರವಿರುತ್ತಾರೋ ನೋಡೋಣ ಎಂದು ಸಚಿವ ಕೆ ಎಸ್ ಈಶ್ವರಪ್ಪ, ಮಾಜಿ ಸಿಎಂ ಅವರನ್ನ ಕಿಚಾಯಿಸಿಸಿದ್ದಾರೆ.
ದಾವಣಗೆರೆಯಲ್ಲಿ ನಡೆದ ಕುರುಬ ಎಸ್ಟಿ ಮೀಸಲಾತಿ ಕುರಿತ ಜನ ಜಾಗೃತಿ ಸಮಾವೇಶದ ವೇದಿಕೆಯಲ್ಲಿ ಮಾತನಾಡಿದ ಅವರು, ಎಲ್ಲಾ ಪಕ್ಷದ ರಾಜಕೀಯ ನಾಯಕರನ್ನು ಒಂದೇ ವೇದಿಕೆಗೆ ತಂದ ಕೀರ್ತಿ ಕಾಗಿನೆಲೆ ಶ್ರೀಗಳಿಗೆ ಸಲ್ಲುತ್ತದೆ.
ಒಂದು ಕಡೆ ನಾನು ಇನ್ನೊಂದು ಕಡೆ ರೇವಣ್ಣ, ಮತ್ತೊಂದು ಕಡೆ ಬಂಡೆಪ್ಪ, ಅದ್ಯಾಕೆ ಸಿದ್ದರಾಮಯ್ಯ ದೂರವಿದ್ದಾರೋ ಗೊತ್ತಿಲ್ಲ. ಎಷ್ಟು ದಿನ ದೂರವಿರುತ್ತಾರೆ ನೋಡೋಣ ಎಂದರು. 70 ಲಕ್ಷ ಕುರುಬರಿಗೆ ಎಸ್ಟಿ ಮೀಸಲಾತಿ ಸಿಗಬೇಕು ಎನ್ನುವುದೇ ನಮ್ಮ ಧ್ಯೇಯವಾಗಿದೆ. ರಾಜಕೀಯವನ್ನು ಹೊರಗಿಟ್ಟು ಈ ಹೋರಾಟ ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರಕ್ಕೆ ಒಂದು ಅರ್ಜಿ ಸಲ್ಲಿಸಿದ್ರೆ ಮೀಸಲಾತಿ ದೊರೆಯುವುದಿಲ್ಲ.
ಹೋರಾಟ ಮಾಡದೇ ಯಾವ ಸರ್ಕಾರವು ಮೀಸಲಾತಿ ಕೊಡುವುದಿಲ್ಲ. ಅಮಿತಾ ಶಾ, ಮೋದಿ, ಸಂತೋಷ ಜೀ ಅವರನ್ನೂ ಭೇಟಿ ಮಾಡಿ ಬಂದಿದ್ದೇವೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದೇ ಮೀಸಲಾತಿ ಜಾರಿಗೊಳಿಸುತ್ತೇವೆ. ಇದು ಶತಃಸಿದ್ಧ ಎಂದು ಸಚಿವ ಈಶ್ವರಪ್ಪ ಶಪತ ಮಾಡಿದರು.